ಭಕ್ತಿ-ಭವಿಷ್ಯ

ಓಂ ಆಕೃತಿಯಲ್ಲಿರುವ ಪರ್ವತದ ಮಹತ್ವ, ಅಚ್ಚರಿಗಳೇನು ಗೊತ್ತೇ?

Srinivas Rao BV
ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಹೃದಯದ ಆಕಾರದಲ್ಲೇ ಇರುವ ಪ್ರದೇಶಕ್ಕೆ ಮಾನಸ ಸರೋವರ ಎಂದು ಹೇಳುತ್ತಾರೆ.
ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಗೂಗಲ್ ಅರ್ಥ್ ಇಲ್ಲದೇ ಇದ್ದ ಕಾಲದಲ್ಲಿಯೂ ಸನಾತನ ಧರ್ಮದ ಋಷಿಗಳ ತಪಸ್ಸಿನ ಸಿದ್ಧಿಯಿಂದಾಗಿ ಆ ಪ್ರದೇಶಗಳು ಅಂತರಿಕ್ಷದಿಂದ ಕಾಣುವ ಆಕೃತಿಯನ್ನು ನಿಖರವಾಗಿ ತಿಳಿಸಿದ್ದರು. ಅಂತೆಯೇ ಕೈಲಾಸದಲ್ಲಿ ಶಿವನಿದ್ದಾನೆ ಎಂಬ ನಂಬಿಕೆಯನ್ನು ನಿಜ ಮಾಡುವಂತೆ ಮತ್ತೊಂದು ಅಚ್ಚರಿಯ ಪ್ರದೇಶ ಹಿಮಾಲಯದಲ್ಲಿದೆ.
ಹಿಂದೂಗಳು ಪವಿತ್ರ ಎಂದು ಭಾವಿಸುವ ಓಂ ಕಾರದ ಚಿನ್ಹೆ ಹಿಮಾಲಯದಲ್ಲಿ ಕಂಡುಬರುತ್ತದೆ. ಅದಕ್ಕೆ ಓಂ ಪರ್ವತ ಎಂದೇ ಹೆಸರು. ಇದೇ ಪರ್ವತದಲ್ಲಿ ಪಾರ್ವತಿ ಸರೋವರ ಇರುವುದು ಮತ್ತೊಂದು ಅಚ್ಚರಿ. ನೋಡುವುದಕ್ಕೆ ಟಿಬೆಟ್ ನಲ್ಲಿರುವ ಮೌಂಟ್ ಕೈಲಾಶ್ ನಂತೆಯೇ ಕಾಣುವ ಓಂ ಪರ್ವತನಲ್ಲಿರುವ ಮತ್ತೊಂದು ಸರೋವರ ಜಾಗ್ಲಿಂಕಾಂಗ್ ಮಾನಸ ಸರೋವರದಷ್ಟೇ ಪವಿತ್ರ ಎಂದು ಹೇಳಲಾಗುತ್ತದೆ.
ಹಿಂದೂಗಳಿಗೆ ಮಾನಸ ಸರೋವರ ಎಷ್ಟು ಪವಿತ್ರವೋ (ॐ) ಆಕಾರದಲ್ಲಿರುವ ಓಂ ಪರ್ವತವೂ ಅಷ್ಟೇ ಪವಿತ್ರವಾಗಿದ್ದು ಮಾನಸಸರೋವರದ ಯಾತ್ರಾರ್ಥಿಗಳು (ॐ) ಪರ್ವತವನ್ನೂ ವೀಕ್ಷಿಸಬಹುದಾಗಿದೆ.
SCROLL FOR NEXT