ಬಿದಿರು ಬಹು ಉಪಯೋಗಿ. ಪೀಠೋಪಕರಣ, ಚಾಪೆ, ಮ್ಯಾಟ್, ಪೇಪರ್, ಅಗರಬತ್ತಿ, ತೊಟ್ಟಿಲು, ಏಣಿ ಸೇರಿದಂತೆ ಉಪ್ಪಿನಕಾಯಿ ತಯಾರಿಸುವ ಬಿದಿರಿನ ತಳಿಗಳಿವೆ ಎಂದರೆ ಅಚ್ಚರಿಯಾಗದೆ ಇರದು. ಹೀಗಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
ಪೋವಾಸಿ (ಕ್ಟಿಛ್ಛಜಛಜ) ಕುಟುಂಬಕ್ಕೆ ಸೇರಿದ ಬಿದಿರು ವಾಣಿಜ್ಯ ಬೆಳೆಯಾಗಿ ಇತ್ತೀಚೆಗೆ ರೈತರ ಜಮೀನುಗಳಲ್ಲಿ ತಳವೂರುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಬಿದಿರು ಉತ್ಪಾದನೆ ಮಾಡುವ ದೇಶ ಚೀನಾ. ನಂತರದ ಸ್ಥಾನದಲ್ಲಿ ಭಾರತವಿದೆ. ವಿಶ್ವದಲ್ಲಿ 1600ಕ್ಕೂ ಮಿಗಿಲಾದ ಬಿದಿರಿನ ತಳಿಗಳಿವೆಯಂತೆ! ಭಾರತದಲ್ಲೂ 150ಕ್ಕೂ ಅಧಿಕ ತಳಿಗಳಿವೆ. ಬಿದಿರು ಬೆಳೆಯಲು ರೈತರಿಗೆ ಸಹಾಯಧನ ನೀಡುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಬೆಳೆಯುವ ವಿಧಾನ
ಬಿದಿರನ್ನು ಏಕ ಬೆಳೆಯಾಗಿ ಅಥವಾ ಜಮೀನಿನ ಬದುವಿನಲ್ಲಿ ಬೆಳೆಯಬಹುದು. ಆಯಾ ಮಣ್ಣು, ವಾತಾವರಣ ಆಧರಿಸಿ ಅಲ್ಲಿನ ಹವಾಮಾನಕ್ಕನುಗುಣವಾಗಿ ಬೇರೆ- ಬೇರೆ ತಳಿಗಳನ್ನು ಬೆಳೆಯಬಹುದು. ಏಕಬೆಳೆಯಾಗಿ ಬೆಳೆಯಾಗಿ ಬೆಳೆಯುವುದಾದರೆ 5್ಢ5 ಮೀಟರ್ ಅಂತರದಲ್ಲಿ ಬಿದಿರನ್ನು ನಾಟಿ ಮಾಡಬೇಕು. ಹನಿ ನೀರಾವರಿ ಇದ್ದರೆ ಉತ್ತಮ. ಪ್ರತಿದಿನ ನೀರು ಹಾಯಿಸಬೇಕು. ಹೆಚ್ಚು ನೀರು ಕೊಟ್ಟಷ್ಟು ಇಳವರಿ ಜಾಸ್ತಿಯಾಗುತ್ತದೆ. ನಾಟಿ ಮಾಡಿದ 4 ವರ್ಷದ ನಂತರ ಕಟಾವು ಮಾಡುವುದು ಪ್ರಶಸ್ತ. ಮಾರುಕಟ್ಟೆ ಅನುಕೂಲ ನೋಡಿಕೊಂಡು ಕಟಾವು ಮಾಡುವುದು ಸೂಕ್ತ.
ಸಬ್ಸಿಡಿ ಸಿಗುತ್ತೆ
ಬಿದಿರು ಬೆಳೆಯಲು ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಹೆಕ್ಟೇರ್‌ಗೆ 30 ಸಾವಿರ ಸಹಾಯಧನ ನೀಡುತ್ತಿದೆ. ಸಹಾಯಧನವನ್ನು 4 ಕಂತುಗಳಲ್ಲಿ ನೀಡುತ್ತದೆ. ಜತೆಗೆ ನಾಟಿ ಮಾಡಲು ಅಗತ್ಯ ಬಿದಿರನ್ನು ಪೂರೈಸುತ್ತದೆ. ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ರಾಷ್ಟ್ರೀಯ ಬಂಬೂ ಮಿಷನ್ ಕಚೇರಿ(080- 23563931) ಸಂಪರ್ಕಿಸಿ ಮಾಹಿತಿ ಪಡೆಯಬಹುದು.