ಕೃಷಿ-ಪರಿಸರ

ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ!

Srinivas Rao BV
ವಾಷಿಂಗ್ ಟನ್: ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಹೊಸ ವರದಿ ಹೇಳಿದೆ. 
ಭಾರತ ಮತ್ತು ಚೀನಾ ಅಶುದ್ಧ ಗಾಳಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದು, ವಾಯುಮಾಲಿನ್ಯಕ್ಕೆ  ಎರಡೂ ದೇಶಗಳಿಂದ ಶೇ.50 ಕ್ಕಿಂತಲೂ ಹೆಚ್ಚಿನ ಕೊಡುಗೆ ಇದೆ ಎಂದು ವಾರ್ಷಿಕವಾಗಿ ಪ್ರಕಟವಾಗುವ  ಗ್ಲೋಬಲ್ ಏರ್ ರಿಪೋರ್ಟ್ ಹೇಳಿದೆ. 
ಬೋಸ್ಟನ್ ಮೂಲದ ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್(ಹೆಚ್ಇಐ) ಈ ವರದಿ ಪ್ರಕಟಿಸಿದ್ದು, ದೀರ್ಘಾವಧಿಯ ವಾಯು ಮಾಲಿನ್ಯ 2016 ರಲ್ಲಿ ಜಾಗತಿಕವಾಗಿ 6.1 ಸಾವುಗಳಿಗೆ ಕಾರಣವಾಗಿದೆ.  ಭಾರತ ಹಾಗೂ ಚೀನಾದಲ್ಲಿ 2016 ರ ಒಂದೇ ವರ್ಷದಲ್ಲಿ ಈ ವರೆಗೂ 1.1 ಮಿಲಿಯನ್ ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. . 
ಆದರೆ ವಾಯುಮಾಲಿನ್ಯ ತಡೆಗಟ್ಟುವುದಕ್ಕೆ ಚೀನಾ ಕ್ರಮ ಕೈಗೊಂಡಿದ್ದು, ಫಲಕಾರಿಯೂ ಆಗಿದೆ, ಆದರೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ 2010 ರಿಂದ ಈ ವರೆಗೂ ವಾಯುಮಾಲಿನ್ಯದ ಪ್ರಮಾಣ ಕಡಿಮೆ ಆಗಿಲ್ಲ ಎಂಬುದು  ವರದಿ ಮೂಲಕ ತಿಳಿದುಬಂದಿದೆ.
SCROLL FOR NEXT