ಹೂ ಬೇಸಾಯಗಾರ ದಾವಲ್ ಸಾಬ್ 
ಕೃಷಿ-ಪರಿಸರ

ಬರಕ್ಕೆ ಸೆಡ್ಡು ಹೊಡೆದ ಕೊಪ್ಪಳದ ಹೂ ಬೇಸಾಯಗಾರ

ಕೊಪ್ಪಳದ ಹೂ ಬೇಸಾಯ ಮಾಡುವ ರೈತನೊಬ್ಬ ಬರಕ್ಕೆ ಸೆಡ್ಡು ಹೊಡೆದು ತನ್ನ ಅರ್ಧ ಎಕರೆ ಜಮೀನಿನಲ್ಲಿ ಹೂವು ಬೆಳೆದು ಲಾಭ ...

ಕೊಪ್ಪಳ: ರಾಜ್ಯದೆಲ್ಲೆಡೆ ಬರ ತಾಂಡವವಾಡುತ್ತಿದೆ. ನೀರಿಲ್ಲದೇ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಕೊಪ್ಪಳದ ಹೂ ಬೇಸಾಯ ಮಾಡುವ ರೈತನೊಬ್ಬ ಬರಕ್ಕೆ ಸೆಡ್ಡು ಹೊಡೆದು ತನ್ನ ಅರ್ಧ ಎಕರೆ ಜಮೀನಿನಲ್ಲಿ ಹೂವು ಬೆಳೆದು ಲಾಭ ಗಳಿಸುತ್ತಿದ್ದಾನೆ.

ಕೊಪ್ಪಳದ ಬೆಲೂರ್ ಗ್ರಾಮದ ದಾವಲ್ ಸಾಬ್ ಎಂಬಾತ ಅರ್ಧ ಎಕರೆ ಜಮೀನಿನಲ್ಲಿ ಸುಗಂಧರಾಜ ಹೂ ಬೇಸಾಯ ಮಾಡಿದ್ದಾನೆ. ಈ ಹೂವಿಗೆ ದಾವಣಗೆರೆ ಮತ್ತು ತುಮಕೂರಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಪ್ರತಿದಿನ ಸುಮಾರು 15 ರಿಂದ 20 ಕೆಜಿ ಹೂ ಸಿಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರುಪಾಯಿ ಬೆಲೆ ಇರುತ್ತದೆ. ಹಬ್ಬದ ಸಮಯದಲ್ಲಿ ಪ್ರತಿ ಕೆಜಿಗೆ 150 ರು ಬೆಲೆ ಇರುತ್ತದೆ. ಸುಮಾರು 3 ದಿನಗಳ ಕಾಲ ಈ ಹೂವನ್ನು ಸಂಗ್ರಹಿಸಿಡಬಹುದಾಗಿದೆ. ಶ್ರಾವಣ ತಿಂಗಳಲ್ಲಿ ಈ ಹೂವಿಗೆ ಭಾರೀ ಬೇಡಿಕೆ ಇರುತ್ತದೆ. ವ್ಯವಸಾಯಕ್ಕೆ ಮಾಡಿದ ಖರ್ಚು ತೆಗೆದರೇ ವಾರ್ಷಿಕವಾಗಿ ಸುಮಾರು ಎರಡೂವರೆ ಲಕ್ಷ ರು ಆದಾಯ ಸಿಗುತ್ತದೆ ಎಂದು ಹೂ ಬೆಳೆದು ಬದುಕು ಕಟ್ಟಿಕೊಂಡ ದಾವಲ್ ಸಾಬ್  ಹೇಳುತ್ತಾರೆ.

ಪದವಿ ಮುಗಿದ ನಂತರ ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ಸೇರದೇ ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಹೂ ಬೆಳೆಯಲು ಆರಂಭಿಸಿದೆ. ಇದರಿಂದ ನಾನು ಸಂತೋಷವಾಗಿ ಬದುಕುತ್ತಿದ್ದೇನೆ ಎಂದು ದಾವಲ್ ಸಾಬ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!