ಚೌಡೇಶ್ವರಿ ದೇವಿ 
ಭಕ್ತಿ-ಭವಿಷ್ಯ

ಭಕ್ತರು ಕೇಳಿದ ಪ್ರಶ್ನೆಗಳಿಗೆ ವಿಗ್ರಹದ ಮೂಲಕ ಉತ್ತರಿಸುವ ದಸರೀ ಘಟ್ಟ ಚೌಡೇಶ್ವರಿ ದೇವಿ!

ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿರುವ ಚೌಡೇಶ್ವರಿಯ ದೇವಸ್ಥಾನದಲ್ಲಿ ಭಕ್ತರ ಪ್ರಶ್ನೆಗಳಿಗೆ ಸ್ವತಃ ದೇವರಿಂದಲೇ ಉತ್ತರ ಬರುತ್ತದೆ.

ಭಕ್ತಾದಿಗಳು ದೇವಾಲಯಗಳಿಗೆ ಹೋದರೆ ಅಲ್ಲಿ ಕೇವಲ ಪ್ರಾರ್ಥನೆ ಸಲ್ಲಿಸಿ ಬರುವುದು ಹರಕೆ ತೀರಿಸುವುದು ಸಾಮಾನ್ಯದ ವಿಚಾರ. ಆದರೆ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿರುವ ಚೌಡೇಶ್ವರಿಯ ದೇವಸ್ಥಾನದಲ್ಲಿ ಭಕ್ತರ ಪ್ರಶ್ನೆಗಳಿಗೆ ಸ್ವತಃ ದೇವರಿಂದಲೇ ಉತ್ತರ ಬರುತ್ತದೆ.  
ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ದೇವಿ ನೆಲೆಸಿರುವ ಜಿಲ್ಲೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ದೇವಾಲಯ. ಬೆಂಗಳೂರಿನಿಂದ ರೈಲು ಹಾಗೂ ಬಸ್ಸುಗಳ ಸಾಕಷ್ಟು ಸೌಲಭ್ಯವಿದ್ದು ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದಾಗಿದೆ. ಚೌಡೇಶ್ವರಿ ದೇವಿಯ ಪಂಚಲೋಹದ ವಿಗ್ರಹವೇ ಬರವಣಿಗೆ ಮೂಲಕ ಜನರ ಕಷ್ಟಗಳಿಗೆ ಪರಿಹಾರ ಸೂಚಿಸುವುದರಿಂದ ಈ ದೇವಾಲಯ ಕರ್ನಾಟಕದಲ್ಲಿ ಮಾತ್ರವಲ್ಲದೇ  ಅಕ್ಕ ಪಕ್ಕದ ರಾಜ್ಯಗಳು ವಿದೇಶಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 
ದೇವಾಲಯಕ್ಕೆ ಬರುವ ಭಕ್ತರು ಚೌಡೇಶ್ವರಿ ದೇವಿಯ ಬಳಿ ತಮ್ಮ ಪ್ರಶ್ನೆ, ಸಮಸ್ಯೆಗಳಿಗೆ ಪರಿಹಾರ ಕೇಳುತ್ತಾರೆ, ಈ ವೇಳೆ ಗ್ರಾಮದ ಇಬ್ಬರು ಅನಕ್ಷರಸ್ಥರು ದೇವಿಯ ವಿಗ್ರಹವನ್ನು ಹಿಡಿದು ಮನಸೊ ಇಚ್ಛೆ ಬರೆಯುತ್ತಾರೆ. ನಂತರ ದೇವಸ್ಥಾನದ ಹಿರಿಯ ಅರ್ಚಕರು ಅಕ್ಕಿ ಹಿಟ್ಟಿನಲ್ಲಿ ಸುಲಲಿತವಾಗಿ ಕನ್ನಡದಲ್ಲಿ ಪರಿಹಾರವನ್ನು ಬರೆಯುತ್ತಾರೆ. ಕೇಳುಗರು ಯಾವುದೇ ಭಾಷೆಯಲ್ಲಿ ಬೇಕಾದರೂ ಸಮಸ್ಯೆಗಳನ್ನ, ಪ್ರಶ್ನೆಗಳನ್ನ ಮನದಲ್ಲಿ ನಿವೇದಿಸಿಕೊಳ್ಳಬಹುದು.
ಚೌಡೇಶ್ವರಿ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. 300 ವರ್ಷಗಳ ಹಿಂದೆ ತಿಪಟೂರಿನಲ್ಲಿ ಜಸವಂತರಾಯ ಎಂಬ ಪಾಳೇಗಾರ ತನ್ನ ಸಾಮರಾಜ್ಯವನ್ನು ವಿಸ್ತರಿಸುವ ಉದ್ದೇಶದಿಂದ ಚೌಡೇಶ್ವರಿಯನ್ನು ಭಕ್ತಿಯಿಂದ ಪೂಜಿಸತೊಡಗಿದನು.  ಇವನ ಶೃದ್ಧೆ ಭಕ್ತಿಗಳಿಂದ ಸಂತುಷ್ಟಗೊಂಡ ದೇವಿ ವರವನ್ನು ನೀಡುತ್ತಾಳೆ, ವರ ಪಡೆದ ಪಾಳೇಗಾರ ತನ್ನನ್ನು ಯಾವಾಗಲೂ ರಕ್ಷಣೆ ಮಾಡುತ್ತ ಇರಬೇಕೆಂದು ಪ್ರಾರ್ಥಿಸಿದನು. ಪಾಳೆಗಾರನ ಬೇಡಿಕೆಗೆ ಷರತ್ತು ವಿಧಿಸಿದ ಚೌಡೇಶ್ವರಿ ದೇವಿ ತನಗೆಲ್ಲಿ ಇಷ್ಟವಾಗುತ್ತದೊ ಅಲ್ಲಿ ತಾನು ನೆಲೆಸುವುದಾಗಿ ಹೇಳಿದಳು. ದೇವಿಯು ಒಮ್ಮೆ ಸುಂದರವಾದ ಗಿಡ ಮರಗಳು, ಹಸಿರಿನಿಂದ ತುಂಬಿದ ಒಂದು ಸಮತಟ್ಟಾದ ಪ್ರದೇಶಕ್ಕೆ ಬಂದು ಅಲ್ಲಿಯೇ ನೆಲೆಸಲು ತೀರ್ಮಾನಿಸಿದಳು. ನಂತರ ಇದು ಜಸವಂತರಾಯ ಪಟ್ಟಣ ಎಂದು ಕರೆಯಲ್ಪಟ್ಟಿತು. ಕಾಲಕ್ರಮೇಣ ಈ ಜಸವಂತರಾಯ ಪಟ್ಟಣವೆ ಇಂದಿನ ದಸರಿಘಟ್ಟವಾಗಿ ದೇವಿ ಚೌಡೇಶ್ವರಿ ನೆಲೆಸಿರುವ ಪವಿತ್ರ ತಾಣವಾಗಿದೆ. ಇಲ್ಲಿನ ಪುಟ್ಟ ಬೆಟ್ಟದ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದ ವೇಳೆ ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂಬುದು ಮತ್ತೊಂದು ವಿಶೇಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT