ಎಐ ಚಿತ್ರ 
ಭಕ್ತಿ-ಜ್ಯೋತಿಷ್ಯ

ಪೂಜಾ ಸಮಯದಲ್ಲಿ ಘಂಟಾನಾದದ ಪ್ರಾಮುಖ್ಯತೆ: ಗರುಡ ಚಿತ್ರವಿರುವ ಗಂಟೆಯ ಬಳಕೆಯೇ ಹೆಚ್ಚು ಸೂಕ್ತ!

ದೇವಾಲಯಗಳಲ್ಲಿ ಅಥವಾ ಪೂಜೆಯ ಸಮಯದಲ್ಲಿ ಬಾರಿಸುವ ಗಂಟೆಯ ಮೊಟ್ಟ ಮೊದಲ ನಾದವು ಪ್ರಮುಖವಾಗಿ ಓಂಕಾರ (ಓಂ) ಧ್ವನಿಯನ್ನು ಉತ್ಪತ್ತಿ ಮಾಡುತ್ತದೆ.

ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದಕ್ಕೆ ವಿಶೇಷ ನಿಯಮಗಳು ಮತ್ತು ಧಾರ್ಮಿಕ ಮಹತ್ವಗಳಿವೆ. ಗಂಟೆಯ ನಾದವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

ಗಂಟೆ ಬಾರಿಸುವುದರಿಂದ ಬರುವ ಸ್ಪಷ್ಟವಾದ ನಾದವು ಮನಸ್ಸಿಗೆ ಶಾಂತಿ ನೀಡಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಪೂಜೆ ಅಥವಾ ಆರತಿಯ ಸಮಯದಲ್ಲಿ ಗಂಟೆ ಬಾರಿಸುವುದರಿಂದ ದೇವರಲ್ಲಿ ನಮ್ಮ ಗಮನ ಕೇಂದ್ರೀಕಕರಣ ಮತ್ತು ಭಕ್ತಿಯನ್ನು ಸಮರ್ಪಿಸಲು ಸಾಧ್ಯವಾಗುತ್ತದೆ. ದೇವಾಲಯಗಳಲ್ಲಿ ಅಥವಾ ಪೂಜೆಯ ಸಮಯದಲ್ಲಿ ಬಾರಿಸುವ ಗಂಟೆಯ ನಾದವು ಪ್ರಮುಖವಾಗಿ ಓಂಕಾರ (ಓಂ) ಧ್ವನಿಯನ್ನು ಉತ್ಪತ್ತಿ ಮಾಡುತ್ತದೆ.

ಗಂಟೆ ಬಾರಿಸಿದಾಗ ಹೊರಹೊಮ್ಮುವ ಮೊಟ್ಟಮೊದಲ ನಾದವು ಓಂಕಾರದ ಸ್ವರೂಪಿಯಾಗಿದೆ. ಪೂಜಾ ಸಮಯದಲ್ಲಿ ಮನಸ್ಸಿಗೆ ಶಾಂತಿ ಹಾಗೂ ಏಕಾಗ್ರತೆಯನ್ನು ತರುತ್ತದೆ. ಕಂಚು ಮತ್ತು ಇತರ ಲೋಹಗಳ ಮಿಶ್ರಣದಿಂದ ತಯಾರಿಸುವ ಗಂಟೆಯ ವಿಶೇಷ ಕಂಪನಗಳು (vibrations) ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಿ ಸಕಾರಾತ್ಮಕತೆ ಹೆಚ್ಚಿಸುತ್ತವೆ.

ಗಂಟೆಯ ಧ್ವನಿಯು ಮನುಷ್ಯನ ಎಡ ಮತ್ತು ಬಲ ಮಿದುಳಿನ ಸಮತೋಲನಕ್ಕೆ ಸಹಾಯ ಮಾಡುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ. ಆರೋಗ್ಯ ರಕ್ಷಣೆಯ ಭಾಗವಾಗಿರುವ 'ಸೌಂಡ್ ಥೆರಪಿ' (ಸೌಂಡ್ ಹೀಲಿಂಗ್) ವಿಧಾನಗಳಲ್ಲಿ ಇಂತಹ ಗಂಟೆಗಳಲ್ಲಿ ನಾದವು ವೈಬ್ರೇಶನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಮುಖ್ಯವಾಗಿ ದೇವರಿಗೆ ದೀಪಾರಾಧನೆ (ಆರತಿ) ಮಾಡುವಾಗ, ನೈವೇದ್ಯ ಸಮರ್ಪಿಸುವಾಗ ಮತ್ತು ಪೂಜೆಯ ಆರಂಭದಲ್ಲಿ ದೇವತಾ ಆಹ್ವಾನಕ್ಕಾಗಿ ಗಂಟೆ ಬಾರಿಸಬೇಕು.ಎಡಗೈಯಲ್ಲಿ ಗಂಟೆ, ಬಲಗೈಯಲ್ಲಿ ಆರತಿ: ಗಂಟೆಯನ್ನು ಯಾವಾಗಲೂ ಎಡಗೈಯಿಂದ ಬಾರಿಸಬೇಕು ಮತ್ತು ಬಲಗೈಯಿಂದ ದೇವರಿಗೆ ಆರತಿ ಅಥವಾ ಪೂಜೆ ನೆರವೇರಿಸಬೇಕು.

ಗಂಟೆಯನ್ನು ಜೋರಾಗಿ ಅಥವಾ ಕರ್ಕಶವಾಗಿ ಬಾರಿಸಬಾರದು. ಅದರ ನಾದವು ಮಧುರ ಹಾಗೂ ಲಯಬದ್ಧವಾಗಿರಬೇಕು (ಒಂದೇ ಸಮನೆ ಸಾಗಬೇಕು). ಕೆಲವು ಸಂಪ್ರದಾಯಗಳ ಪ್ರಕಾರ, ದೇವರಿಗೆ ಮುಖ್ಯ ನೈವೇದ್ಯವನ್ನು ಇಟ್ಟು ಪ್ರಾರ್ಥಿಸುವಾಗ ಗಂಟೆ ಬಾರಿಸುತ್ತಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ಅಥವಾ ಮನೆಯ ದೇವರ ಕೋಣೆಯ ಪರದೆಯನ್ನು ಮುಚ್ಚಲಾಗುತ್ತದೆ. ಪೂಜೆ ಸಂಪೂರ್ಣವಾಗಿ ಮುಗಿದ ಮೇಲೆ ಗಂಟೆಯನ್ನು ಅದರ ನಿಗದಿತ ಜಾಗದಲ್ಲಿ ಗೌರವಪೂರ್ವಕವಾಗಿ ಇಡಬೇಕು. ಅದನ್ನು ನೆಲದ ಮೇಲೆ ಹಾಗೆಯೇ ಬಿಡಬಾರದು.

ಒಂದು ಗಂಟೆಯ ಧ್ವನಿಯಲ್ಲಿ ಉಂಟಾಗುವ ಶಬ್ದದ ರೂಪ, ಗಾತ್ರ, ತಯಾರಿಕೆಯ ವಿಧಾನ, ಲೋಹದ ಆಧಾರದ ಮೇಲೆ ವಿಭಿನ್ನವಾದ ಸ್ವರವೂ ಪ್ರತಿಧ್ವನಿಯೂ ಇರುತ್ತದೆ. ಆ ಶಬ್ದವು ಸ್ವಲ್ಪ ಸಮಯದವರೆಗೆ ಇರುತ್ತದೆ. ಇದರ ಶಬ್ದದಿಂದ ಶ್ರೋತೃವಿನ ಗಮನವು ಸ್ವಾಭಾವಿಕವಾಗಿ ಅದರ ಕಡೆಗೆ ತಿರುಗುತ್ತದೆ.

ಆದ್ದರಿಂದ ಗಂಟೆ ಎಂಬುದು ಕೇವಲ ಲೋಹವಸ್ತು ಮಾತ್ರವಲ್ಲ. ನಂಬಿಕೆಯ ಆಚಾರವನ್ನೂ ಶಬ್ದ ವಿಜ್ಞಾನದ ಪರಂಪರೆಯ ಸಾಂಸ್ಕೃತಿಕ ಸಂಕೇತವಾಗಿದೆ. ಗಂಟೆನಾದ ಕೇಳುವಾಗ ಮನಸ್ಸು ಒಂದು ಕ್ಷಣ ನಿಶ್ಚಲವಾಗುತ್ತದೆ. ಆ ಕ್ಷಣದ ಪ್ರಾರ್ಥನೆಯ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಬದಲಾಯಿಸುವಲ್ಲಿ ಗಂಟೆಯ ಪಾತ್ರ ಪ್ರಮುಖವಾಗಿದೆ.

ನೀವು ಗರುಡನ ಚಿತ್ರವಿರುವ ಗಂಟೆಯನ್ನೇ ಪೂಜೆಗೆ ಬಳಸುವುದು ಸೂಕ್ತ. ಇದು ಸಾಮಾನ್ಯ ಗಂಟೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ದೇವರ ಕೋಣೆಯಲ್ಲಿ ವಿಗ್ರಹದ ಎಡ ಭಾಗದಲ್ಲಿ ಗಂಟೆಯನ್ನು ಇಡುವುದರಿಂದ ನಿಮ್ಮೆಲ್ಲ ಆಸೆ ಈಡೇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!