ಕೃಷಿ-ಪರಿಸರ

ಸಾವಯವ ಕೃಷಿ ಕೈಪಿಡಿ

Lingaraj Badiger

ಕೃಷಿ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಕಟಿಸಿರುವ `ಸಾವಯವ ಕೃಷಿ ಕೈಪಿಡಿ' ಈ ಮಾದರಿ ತಿಳಿದುಕೊಳ್ಳಬೇಕೆನ್ನುವವರಿಗೆ ಸಾಕಷ್ಟು ಉಪಯುಕ್ತ. ಸಾವಯವ ಕೃಷಿ ಅಂದರೇನು, ಸಾವಯವ ಉತ್ಪನ್ನಗಳಿಗೆ ಸರ್ಟಿಫಿಕೇಟ್ ನೀಡುವ ಏಜೆನ್ಸಿಗಳ ಮಾಹಿತಿ, ಸಾವಯವ ಕೃಷಿ ಪ್ರಚಾರಪಡಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಮಾಹಿತಿ, ಸಂಶೊಧನಾ ಸಂಸ್ಥೆಗಳು, ಸರ್ಕಾರದ ಸಾವಯವ ಭಾಗ್ಯ ಯೊಜನೆಯ ವಿವರ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತರ ಮಾಹಿತಿ, ಸಾವಯವ ಕೃಷಿ ಉತ್ಪನ್ನ ಖರೀದಿದಾರರು, ರಫ್ತುದಾರರ ಮಾಹಿತಿ,
​ ​
ಸಾವಯವ ಮಳಿಗೆ, ಪುಸ್ತಕ ಹಾಗೂ ವೆಬ್ ಸೈಟ್ ಗಳ ವಿವರಗಳನ್ನು 288 ಪುಟಗಳ ಈ ಪುಸ್ತಕ ಹೊಂದಿದೆ.ಬೇಕೆಂದರೆ, ಇದನ್ನು ಕೃಷಿ ಇಲಾಖೆಯ ವೆಬ್ ಸೈಟ್ ನಿಂದ  (http://raitamitra.kar.nic.in/Kan/savayavak.asp)
ಡೌನ್ ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯ ಸಾವಯವ ಕೃಷಿ ಘಟಕವನ್ನು ದೂ. 080-2207 4111 ಮೂಲಕ ಸಂಪರ್ಕಿಸಬಹುದು.

SCROLL FOR NEXT