ದೇವ, ದಾನವ ಮತ್ತು ಮಾನವ ಪರಂಪರೆಯ ಸನಾತನ ಧರ್ಮವನ್ನು ವಿಶ್ವ ವಿಖ್ಯಾತಗೊಳಿಸಿರುವ ರಾಮಾಯಣ ಮತ್ತು ಮಹಾಭಾರತ ಐತಿಹಾಸಿಕ ಪುರಾಣಗಳನ್ನು ರಚಿಸಿ ಭಾರತವನ್ನು ವಿಶ್ವ ವಿಖ್ಯಾತಗೊಳಿಸಿರುವ ಕೀರ್ತಿ ಸನಾತನ ದೇವ ಮಹರ್ಷಿಗಳಾದ ವಾಲ್ಮೀಕಿ, ವ್ಯಾಸರಿಗೆ ಮಾತ್ರ ಸಲ್ಲುತ್ತದೆ.
ಆದಿ ಅಂತ್ಯವಿಲ್ಲದ ವಿಜ್ಞಾನಕ್ಕೂ ಅಳವಳಡದ, ಮನಸ್ಸಿಗೂ ನಿಲುಕದ ನಾನಾ ವೈಚಿತ್ರಗಳ ಚಿದಂಬರ ರಹಸ್ಯಗಳನ್ನೊಳಗೊಂಡ ನಭೋಮಂಡಲವನ್ನು ಭೇದಿಸಿದರೆ, ಗೋಳಾಕಾರದ ಸುರುಳಿರೂಪದ ಮಿಲಿಯನ್‌ಗಟ್ಟಲೆ ತಾರಾಮಂಡಲಗಳು ಗೋಚರವಾಗುತ್ತವೆ.
ಇಂಥ ತಾರಾ ಮಂಡಲಗಳನ್ನು ಆಕಾಶಗಂಗೆ ಎಂದು ಕರೆಯುತ್ತಾರೆ. ಯಾವುದೊ ಒಂದು ಆಕಾಶಗಂಗೆಯಲ್ಲಿ ಸೂರ್ಯನು ಒಂದು ಚಿಕ್ಕ ಸ್ವಯಂ ಪ್ರಕಾಶ ತಾರೆಯಷ್ಟೇ. ಸೂರ್ಯ ಕೇಂದ್ರ ಬಿಂದುವಾಗಿದ್ದು, ಅದರ ಗುರುತ್ವಾಕರ್ಷಣ ಶಕ್ತಿ ಮತ್ತು ನಭೋಪ್ರಭಾವಕ್ಕೆ ಅನುಗುಣವಾಗಿ ಸೂರ್ಯನು ಸೇರಿದಂತೆ ಚಂದ್ರ ಪೃಥ್ವಿ, ಶುಕ್ರ, ಬುಧ, ಗುರು, ಶನಿ, ಮಂಗಳ ಎಂಬ ಎಂಟು ಗ್ರಹಗಳು, ಗ್ರಹಗಳಿಗೆ ಹೊಂದಿಕೊಂಡು ಸುಮಾರು 64 ಚಂದಿರಗಳು ಮಂಗಳ ಮತ್ತು ಗುರುಗ್ರಹಗಳ ಮಧ್ಯಭಾಗದಲ್ಲಿ 1000 ಕಿ.ಮೀ. ಉದ್ದವಿರುವ ಸುಮಾರು 3500 ಉಲ್ಕಶಿಲೆಗಳು ಗೊತ್ತುಗುರಿ ಇಲ್ಲದೆ ನಿರ್ದಿಷ್ಟ ಪಥದಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. 16ನೇ ಶತಮಾನದ ತನಕ ಸೌರಮಂಡಲದಲ್ಲಿ ಕೇವಲ 6 ಗ್ರಹಗಳು ಇವೆ ಎಂದು ತಿಳಿದಿದ್ದೆವು. ಆದರೆ, ಮಹಾನ್ ವಿಜ್ಞಾನಿಗಳಾದ ಗೆಲಿಲಿಯೋ, ನ್ಯೂಟನ್, ಕೆಲ್ಪರ್ ಮತ್ತು ಕೋಪರ್ನಿಕಸ್ ಅವರ ಕ್ರಾಂತಿಕಾರಕ ಸಂಶೋಧನೆಗಳಿಂದ ಗ್ರಹಗಳ ಭೌತಿಕ ಗುಣಗಳನ್ನು ತಿಳಿಯಲಾಗಿ, ಪೃಥ್ವಿ ಮತ್ತು ಪೃಥ್ವಿಗೆ ಹೊಂದಿಕೊಂಡಿರುವ ಚಂದ್ರನನ್ನು ಗ್ರಹಗಳೆಂದೇ ಪರಿಗಣಿಸಲಾಯಿತು.
1781ರಲ್ಲಿ ಜರ್ಮನ್ ಮೂಲದ ವಿಲಯಂ ಹರ್ಷೆಲ್ ಯುರೇನಸ್ ಗ್ರಹವನ್ನು 1856ರಲ್ಲಿ, ಪ್ಸಾಸ್ಟ್‌ನ ಲೆವರೀರ್ ಮತ್ತು ಜೊಹಾನ್ ಗಲ್ಲೆರವರು ನೆಪ್ಜೂನ್ ಗ್ರಹವನ್ನು ಮತ್ತು 1930ರಲ್ಲಿ ತಾಂಬಾಗ್ ಕ್ಲೈಡೇ ಪ್ಲೂಟೋ ಗ್ರಹವನ್ನು ಗುರುತಿಸಿದ ನಂತರವೇ ನಭೋಮಂಡಲದಲ್ಲಿ ಹನ್ನೊಂದು ಗ್ರಹಗಳಿವೆ ಎಂದು ತಿಳಿಯಲಾಯಿತು.
ಪೃಥ್ವಿಯ ಮೇಲ್ಮೈ ಆತ್ಮದ ಭೌತಿಕ ಗುಣಗಳು ಸೂರ್ಯನಿಂದ ಎರಕ ಹೊಯ್ಯುವ ನಭೋ ಪ್ರಭಾವದಿಂದ ಸಂಭವಿಸುತ್ತವೆ ಎಂಬುದು ಕರಾರುವಾಕ್ಕು ಹೇಳಬಹುದಾದ ಕಠೋರ ಸತ್ಯ. ಸೂರ್ಯನು ಇಲ್ಲದೆ ಆತ್ಮವೂ ಎಂದಿಗೂ ಸೃಷ್ಟಿಗೊಳ್ಳಲಾರದು. ಸೂರ್ಯನಿಂದ ಎರಕ ಹೊಯ್ಯುವ ನಭೋ ಪ್ರಭಾವವು ಗ್ರಹಗಳ ಮೂಲಕ ಪೃಥ್ವಿಯ ಮೇಲ್ಮೈ ಆತ್ಮವನ್ನು ಸೇರುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಆಧ್ಯಾತ್ಮಿಕ ಮತ್ತು ಧಾರ್ಮಿಕ ರೂಪಾರ್ಥ ಉಳ್ಳ ಹೆಸರುಗಳ ಅನುಗುಣವಾಗಿ, ಅಷ್ಟ ಸೌರಗ್ರಹಗಳನ್ನು, ಅಮೂನ್, ಅಪಲೋ, ಹೀಲಿಯಸ್, ರವಿ, ಸೂರ್ಯ ಷಮಾಶ್ ಮತ್ತು ರಲೂಸಿಯಾನ, ಡಯಾನ, ಸೋಮ ಮತ್ತು ಚಂದಿರ ಹೆರ್‌ಮೇಸ್, ಚೆನ್, ಗುಡ್ ಬುಧ, ನಾನಾಯ್, ಐನನ್ನ, ಐಸಿಗೆ, ಶುಕ್ರ ಗಯಾ, ಪೃಥ್ವಿ ಭೂಮಿ, ಹೊರಸ್, ವರ್ಷನ್, ಮಂಗಳ, ಕುಜ, ಅಂಗಾರಕ, ಬೃಹಸ್ಪತಿ, ನಿಬುರ, ಗುರು ಕೈಮಾನು, ಕೈಯೂಮ್, ಶನಿ ಎಂಬ ನಾಮಾಂಕಿತಗಳಿಂದ ಪೂಜ್ಯ ಭಾವನೆಯಂದ ಪೂಜಿಸುತ್ತಿದ್ದಾರೆ. ಆದರೆ ಭಾರತದಲ್ಲಿ ದೂರಗಾಮಿ ಗ್ರಹಗಳಾದ ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೋ ಗ್ರಹಗಳಿಗೆ ಇನ್ನೂ ಸ್ಪಷ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕ ರೂಪಾರ್ಥ ಉಳ್ಳ ಹೆಸರುಗಳು ನಾಮಕರಣ ಮಾಡಿಲ್ಲ. ದೇವ, ದಾನವ ಮತ್ತು ಮಾನವ ಪರಂಪರೆಯ ಸನಾತನ ಧರ್ಮವನ್ನು ವಿಶ್ವವಿಖ್ಯಾತಗೊಳಿಸಿರುವ ರಾಮಾಯಣ ಮತ್ತು ಮಹಾಭಾರತ ಐತಿಹಾಸಿಕ ಪುರಾಣಗಳನ್ನು ರಚಿಸಿ ಭಾರತವನ್ನು ವಿಶ್ವ ವಿಖ್ಯಾತಗೊಳಿಸಿರುವ ಕೀರ್ತಿ ಸನಾತನ ದೇವ ಮಹರ್ಷಿಗಳಾದ ವಾಲ್ಮೀಕಿ, ವ್ಯಾಸರಿಗೆ ಮಾತ್ರ ಸಲ್ಲುತ್ತದೆ.
ರಾಜಗುರು ವಸಿಷ್ಠರ ರಾಜ ನೀತಿ ಅಮರವಾಗಿದೆ. ಅಂತಹ ಮಹಾನ್ ಸತ್ಪುರುಷರ ಸ್ಮರಣಾರ್ಥ ಭಾರತ ಆಧ್ಯಾತ್ಮಿಕ ಶಾಸ್ತ್ರದ ಅನುಗುಣ ಯುರೇನಸ್ ಗ್ರಹವನ್ನು 'ವಲ್ಮಿ' ನೆಪ್ಚೂನ್ ಗ್ರಹವನ್ನು 'ವ್ಯಾಸ್' ಮತ್ತು ಪ್ಲೂಟೋ ಗ್ರಹವನ್ನು 'ವಸಿಷ್ಠ' ಎಂದು ನಾಮಕರಣ ಮಾಡಿ ಇವರುಗಳ ಸ್ಮರಣಾರ್ಥ ಲೋಕಕಲ್ಯಾಣಕ್ಕಾಗಿ ವಿಶ್ವದಲ್ಲಿಯೇ ಪ್ರಥಮವಾಗಿ ಹನ್ನೊಂದು ಗ್ರಹಗಳನ್ನು ನುರಿತ ಶಿಲ್ಪಾಚಾರ್ಯರಿಂದ ಶಿಲ್ಪಶಾಸ್ತ್ರ ಅಳವಡಿಸಿ ಕರ್ನಾಟಕ ರಾಜ್ಯ ತುಮಕೂರು ಜಿಲ್ಲೆ, ಪಾವಗಡ ಪಟ್ಟಣದ ಉತ್ತರ ಮುಖವಾಗಿ ವಿಸ್ತಾರಗೊಂಡ ಐತಿಹಾಸಿಕ ಕನ್ಯಾಕಲ ಏಕ ಶಿಲಾ ಬೆಟ್ಟದ ಮೇಲೆ 2014, ಸೆಪ್ಟೆಂಬರ್ 23 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು.
ಕನ್ಯಾಕಲ ಬೆಟ್ಟವು ಇತಿಹಾಸ ಪ್ರಸಿದ್ಧವಾಗಿದ್ದು, ಅತ್ಯಂತ ಪ್ರಾಚೀನ ಮತ್ತು ಪುರಾಣ ಇತಿಹಾಸ ಪ್ರಸಿದ್ಧವೂ ಆಗಿರುವ ವೈಷ್ಣವಿ ದೇವಿಯನ್ನು ಹೊಂದಿರುವ ಸಪ್ತಮಾತೃಕೆಯರ ದೇವಾಲಯವಿದೆ.
- ವಿ. ನಾರಾಯಣ ಶೆಟ್ಟಿ ಪದ್ಮಸಾಲಿ