ಬೆಂಗಳೂರು: ಹೆಸರಾಂತ ಜ್ಯೋತಿಷಿ ಎಸ್ ಕೆ ಜೈನ್ ಅವರು 2015ರ ಕಾಲಚಕ್ರ ಪಂಚಾಂಗವನ್ನು ಮಂಗಳವಾರ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಖ್ಯಾಶಾಸ್ತ್ರ ತಜ್ಞರಾದ ಕೆಎಂ ಬಸವರಾಜ್ ಗುರೂಜಿ ಮತ್ತು ನಟಿ ಮಂಜುಳಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಎಸ್ ಕೆ ಜೈನ್ ಅವರು 2015ರಲ್ಲಿ ಭಾರತದ ಹವಾಮಾನದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿದ್ದು, ಬಿರುಬೇಸಿಗೆ ಸಂಭವಿಸಲಿದೆ ಎಂದು ಹೇಳಿದರು.
ಮಾರ್ಚ್ 20, ಏಪ್ರಿಲ್ 4 ಮತ್ತು ಸೆಪ್ಟೆಂಬರ್ 13ರಂದು ಸಂಭವಿಸುವ 3 ಗ್ರಹಣಗಳು ಹವಮಾನದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಈ ಸಮಯದಲ್ಲಿ ಯುದ್ಧ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು, ಅಧಿಕಾರಕ್ಕಾಗಿ ಕದನ ಸಂಭವಿಸಿ ಪ್ರಾಣನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಜೈನ್ ಹೇಳಿದರು.