ಕೃಷಿ-ಪರಿಸರ

ಕರ್ನಾಟಕದಲ್ಲಿ ಸೇಬು ಹಣ್ಣು ಬೆಳೆದು ಯಶಸ್ಸು ಕಂಡ ರೈತರು

Sumana Upadhyaya
ಮಂಗಳೂರು: ಆಪಲ್ಸ್ ಅಂದರೆ ಸೇಬು ಹಣ್ಣು ಕರ್ನಾಟಕದಲ್ಲಿ ಬೆಳೆಯುತ್ತದೆಯೇ? ಕೆಲ ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಸೇಬು ಹಣ್ಣು ಬೆಳೆಯುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲಸದ ಮೇಲೆ ಬದ್ಧತೆಯಿರುವ ಕೆಲವು ರೈತರು, ಹಿಮಾಲಯ ಪರ್ವತ ಪ್ರದೇಶದ ತಪ್ಪಲಿನಲ್ಲಿ ಬೆಳೆಯುವ ಸೇಬು ಹಣ್ಣನ್ನು ನಮ್ಮ ಕರ್ನಾಟಕದಲ್ಲಿ ಕೂಡ ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದಾರೆ.
ಮಂಗಳೂರಿನ ವ್ಯಾಪಾರಿ ಸೇಬು ಕೃಷ್ಣ ಶೆಟ್ಟಿ, ಚಿಕ್ಕಮಗಳೂರಿನ ಚಂದ್ರೇಗೌಡ, ಶೃಂಗೇರಿಯ ಅನಂತ, ಸೋಮವಾರಪೇಟೆಯ ರೊಮಿಲಾ ಡಿ ಸಿಲ್ವಾ,ತುಮಕೂರಿನ ಗಂಗಾಧರ ಮೂರ್ತಿ ಮತ್ತು ಹರಿಹರ, ತರಿಕೆರೆ ಮತ್ತು ಮೈಸೂರಿನ ಇನ್ನೂ ಕೆಲವು ರೈತರು ಸೀಬೆ ಹಣ್ಣಿನ ವ್ಯವಸಾಯವನ್ನು ಕೈಗೆತ್ತಿಕೊಂಡಿದ್ದು ಅದರ ಯಶಸ್ಸನ್ನು ಸವಿದಿದ್ದಾರೆ.
ಈ ರೈತರು ತಮ್ಮ ಯಶಸ್ಸಿನ ಶ್ರೇಯಸ್ಸನ್ನೆಲ್ಲಾ ಹಿಮಾಚಲ ಪ್ರದೇಶದ ಮಂಡಿಯ ಹಣ್ಣು ವಿಜ್ಞಾನಿ ಚಿರಂಜಿತ್ ಪರ್ಮರ್ ಅವರಿಗೆ ಸಲ್ಲಿಸುತ್ತಾರೆ.  ಈ ವಿಜ್ಞಾನಿಯ 2011ರಲ್ಲಿ ರೈತರ ತಲೆಯಲ್ಲಿ ಹಣ್ಣು ಬೆಳೆಯಬಹುದೆಂಬ ಯೋಚನೆಯನ್ನು ಹರಿಯಬಿಟ್ಟಿದ್ದು. 
ಆ ಸಂದರ್ಭದಲ್ಲಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಈ ರೈತರಿಗೆಸಸಿಗಳನ್ನು ನೀಡಿ ಸೇಬು ಹಣ್ಣಿನ ವ್ಯವಸಾಯದ ತಾಂತ್ರಿಕತೆಯನ್ನು ಬಿತ್ತಿದರು.
2012ರಲ್ಲಿ ತುಮಕೂರಿನ ರೈತ ಗಂಗಾಧರ ಮೂರ್ತಿ ಮೊದಲ ಬಾರಿಗೆ ಸೇಬು ಹಣ್ಣಿನ ಬೇಸಾಯವನ್ನು ಮಾಡಿದರು. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮಗಳೂರಿನ ಲಕ್ಷ್ಮಿಪುರದ ಚಂದ್ರೆ ಗೌಡ ಸುಮಾರು 25 ಕಿಲೋ ಸೇಬು ಹಣ್ಣು ಬೆಳೆಯುವ ಮೂಲಕ ವಾಣಿಜ್ಯವಾಗಿ ಉತ್ಪಾದನೆ ಮಾಡುವ ಯೋಜನೆಯಲ್ಲಿದ್ದಾರೆ.
ಈ ಬೆಳೆ ಬೆಳೆಯಲು ಕೆಲವು ಸಮಸ್ಯೆಗಳು ಕೂಡ ಇವೆ. ಮಂಗಳೂರಿನ ಉಪ್ಪಿನಂಗಡಿಯ ಸೇಬು ಕೃಷ್ಣ ಶೆಟ್ಟಿ ಪರ್ಮರ್ ಜೊತೆ ಸೇಬು ಸಸಿಗಳ ಪೂರೈಕೆಯಲ್ಲಿ ಕೈ ಜೋಡಿಸಿದ್ದಾರೆ. ಅವರ ಜಮೀನಿನಲ್ಲಿರುವ 50 ಗಿಡಗಳು ಹೂ ಬಿಡಲು ಆರಂಭಿಸಿವೆ. ಆದರೆ ಬೇರುಗಳು ಈ ಬಾರಿಯ ಮಳೆಗೆ ಕೊಳೆತ ಕಾರಣ ಸೇಬುಗಳು ಫಸಲು ನೀಡಲು ವಿಫಲವಾಗಿವೆ.
ಸಾವಯವ ಕೃಷಿ ಮಾಡುವ ರೈತರು ಹೇಳುವಂತೆ, ನೀರು ಗಿಡದ ಬುಡದಲ್ಲಿ ನಿಲ್ಲುವುದಿಲ್ಲ ಮತ್ತು ಸೇಬು ಹಣ್ಣುಗಳು ನೇರವಾಗಿ ಸೂರ್ಯನ ಬೆಳಕಿಗೆ ತೆರೆದಿರುವುದಿಲ್ಲ. ಪರ್ಮರ್ ಅವರ ಶ್ರಮ ವ್ಯರ್ಥವಾಗಿಲ್ಲ. ಕರ್ನಾಟಕದಲ್ಲಿ ಸೇಬು ಹಣ್ಣು ಬೆಳೆಯಬಹುದೆಂದು ನಾನು ಮೊದಲು ತೋಟಗಾರಿಕಾ ಇಲಾಖೆಗೆ ಹೋಗಿ ಹೇಳಿದಾಗ ಅದು ಸಾಧ್ಯವೇ ಇಲ್ಲ ಎಂದು ಹೇಳಿ ನಕ್ಕರು ಎಂದು ಜ್ಞಾಪಿಸಿಕೊಳ್ಳುತ್ತಾರೆ.
ಇಂಡೋನೇಷಿಯಾದ ಜಾವ ದ್ವೀಪದ ಬಾಟು ಹತ್ತಿರ 2009ರಲ್ಲಿ ಭೇಟಿ ಮಾಡಿದಾಗ ಅಲ್ಲಿಂದ ಸ್ಫೂರ್ತಿ ಪಡೆದ ಹಣ್ಣು ವಿಜ್ಞಾನಿ ಪರ್ಮರ್ ಕರ್ನಾಟಕಕ್ಕೆ ಬಂದಿದ್ದಾಗ ಇಲ್ಲಿನ ರೈತರಿಗೆ ಅದನ್ನು ಪ್ರಯೋಗ ಮಾಡಲು ಹೇಳಿದರಂತೆ. ಚಳಿಗಾಲವಿಲ್ಲದ ಇಂಡೊನೇಷಿಯಾದಲ್ಲಿ ಪ್ರತಿ ಹೆಕ್ಟೇರ್ ಗೆ 56 ಟನ್ ಸೇಬು ಬೆಳೆಯಲಾಗಿತ್ತು. ಅದು ಹಿಮಾಚಲ ಪ್ರದೇಶಕ್ಕಿಂತ 10 ಪಟ್ಟು ಜಾಸ್ತಿಯಾಗಿತ್ತು.
ಬಟುವಿನ ರೀತಿಯಲ್ಲಿಯೇ ಕರ್ನಾಟಕದಲ್ಲಿ ಕೂಡ ಹವಾಮಾನ ಪರಿಸ್ಥಿತಿಯಿದ್ದರೂ ಕೂಡ ಇಲ್ಲಿನ ತೋಟಗಾರಿಕಾ ಇಲಾಖೆ ಸೇಬು ಹಣ್ಣು ಬೆಳೆಯುವುದನ್ನು ಒಪ್ಪಿರಲಿಲ್ಲ. ಆದರೆ ಈ ಸಮಯದಲ್ಲಿ ಪರ್ಮರ್ ಅವರಿಗೆ ಸಹಾಯಕ್ಕೆ ಬಂದಿದ್ದು ನಮ್ಮ ರಾಜ್ಯದ ಖ್ಯಾತ ಜಲ ಸಂರಕ್ಷಣಾ ಕಾರ್ಯಕರ್ತ ಮತ್ತು ಹಲಸಿನ ಹಣ್ಣಿನ ರಾಯಭಾರಿ ಶ್ರೀ ಪಡ್ರೆ. ವಿದೇಶದಿಂದ ಕರ್ನಾಟಕಕ್ಕೆ ಸೇಬು ಹಣ್ಣಿನ ಮಾದರಿಯನ್ನು ವಿಮಾನದ ಮೂಲಕ ತರಿಸಲಾಯಿತು.
ಯಾಕೆಂದರೆ ಸಸಿಗಳನ್ನು ಎರಡು ದಿವಸಗಳಲ್ಲಿಯೇ ನೆಡಬೇಕಾಗಿತ್ತು. 2015ಕ್ಕೆ 6,000ಕ್ಕೂ  ಅಧಿಕ ಸೇಬು ಹಣ್ಣಿನ ಮರಗಳಾದವು ಎಂದು  ವಿಜ್ಞಾನಿ ಪರ್ಮರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
SCROLL FOR NEXT