ಭಕ್ತಿ-ಜ್ಯೋತಿಷ್ಯ

ವೇದ ಕಾಲದ ಆಧುನಿಕ ವಿಜ್ಞಾನ

ನಿಮ್ಮಲ್ಲಿ ಇಡೀ ಸೃಷ್ಟಿಯೇ ಅಡಗಿದೆ. ಯೋಗವು ಆತ್ಮಸಾಕ್ಷಾತ್ಕಾರದ ಮೂಲಕ ಅದನ್ನು ನಿಮಗೆ ಅರ್ಥ ಮಾಡಿಸುತ್ತದೆ. ವೇದ ಕಾಲದ ಋಷಿಮುನಿಗಳಿಗೆ ಈ ಬಗ್ಗೆ ಎಳ್ಳಷ್ಟೂ ಅನುಮಾನ ಇರಲಿಲ್ಲ. ಹೀಗಾಗಿಯೇ ವೇದದ ಮೊದಲ ಶಬ್ದವೇ 'ಅಗ್ನಿ'. ಯೋಗದಲ್ಲಿ ನಮ್ಮ ದೇಹವನ್ನು ಜಾಗೃತಗೊಳಿಸಲು 'ಅಗ್ನಿ'ಯನ್ನು ಬಳಸಲಾಗುತ್ತದೆ. ಶಾಖ, ರೂಪಾಂತರ, ಬೆಳಕು ಇವು ಅಗ್ನಿಯ ಹಲವು ಮುಖಗಳೇ ಆಗಿವೆ. ವ್ಯಕ್ತಿಯ ಪರಿವರ್ತನೆಯಲ್ಲಿ ಇವುಗಳ ಪಾತ್ರವನ್ನು ಆಧುನಿಕ ವಿಜ್ಞಾನವೂ ಒಪ್ಪಿಕೊಂಡಿದೆ. ಹೋಮ-ಹವನಗಳಲ್ಲಿ ಅಡಗಿರುವ ಶಕ್ತಿ ಕೂಡ ಇದೇ ಆಗಿದೆ.
ಅದೇನೇ ಇದ್ದರೂ ವೇದವಿಜ್ಞಾನದ ಸಾಮರ್ಥ್ಯ ಏನು ಎನ್ನುವುದನ್ನು ಸ್ವಯಂ ಅನುಭವದಿಂದ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ನೀವು ಒತ್ತಡದಲ್ಲಿದ್ದಾಗ, ಖಿನ್ನತೆಗೆ ಒಳಗಾದಾಗ, ವಿಶ್ರಾಂತಿಯ ಕೊರತೆ ಎದುರಿಸುತ್ತಿದ್ದಾಗ, ದುಗುಡದಲ್ಲಿದ್ದಾಗ ಇದನ್ನು ಪ್ರಯೋಗಿಸಿ ನೋಡಿ- ತೋರುಬೆರಳಿನ ತುದಿಯನ್ನು ಸ್ವಲ್ಪಕಾಲ ಹೆಬ್ಬೆಟ್ಟಿನ ಬುಡದಲ್ಲಿ ಒತ್ತಿ ಇಟ್ಟುಕೊಳ್ಳಿ. ಕೊಂಚ ಸಮಯದಲ್ಲಿಯೇ ರಿಲೀಫ್ ಆದ ಅನುಭವ ನಿಮ್ಮದಾಗುತ್ತದೆ. ಇದರ ತತ್ವ ಬಹಳ ಸರಳ. ಅಗ್ನಿ (ಹೆಬ್ಬೆರಳು) ರೂಪಾಂತರ ಹೊಂದಿ ವಾಯುತತ್ವವನ್ನು (ತೋರುಬೆರಳು) ತೀವ್ರಗೊಳಿಸುತ್ತದೆ.
ರೇಖಾಗಣಿತದಿಂದ ವ್ಯಾಕರಣದವರೆಗೆ, ಭೌತವಿಜ್ಞಾನದಿಂದ ಅಧ್ಯಾತ್ಮದವರೆಗೆ ಭಾರತೀಯ ವೇದವಿಜ್ಞಾನಿಗಳ ಕೊಡುಗೆ ಅದ್ಭುತ. ಯೋಗ ಕೇವಲ ಅಧ್ಯಾತ್ಮದ ಹಸಿವು ತಣಿಸುವುದಷ್ಟೇ ಅಲ್ಲ. ಅದೊಂದು ಪರಿಪೂರ್ಣ ವಿಜ್ಞಾನ. ಯೋಗ ಭೌತಿಕ ಮತ್ತು ಅಧ್ಯಾತ್ಮಿಕ ಎಂದು ವಿಂಗಡಿಸದೇ ಬದುಕಿನ ಪ್ರತಿ ವಿಷಯದ ಕುರಿತಾಗಿಯೂ ಗಮನ ಹರಿಸುತ್ತದೆ. ವೇದ ಕಾಲದ ಜ್ಞಾನವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಊಹಾತೀತ ಪರಿವರ್ತನೆಗಳನ್ನು ಕಾಣಬಹುದು. ಪಾಶ್ಟಾತ್ಯರೇ ವೇದ ಕಾಲದ ಯೋಗ ಶಕ್ತಿಯ ಪರಿಣಾಮಗಳನ್ನು ಅರಿಯುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಸಂಸ್ಕೃತಿ, ಪರಂಪರೆಗಳ ಆಳಕ್ಕೆ ಇಳಿದು, ಅದರ ಸಾಮರ್ಥ್ಯವನ್ನು ಕಂಡುಕೊಳ್ಳಬೇಕಾದ ಸನ್ನಿವೇಶ ಈಗ ನಿರ್ಮಾಣವಾಗಿದೆ. ಯೋಗ ಅತ್ಯಂತ ಮುಂದುವರಿದ ವಿಜ್ಞಾನ ಎನ್ನುವುದನ್ನು ನಾವು ಈಗಲಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.
- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ