ಸಾಂದರ್ಭಿಕ ಚಿತ್ರ 
ಭಕ್ತಿ-ಭವಿಷ್ಯ

ಆದಿತ್ಯ ಹೃದಯ ಸ್ತೋತ್ರ: ಕಾರ್ಯ ಸಿದ್ಧಿ, ಆಯುರಾರೋಗ್ಯ ವೃದ್ಧಿಗೆ ಸಹಕಾರಿ

ಶ್ರೀರಾಮ ರಾವಣನ ವಿರುದ್ಧ ಯುದ್ಧ ಮಾಡುತ್ತಿದ್ದ ಸಂದರ್ಭದಲ್ಲಿ ಅಗಸ್ತ್ಯರಿಂದ ರಾಮನಿಗೆ ಆದಿತ್ಯ ಹೃದಯ ಮಂತ್ರೋಪದೇಶವಾಗುತ್ತದೆ....

ಸನಾತನ ಧರ್ಮದಲ್ಲಿ ಸೂರ್ಯ ಪ್ರತ್ಯಕ್ಷ ದೇವತೆ. ವೇದ ಗರ್ಭವೆನಿಸಿದ ಗಾಯತ್ರೀ ಮಂತ್ರದ ಪ್ರತಿಪಾದ್ಯ ದೇವತೆಯೂ ಹೌದು.  ಸೂರ್ಯನನ್ನು ಅನುಸರಿಸಿಯೇ ಕರ್ಮಗಳು ನಡೆಯುವುದರಿಂದ ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿ ಎಂಬ ನಂಬಿಕೆ ಇದೆ. ಆದುದರಿಂದ ಸೂರ್ಯನನ್ನು ಭಾರತೀಯ ಶಾಸ್ತ್ರಗಳು ವಿಶ್ವದ ಕಣ್ಣು (ಜಗದೇಕ ಚಕ್ಷುಃ) ಎಂದು ಕರೆದಿವೆ. ಸೂರ್ಯನಿಗೆ ಮತ್ತೊಂದು ಪದ ಆದಿತ್ಯ. ಸಕಲ ಜೀವರಾಶಿಗಳಿಗೂ ಸೂರ್ಯನ ಅಗತ್ಯತೆ ಇರುವುದರಿಂದ ಭಾರತೀಯ ಸಂಸ್ಕೃತಿಯಲ್ಲಿ ಆದಿತ್ಯನಿಗೆ ಪೂಜನೀಯ ಸ್ಥಾನವಿದ್ದು, ಆತನನ್ನು ಪ್ರಾರ್ಥಿಸಲು ಇರುವ ಸ್ತೋತ್ರವೇ ಈ ಆದಿತ್ಯ ಹೃದಯ ಸ್ತೋತ್ರ. 
ಋಗ್ವೇದದಲ್ಲಿ ಸೂರ್ಯನು ಜಗತ್ತಿನ ಆತ್ಮನೆಂದು ಹೇಳಲಾಗಿದೆ, ಆದ್ದರಿಂದ ಆತನಿಗೆ ಸಂಬಂಧಿಸಿದ ಆದಿತ್ಯ ಹೃದಯ ಮಂತ್ರವನ್ನು ಮಂತ್ರಗಳ ರಾಜ ಎಂದು ಕರೆಯಲಾಗಿದೆ. ಶ್ರೀರಾಮ ರಾವಣನ ವಿರುದ್ಧ ಯುದ್ಧ ಮಾಡುತ್ತಿದ್ದ ಸಂದರ್ಭದಲ್ಲಿ ಅಗಸ್ತ್ಯರಿಂದ ರಾಮನಿಗೆ ಆದಿತ್ಯ ಹೃದಯ ಮಂತ್ರೋಪದೇಶವಾಗುತ್ತದೆ. ರಾಮ ನೆಲದಲ್ಲಿ, ರಾವಣನು ರಥದಲ್ಲಿ ಯುದ್ಧ ಮಾಡುವುದನ್ನು ನೋಡಿದ ಇಂದ್ರ ರಾಮನಿಗೆ ರಥವನ್ನು ನೀಡುತ್ತಾನೆ. ಆ ರಥದ ಧ್ವಜವನ್ನು ರಾವಣ ಕತ್ತರಿಸುತ್ತಾನೆ. ರಾಮನ ಬಾಣ ಪ್ರಯೋಗಕ್ಕೆ ಹೆದರಿ ರಾವಣನ ಸಾರಥಿ ರಥವನ್ನು ಪಕ್ಕಕ್ಕೆ ಒಯ್ಯುತ್ತಾನೆ. ಆದರೆ, ರಾವಣನಿಗೆ ಏನೂ ಆಗಲಿಲ್ಲ. ಅದನ್ನು ನೋಡಿ ಅಗಸ್ತ್ಯರು ಬರುತ್ತಾರೆ. ಈ ಸಂದರ್ಭ ಶ್ರೀರಾಮನಿಗೆ ಆದಿತ್ಯ ಹೃದಯದ ಉಪದೇಶವಾಗುತ್ತದೆ. 
ಸವಿತೃ( ಆದಿತ್ಯ) ಮಂತ್ರೋಪದೇಶದ ನಂತರ  ಅಗಸ್ತ್ಯರ ಸೂಚನೆಯಂತೆ ಬ್ರಹ್ಮಾಸ್ತ್ರ ಹೂಡಿದ ರಾಮನ ಬಾಣದಲ್ಲಿ  ಸವಿತೃಶಕ್ತಿ ಜಾಗೃತವಾಗುತ್ತದೆ. ರಾಮ ಪ್ರಯೋಗಿಸಿದ ಬಾಣದಿಂದ  ರಾವಣನ ಕವಚ ಛೇದನವಾಗಿ ರಾವಣ ಸಾಯುತ್ತಾನೆ. ಅಗಸ್ತ್ಯರಿಂದ ಉಪದೇಶಿಸಿಸಲ್ಪಟ್ಟ ಆದಿತ್ಯ ಹೃದಯದಿಂದ ರಾವಣನ ವಧೆ ಮಾಡುವ ಶ್ರೀರಾಮನ ತಪಸ್ಸು ಪೂರ್ಣವಾಗುತ್ತದೆ. ಇದು ಆದಿತ್ಯ ಹೃದಯದ ಪೌರಾಣಿಕ ಹಿನ್ನೆಲೆಯಾಗಿದೆ. ಆದ್ದರಿಂದಲೇ ಆದಿತ್ಯ ಹೃದಯ ಪಾರಾಯಣದಿಂದ  ಎಲ್ಲ ಕಾರ್ಯಗಳಲ್ಲಿ ಜಯ, ಆಪತ್ತುಗಳನ್ನು ನಿವಾಸಿಕೊಳ್ಳಲು ಸಾಧ್ಯ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಇದರಿಂದ ಆಯುರಾರೋಗ್ಯ ಅಭಿವೃದ್ಧಿಯೂ ಸಾಧ್ಯ. 
ಸೂರ್ಯನೇ ವಿಶ್ವ ಶಕ್ತಿಯಾಗಿರುವಾಗ. ಸೂರ್ಯನೇ ರುದ್ರ, ಸೂರ್ಯನೇ ಬ್ರಹ್ಮ, ವಿಷ್ಣು. ಸೂರ್ಯವ್ರತ , ಸೂರ್ಯ ನಮಸ್ಕಾರಗಳು ದೇಹ ಮನಸ್ಸಿಗೆ ಶಕ್ತಿ ಕೊಡುತ್ತವೆ. ಸೂರ್ಯನೇ ಪರಬ್ರಹ್ಮ. ಆ ಸೂರ್ಯನೇ ನಮ್ಮಲ್ಲಿ ತುಂಬಿರುವ ಶಕ್ತಿ. ನಮ್ಮಲ್ಲೇ ಬ್ರಹ್ಮವಿದೆ ಎಂಬ ತತ್ವವನ್ನು ಆದಿತ್ಯ ಹೃದಯ ತಿಳಿಸುತ್ತದೆ, ಆ ಮೂಲಕ ಆದಿತ್ಯ ಹೃದಯ ಸ್ತೋತ್ರ ವ್ಯಕ್ತಿಯೊಳಗಿರುವ ಆತ್ಮವಿಶ್ವಾಸದ ಶಕ್ತಿಯನ್ನೂ ಹೆಚ್ಚಿಸುವುದಕ್ಕೂ ಸಹಕಾರಿ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT