ಭಕ್ತಿ-ಭವಿಷ್ಯ

ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ- ಹವನ!

Shilpa D
ಬೆಂಗಳೂರು: ಇಂದು ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ.  ಇಂದಿನ ರೆಡ್ ಮೂನ್ ವೀಕ್ಷಣೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ, ಪರಿಹಾರಕ್ಕಾಗಿ ಹಲವು ದೇವಾಲಯಗಳಲ್ಲಿ  ವಿಶೇಷ ಪೂಜೆ ಹವನ ನಡೆಯುತ್ತಿದೆ.
ಇಂದು ಸಂಭವಿಸುವ  ಕೇತು ಗ್ರಸ್ತ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ, ಸುಮಾರು 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಲಿದೆ.  ಅಂದರೆ ಮಧ್ಯರಾತ್ರಿ 1 ಗಂಟೆಯಿಂದ 2.43 ನಿಮಿಷದವರೆಗೆ ಚಂದ್ರಗ್ರಹಣ ಸಂಭವಿಸಲಿದೆ, 
ಭಾರತ ಸೇರಿದಂತೆ ನೆರೆಹೊರೆ ದೇಶಗಳು ಹಾಗೂ ದಕ್ಷಿಣ ಅಮೆರಿಕ, ಪೂರ್ವ ಆಫ್ರಿಕಾ, ಮಧ್ಯ ಪ್ರಾಚೀನ ಏಷ್ಯಾ ಖಂಡ, ಯುರೋಪ್‌, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ನಲ್ಲಿ ಗ್ರಹಣ ಗೋಚರಿಸಲಿದೆ.
ಸುದೀರ್ಘ ಚಂದ್ರಗ್ರಹಣದೊಟ್ಟಿಗೆ ಖಗೋಳದಲ್ಲಿ ಇನ್ನೊಂದು ವಿಸ್ಮಯ ಸಂಭವಿಸಲಿದೆ. ಈ ದಿನ ಮಂಗಳ ಗ್ರಹ ಭೂಮಿಗೆ ಅತೀ ಹತ್ತಿರ ಬರಲಿದ್ದು, ಸೂರ್ಯ ಮತ್ತು ಮಂಗಳ ಗ್ರಹ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ದಶಕದ ನಂತರ ಭೂಮಿಗೆ ಅತೀ ಹತ್ತಿರದಲ್ಲಿ ಮಂಗಳ ಗ್ರಹ ಕಾಣಿಸುವುದರಿಂದ ಅತಿ ದೊಡ್ಡದಾಗಿ ಕಾಣಿಸಲಿದೆ. 
ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಬಹುದು. ಮಳೆ ಮೋಡ ಅಂದು ಅಡ್ಡಿ ಮಾಡದಿದ್ದರೆ ಖಗೋಳ ವಿಸ್ಮಯವನ್ನು ಸವಿಯಬಹುದು. ಭಾರತದ ಬಹುತೇಕ ಭಾಗದಲ್ಲಿ ಗ್ರಹಣ ಕಾಣಲಿದೆ. ಬೆಂಗಳೂರಿನ  ಜವಾಹರಲಾಲ ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಪ್ರಖ್ಯಾತ ತಿರುಪತಿ ತಿರುಮಲ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಗ್ರಹಣ ಕಾಲದಲ್ಲಿ ಬಾಗಿಲು ಮುಚ್ಚಲಿವೆ, ಗ್ರಹಣ ಮೋಕ್ಷದ ನಂತರ  ದೇವಾಲಯ ಶುದ್ದೀಕರಣ ಮಾಡಿ ಭಕ್ತರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಇನ್ನು ರಾಜ್ಯದ ಧರ್ಮಸ್ಥಳ ಮಂಜುನಾಥ ಸ್ವಾಮಿ,  ಕುಕ್ಕೆ ಸುಬ್ರಮಣ್ಯ, ಹೊರನಾಡು ಅನ್ನಪೂರ್ಣೇಶ್ವರಿ ಮತ್ತು ಶೃಂಗೇರಿ ಶಾರದಾಂಭ ದೇವಾಲಯ. ಸೇರಿದಂತೆ  ಹಲವು ದೇವಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ,
ಇನ್ನೂ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದ್ವಾದಶ ರಾಶಿಗಳಿಗೆ ಚಂದ್ರಗ್ಹಣ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳು ಉಂಟಾಗಲಿವೆ ಎಂದು ಹೇಳಲಾಗುತ್ತಿದ್ದು, ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಗ್ರಹಣ ಸಮಯದಲ್ಲಿ ಮೆಚ್ಚಿನ ದೇವರುಗಳನ್ನು ಜಪ ಮಾಡುವುದರಿಂದ ಬರುಲಿರುವ ಸಮಸ್ಯೆಗಳನ್ನು ತಡೆಯುತ್ತದೆ ಎಂದು ನಂಬಲಾಗಿದೆ.
SCROLL FOR NEXT