ಕೃಷಿ-ಪರಿಸರ

ಮುಂಗಾರು ಪ್ರವೇಶವನ್ನು ಮತ್ತಷ್ಟು ನಿಖರವಾಗಿ ಅಂದಾಜಿಸಲು ಬಂತು ಹೊಸ ವಿಧಾನ

Srinivas Rao BV

ಬರ್ಲಿನ್:ಮುಂಗಾರು ಪ್ರವೇಶ ಹಾಗೂ ನಿಲ್ಲುವುದನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ವಿಜ್ಞಾನಿಗಳು ಹೊಸ ವಿಧಾನ ಕಂಡುಕೊಂಡಿದ್ದಾರೆ.
ವಿಜ್ಞಾನಿಗಳು ಕಂಡುಕೊಂಡ ಹೊಸ ವಿಧಾನ, ಆಹಾರ ಮತ್ತು ಜಲ ವಿದ್ಯುತ್ ಸರಬರಾಜು ವಿಷಯದಲ್ಲಿ ಮಹತ್ವದ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಾದೇಶಿಕ ಹವಾಮಾನ ಡೇಟಾದ ನೆಟ್ವರ್ಕ್ ಅನಾಲಿಸಿಸ್ ಮೂಲಕ ಮುಂಗಾರು ಪ್ರವೇಶವನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ಸಾಧ್ಯವಿದ್ದು ಈ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವಂತೆ ವಿಜ್ಞಾನಿಗಳು ಹವಾಮಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.   
ರೈತರಿಗೆ ಮುಂಗಾರು ಮುನ್ಸೂಚನೆ ಅತಿ ಮುಖ್ಯವಾಗಿದ್ದು, ಮುಂಬರುವ ಹವಾಮಾನ ಬದಲಾವಣೆ ಮುಂಗಾರು ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ಪ್ರವೇಶದ ಬಗ್ಗೆ ನಿಖರ ಮಾಹಿತಿ ಪಡೆಯುವುದು ಮುಖ್ಯವಾಗಲಿದೆ. ಮುಂಗಾರು ಪ್ರವೇಶದ ಬಗ್ಗೆ  ಈಗ ನೀಡಲಾಗುತ್ತಿರುವ ಮುನ್ಸೂಚನೆಗಿಂಟಲೂ ಎರಡುವಾರಗಳ ಮುನ್ನವೇ ಮುನ್ಸೂಚನೆ ನೀಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮುಂಗಾರು ಡೇಟಾಗಳೊಂದಿಗೆ ವಿಜ್ಞಾನಿಗಳು ತಮ್ಮ ಹೊಸ ವಿಧಾನವನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದ್ದು, ಶೇ.70 ಕ್ಕಿಂತಲೂ ಹೆಚ್ಚು ನಿಖರವಾದ ಮಾಹಿತಿ ನೀಡುತ್ತದೆ ಎಂದು ತಿಳಿದುಬಂದಿದೆ.

SCROLL FOR NEXT