ಕೃಷಿ-ಪರಿಸರ

ಪಾಲಕ್ ಸೊಪ್ಪು

ಚಿಕ್ಕ ಹಿಡುವಳಿ, ಖಾಲಿ ನಿವೇಶನ ಮತ್ತು ಹಿತ್ತಲು ಇದ್ದವರು ಸೊಪ್ಪು ಬೆಳೆದು ಲಾಭ ಗಳಿಸಬಹುದು. ಯಾಕೆಂದರೆ ಸೊಪ್ಪು ಬೆಳೆಯಲು ಜಾಸ್ತಿ ಜಾಗ, ನಿರ್ವಹಣೆಯ ಅಗತ್ಯ ಇರುವುದಿಲ್ಲ. ಜತೆಗೆ ಅಲ್ಪಾವಧಿಯಲ್ಲೇ ಫಸಲು ಕೈಗೆ ಬರುತ್ತದೆ. ಇಂಥ ಲಾಭದಾಯಕ ಸೊಪ್ಪು ಬೆಳೆಗಳಲ್ಲಿ ಪಾಲಕ್ ಪ್ರಮುಖವಾದುದು. ಚೆನೊಪೋಡಿಯೆಸ್(ಝಜಟ್ಟಿಠ್ಟಜ್ಝಛ್ಛಜಛಜ) ಕುಟುಂಬಕ್ಕೆ ಸೇರಿರುವ ಪಾಲಕ್ ಸೊಪ್ಪಿನಲ್ಲಿ ವಿಟಮಿನ್ 'ಎ' ಮತ್ತು 'ಸಿ' ಯಥೇಚ್ಛ.
ಬೆಳೆಯುವ ವಿಧಾನ
ನೀರಾವರಿಯಾಶ್ರಿತವಾಗಿ ವರ್ಷದ ಎಲ್ಲ ತಿಂಗಳಲ್ಲೂ ಪಾಲಕ್ ಸೊಪ್ಪನ್ನು ಬೆಳೆಯಬಹುದು. ಮೊದಲು ಜಮೀನು ಹದ ಮಾಡಿದ ಬಳಿಕ ಸಾಲಿನಿಂದ ಸಾಲಿಗೆ 1 ಅಡಿ ಅಂತರದಲ್ಲಿ ಬೀಜ ಬಿತ್ತಬೇಕು. ಬೀಜದಿಂದ ಬೀಜಕ್ಕೆ 4- 5 ಇಂಚು ಅಂತರವಿದ್ದರೆ ಸಾಕು. ಬೀಜ ಬಿತ್ತಿದ ಮೇಲೆ ತೆಳುವಾಗಿ ಮಣ್ಣು ಹರಡಬೇಕು. ಬಳಿಕ ಐದಾರು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಜಾಸ್ತಿ ನಿರ್ವಹಣೆ ಬಯಸದು. ಬೀಜ ಬಿತ್ತಿದ 4ರಿಂದ 6 ವಾರದೊಳಗೆ ಕಟಾವಿಗೆ ಬರುತ್ತದೆ. ಇದನ್ನು ಬೇರು ಸಮೇತ ಕಟಾವು ಮಾಡದೆ ಕಾಂಡದ ಸ್ವಲ್ಪ ಭಾಗವನ್ನು ಭೂಮಿಯಲ್ಲೇ ಬಿಟ್ಟು ಗಿಡವನ್ನು ಕತ್ತರಿಸಬೇಕು. ನಂತರ ಅದೇ ಕಾಂಡವು ಚಿಗುರಿ ಮತ್ತೆ ಫಸಲು ಕೊಡುತ್ತದೆ. ಹೀಗೆ ನಾಲ್ಕೈದು ಬಾರಿ ಮಾಡಬಹುದು. ಮಾರುಕಟ್ಟೆ ಸ್ಥಿತಿಗತಿ ನೋಡಿಕೊಂಡು ಕಟಾವು ಮಾಡುವುದು ಒಳಿತು. ಇದಕ್ಕೆ ಕಪ್ಪು ಮಣ್ಣು ಇದ್ದರೆ ಉತ್ತಮ. ನೀರು ಸರಾಗವಾಗಿ ಹರಿದುಹೋಗುವಂತಿರಬೇಕು. 6.0- 7.0 ರಸಸಾರವಿದ್ದರೆ ಉತ್ತಮ. ಪಾಲಕ್‌ಗೆ ರೋಗಗಳ ಹಾವಳಿ ಕಡಿಮೆ. ಕೆಲವು ಬಾರಿ ಎಲೆಚುಕ್ಕೆ ರೋಗ ಬರಬಹುದು.
ತಳಿಗಳು
ಅರ್ಲಿ ಸ್ಮೂಕ್ ಲೀಫ್, ಪೂಸಾ ಜ್ಯೋತಿ, ವರ್ಜೀನಿಯಾ, ಲಾಂಗ್‌ಸ್ಟಾಂಡಿಂಗ್, ಪೂಸಾ ಸ್ವರ್ಣ, ನಂ. 51- 16, ನಂ. 6- 9 ಮತ್ತು ಲಾಂಗ್ ಹಾರ್ಡಿಂಗ್ ತಳಿಗಳು ಪ್ರಚಲಿತದಲ್ಲಿವೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಬಳಿಯ ಕರಡಿಗುಡ್ಡ ಮಹಾಂತೇಶ (9538208422) ಅವರನ್ನು ಸಂಪರ್ಕಿಸಬಹುದು.



-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)