ಭಕ್ತಿ-ಭವಿಷ್ಯ

ನವರಾತ್ರಿ: ಕೂಷ್ಮಾಂಡ ದೇವಿಯ ಪ್ರಾರ್ಥನೆಯಿಂದ ಆರೋಗ್ಯ ವೃದ್ಧಿ!

Srinivas Rao BV
ನವರಾತ್ರಿಯ ಆಚರಣೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಕೆಲವು ಸಿದ್ಧಿಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹಲವು ಜನರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ನವರಾತ್ರಿಯ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸುತ್ತಾರೆ. 
ನವರಾತ್ರಿಯ 9 ದಿನಗಳಲ್ಲಿ ದುರ್ಗೆಗೂ ಪೂಜೆ ನಡೆಯಲಿದ್ದು, ದುರ್ಗೆಯ ಮತ್ತೊಂದು ಅವತಾರವಾದ ಮಾತಾ ಕೂಷ್ಮಾಂಡ ದೇವಿಯನ್ನೂ ಆರಾಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಕೂಷ್ಮಾಂಡ ದೇವಿ ಜಗತ್ಜನನಿ ಎಂಬ ನಂಬಿಕೆಯೂ ಇದ್ದು, ಆ ದೇವಿಯೇ ಈ ಜಗತ್ತನ್ನು ಸೃಷ್ಟಿಸಿದ್ದು ಎಂದೂ ಹೇಳಲಾಗುತ್ತದೆ. 
ನವರಾತ್ರಿಯ 4 ನೇ ದಿನ ಕೂಷ್ಮಾಂಡ ದೇವಿಯ ಪೂಜೆ ನಡೆಯಲಿದ್ದು, ದುರ್ಗೆಯಈ ಅವತಾರವೇ ಜಗತ್ತಿನ ಅಂಧಕಾರವನ್ನೂ ಕಳೆದಿದ್ದು ಎಂಬ ಉಲ್ಲೇಖವಿದೆ. ಪರಮೇಶ್ವರನ ಪತ್ನಿಯ ಸ್ವರೂಪವೂ ಆಗಿರುವ ಕೂಷ್ಮಾಂಡ ದೇವಿಯನ್ನು ಪ್ರಾರ್ಥಿಸುವುದರಿಂದ ಆರೋಗ್ಯ, ಐಶ್ವರ್ಯ, ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. 
SCROLL FOR NEXT