ಸೂರ್ಯ ಗ್ರಹಣ 
ಭಕ್ತಿ-ಜ್ಯೋತಿಷ್ಯ

ವರ್ಷದ ಮೊದಲ ಸೂರ್ಯ ಗ್ರಹಣ: ಭಾರತದಲ್ಲಿ ಗೋಚಾರವಿದೆಯೇ? ಗ್ರಹಣದ ಸಮಯವೇನು?

ಈ ಮೂಲಕ 2026ರ ಮೊದಲ ಸೂರ್ಯಗ್ರಹಣ ಒಟ್ಟು 4 ಗಂಟೆ 32 ನಿಮಿಷಗಳ ಕಾಲ ಸಂಭವಿಸಲಿದ್ದು, ಇಡೀ ಜಗತ್ತಿನ ಗಮನ ಇದೀಗ ಸೂರ್ಯನತ್ತ ನೆಟ್ಟಿದೆ. ಅಲ್ಲದೇ ಈ ಖಗೋಳ ವಿಸ್ಮಯದ ಮೂಲಕ ವಿಜ್ಞಾನಿಗಳು ನೂರಾರು ಸಂಶೋಧನೆ ನಡೆಸಲು ಸಜ್ಜಾಗಿದ್ದಾರೆ.

ಹಿಂದೂ ಧರ್ಮದಲ್ಲಿ, ಗ್ರಹಣಗಳನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ದಿನದಂದು ಸಂಭವಿಸುವ ಸೂತಕ ಅವಧಿಯಲ್ಲಿ ಯಾವುದೇ ರೀತಿಯ ಪೂಜೆ, ಪುನಸ್ಕಾರಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 17, ಮಂಗಳವಾರದಂದು ನಡೆಯಲಿರುವ ಸೂರ್ಯ ಗ್ರಹಣವು 2026ರ ಮೊದಲನೇ ಸೂರ್ಯ ಗ್ರಹಣವಾಗಿದೆ. ಈ ಕುರಿತು ಒಂದಿಷ್ಟು ಪ್ರಮುಖವಾದ ಮಾಹಿತಿ ಇಲ್ಲಿದೆ.

ಫೆಬ್ರವರಿ 17, 2026 ರಂದು ಸಂಭವಿಸುತ್ತಿರುವ ವರ್ಷದ ಮೊದಲ ಪಾರ್ಶ್ವ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಪ್ರಮುಖವಾಗಿ ಅಂಟಾರ್ಕ್ಟಿಕಾ, ದಕ್ಷಿಣ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಭಾಗಗಳಲ್ಲಿ ಮಾತ್ರ ಕಂಡುಬರಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:45ಕ್ಕೆ ಆರಂಭವಾಗಿ ಸಂಜೆ 5:43ಕ್ಕೆ ಗರಿಷ್ಠ ಮಟ್ಟ ತಲುಪಿ ರಾತ್ರಿ 7:41ಕ್ಕೆ ಮುಕ್ತಾಯವಾಗಲಿದೆ.

ಈ ಮೂಲಕ 2026ರ ಮೊದಲ ಸೂರ್ಯಗ್ರಹಣ ಒಟ್ಟು 4 ಗಂಟೆ 32 ನಿಮಿಷಗಳ ಕಾಲ ಸಂಭವಿಸಲಿದ್ದು, ಇಡೀ ಜಗತ್ತಿನ ಗಮನ ಇದೀಗ ಸೂರ್ಯನತ್ತ ನೆಟ್ಟಿದೆ. ಅಲ್ಲದೇ ಈ ಖಗೋಳ ವಿಸ್ಮಯದ ಮೂಲಕ ವಿಜ್ಞಾನಿಗಳು ನೂರಾರು ಸಂಶೋಧನೆ ನಡೆಸಲು ಸಜ್ಜಾಗಿದ್ದಾರೆ.

ವೈದಿಕ ಗ್ರಂಥಗಳಲ್ಲಿ, ಗ್ರಹಣದಿಂದ ಸೂರ್ಯನು ಸಂಪೂರ್ಣವಾಗಿ ಬಂಧಿತನಾಗುವ ಮೊದಲು ಸೂತಕ ಅವಧಿಗೆ ಒಳಗಾಗುತ್ತಾನೆ. ಸೂರ್ಯ ಗ್ರಹಣಕ್ಕಿಂತ 12 ಗಂಟೆಗಿಂತ ಮೊದಲು ನಡೆಯುವಂತಹ ಈ ಸನ್ನಿವೇಶವನ್ನು ಆಧ್ಯಾತ್ಮಿಕವಾಗಿ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಗ್ರಹಣದ ಸೂತಕ ಅವಧಿಯು ಹಗಲಿನಲ್ಲಿ ಆರಂಭವಾಗುವುದರಿಂದ 2026ರ ಮೊದಲನೇ ಸೂರ್ಯ ಗ್ರಹಣವು ನಮಗೆ ಮಾನ್ಯವಾಗಿರುವುದಿಲ್ಲ. ಹಿಂದೂ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಗ್ರಹಣ ಗೋಚರಿಸದೇ ಇದ್ದರೆ ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆಯಿಲ್ಲ.

ಭಾಗಶಃ ಗ್ರಹಣ ಅಂತ್ಯಗೊಳ್ಳುವ ಸಮಯ: ಸಂಜೆ 7:58ಕ್ಕೆ. 2026ರ ಈ ಮೊದಲ ಸೂರ್ಯ ಗ್ರಹಣವು ಅಂಟಾರ್ಟಿಕ, ಆಫ್ರಿಕಾ, ದಕ್ಷಿಣ ಅಮೆರಿಕದಲ್ಲಿ ಗೋಚರವಾಗಲಿದ್ದು, ಭಾರತದಲ್ಲಿ ಇದರ ಗೋಚರತೆ ಇರುವುದಿಲ್ಲ.

ಸೂರ್ಯಗ್ರಹಣ

ಭೂಮಿ ಎಂಬ ನಮ್ಮ ಗ್ರಹವು, ಸೂರ್ಯ ಎಂಬ ನಮ್ಮದೇ ಸೌರವ್ಯೂಹದ ನಕ್ಷತ್ರದ ಸುತ್ತಲೂ ಸುತ್ತುತ್ತದೆ. ಹೀಗಿದ್ದಾಗ ಚಂದ್ರ ಎಂಬ ಭೂಮಿಯ ಉಪಗ್ರಹ ಭೂಮಿಯ ಸುತ್ತಲೂ ಸುತ್ತುತ್ತದೆ. ಈ ನಡುವೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿ ಸುತ್ತಲೂ ಸುತ್ತು ಹಾಕುತ್ತಾ ಹಾಕುತ್ತಾ ಸೂರ್ಯ ಮತ್ತು ಭೂಮಿಯ ನಡುವೆ ಬಂದ ಸಮಯದಲ್ಲೇ ಈ ಖಗೋಳ ವಿಸ್ಮಯ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಬರುವ ಚಂದ್ರ ತನ್ನ ನೆರಳನ್ನು ಭೂಮಿ ಮೇಲೆ ಬೀಳುವಂತೆ ಮಾಡಿ, ಸೂರ್ಯನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಇದೇ ಸಮಯದಲ್ಲೇ ಸೂರ್ಯ ನಾಪತ್ತೆ ಆಗುವುದು ಮತ್ತು ಆಕಾಶದಲ್ಲಿ ಕತ್ತಲು ಹಾಗೂ ಬೆಳಕಿನ ಆಟ ನಡೆಯುವುದು ಗಮನ ಸೆಳೆಯುತ್ತದೆ.

ಗ್ರಹಣದ ಸಮಯದಲ್ಲಿ ಪಠಿಸಬಹುದಾದ ಪ್ರಮುಖ ಮಂತ್ರಗಳು

ಸೂರ್ಯ ಬೀಜ ಮಂತ್ರ: "ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ" - (108 ಬಾರಿ ಪಠಿಸುವುದು ಉತ್ತಮ). ಸೂರ್ಯ ಗಾಯತ್ರಿ ಮಂತ್ರ: "ಓಂ ಆದಿತ್ಯಾಯ ವಿದ್ಮಹೇ. ದಿವಾಕರಾಯ ಧೀಮಹಿ. ತನ್ನೋ ಸೂರ್ಯಃ ಪ್ರಚೋದಯಾತ್‌" ಮಂತ್ರ ಪಠಿಸಬಹುದು. ಗ್ರಹಣ ಆರಂಭವಾದ ಸಮಯದಿಂದ ಅಂತ್ಯವಾಗುವವರೆಗೂ ಈ ಮಂತ್ರಗಳನ್ನು ಜಪಿಸಬಹುದು, ಸ್ನಾನ ಮಾಡಿ, ಶುಚಿರ್ಭೂತರಾಗಿ ಮನಸ್ಸಿನಲ್ಲಿಯೇ ಮಂತ್ರವನ್ನು ಪಠಿಸುವುದು ಸೂಕ್ತ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT