ಆರೋಗ್ಯ, ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಲು ಧರಿಸಿ ಸ್ಪಟಿಕ ಮಾಲೆ !
ಸ್ಪಟಿಕ ಅತ್ಯಂತ ಶಕ್ತಿಯುಳ್ಳ ವಸ್ತು. ಸ್ಪಟಿಕದಿಂದ ತಯಾರಿಸಿರುವ ಮಾಲೆ ಧರಿಸುವುದರಿಂದ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಸಕಾರಾತ್ಮಕ ಶಕ್ತಿಯನ್ನು ಗ್ರಹಿಸಿ ಸಮತೋಲನ ಕಾಯ್ದುಕೊಳ್ಳುವುದಕ್ಕೂ ಸಹ ಸ್ಪಟಿಕ ಮಾಲೆ ಸಹಕಾರಿಯಾಗಿದೆ.
ಆಧ್ಯಾತ್ಮಿಕವಾಗಿ ಸ್ಪಟಿಕದ ಮಾಲೆ ಉಪಯೋಗವಾಗುವಂತೆ, ಮಾಲೆ ಧರಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ವಾಮಾಚಾರದಿಂದ ರಕ್ಷಿಸುವುದು ಹಾಗೂ ದೇಹದ ಉಷ್ಣತೆ ತಗ್ಗಿಸುವುದು ಸೇರಿದಂತೆ ಹಲವು ವಿಧಗಳಲ್ಲಿ ಚಿಕಿತ್ಸಕ ರೂಪದಲ್ಲಿ ವರ್ತಿಸುವುದು ಸ್ಪಟಿಕ ಮಾಲೆಯ ಮತ್ತೊಂದು ವೈಷಿಷ್ಟ್ಯ. ಸಾಮಾನ್ಯವಾಗಿ 108 ಮಣಿಗಳಿಂದ ತಯಾರಾಗಿರುವ ಸ್ಪಟಿಕ ಮಾಲೆಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರತಿನಿಧಿಸುತ್ತವೆ. ಸ್ಪಟಿಕ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಹಾಗೂ ದೇಹ, ಮನಸ್ಸನ್ನು ತಂಪಾಗಿಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಯೋಗಿಗಳು/ ಸಾಧು ಸಂತರು ಹೆಚ್ಚಾಗಿ ಸ್ಪಟಿಕ ಮಾಲೆ ಧರಿವುದನ್ನು ಕಾಣಬಹುದಾಗಿದೆ.
ಧ್ಯಾನದಲ್ಲಿ ಆಸಕ್ತಿಯುಳ್ಳವರಿಗೆ ಸಾಮಾನ್ಯವಾಗಿ ಸ್ಪಟಿಕ ಮಾಲೆ ಧರಿಸಿ ಧ್ಯಾನ ಮಾಡುವುದಕ್ಕೆ ಸೂಚಿಸಲಾಗುತ್ತದೆ. ಅದರಲ್ಲಿರುವ ಶೀತಲ ಗುಣ ಧ್ಯಾನಾಸಕ್ತನಾಗುವ ವ್ಯಕ್ತಿಯಲ್ಲಿನ ಬಾಹ್ಯ, ಆಂತರಿಕ ಒತ್ತಡಗಳನ್ನು ಕಡಿಮೆ ಮಾಡಿ ಮನಸ್ಸನ್ನೂ ಶೀತಲವಾಗಿರಿಸುತ್ತದೆ. ಗಾಯತ್ರಿ ಜಪ, ಸರಸ್ವತಿ ಜಪ, ರಾಮ ಜಪ ಸೇರಿದಂತೆ ಹಲವು ದೇವರುಗಳ ಕುರಿತಾದ ಜಪಗಳಿಗೆ ಸ್ಪಟಿಕ ಮಾಲೆ ಧರಿಸಿ ಜಪ ಮಾಡುವುದು ಸೂಕ್ತ ಎಂಬ ನಂಬಿಕೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos