ವಾಹನ

ಮತ್ತೊಂದು ಡ್ರೀಮ್...

'ಡ್ರೀಮ್ ಯುಗ'ದ ನಂತರ ಹೋಂಡಾ ದ್ವಿಚಕ್ರ ವಾಹನ ಸಂಸ್ಥೆಯು ಮತ್ತೊಂದು ಡ್ರೀಮ್ ಅನ್ನು ಸಾದರಪಡಿಸಿದೆ. ಅದು ಡ್ರೀಮ್ ನಿಯೋ!
ಬೆಲೆ ಏರಿಕೆಯ ಈ ದಿನಗಳಲ್ಲಿ ಗ್ರಾಹಕಗರನ್ನು ಸೆಳೆಯುವು ಉದ್ದೇಶವೂ ಈ ಕನಸಿನ ಹಿಂದಿದೆ. ಅಲ್ಲದೆ, 110 ಸಿಸಿಯ ಈ ಬೈಕು ಮಾರುಕಟ್ಟೆಯಲ್ಲಿ ಯಾವ ಮಟ್ಟಕ್ಕೆ ಕ್ಲಿಕ್ಕಾಗುತ್ತದೋ ಗೊತ್ತಿಲ್ಲ. ದೇಶದ ಮಧ್ಯಮ ವರ್ಗದ ಜನರ ಕನಸು ಈಡೇರಿಸುವ ನಿಟ್ಟಿನಲ್ಲಿ 'ಡ್ರೀಮ್‌' ಬ್ರಾಂಡ್ ಅನ್ನು ಇನ್ನಷ್ಟು ಖ್ಯಾತಿಗೊಳಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಹೀಗಾಗಿ, ಮುಂದಿನಗಳಲ್ಲಿ ಇನ್ನಷ್ಟು ಡ್ರೀಮ್ ಸರಣಿಯ ಬೈಕ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು. ಉತ್ತಮ ಇಂಧನ ಕ್ಷಮತೆ ಹಾಗೂ ಕಡಿಮೆ ಬೆಲೆಯು ಡ್ರೀಮ್ ಸರಣಿಯ ಆದ್ಯತಾ ಕ್ಷೇತ್ರವಾಗಿದೆ.
ಕಂಪನಿ ಹೇಳಿಕೊಳ್ಳುವ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್‌ಗೆ 74 ಕಿ.ಮೀ. ಇಂಧನ ಕ್ಷಮತೆ ದೊರೆಯುತ್ತದೆ. ಮಾರುಕಟ್ಟೆಯ ಆರಂಭಿಕ ಬೆಲೆ ರು. 44,319. ಇವೆರಡು ಅಂಶಗಳ ಮೂಲಕ 100-110 ಸಿಸಿ ಮಾರುಕಟ್ಟೆಯನ್ನು ಕೇಂದ್ರೀಕರಿಸಲು ಹೋಂಡಾ ನಿರ್ಧರಿಸಿದೆ. ಹೆಚ್ಚು ಸಿಸಿ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಸಂದರ್ಭದಲ್ಲಿ ಮತ್ತು ಗ್ರಾಹಕರು ಕೂಡ ಅದರತ್ತ ಆಕರ್ಷಿತರಾಗುತ್ತಿರುವ ಸಮಯದಲ್ಲಿ 100-110ಸಿಸಿ ಬೈಕ್ ಮಾರುಕಟ್ಟೆಗೆ ಪರಿಚಯಿಸಿರುವುದು ವಿಶೇಷ.
ಇದರ ವಿನ್ಯಾಸದಲ್ಲೂ ಕೆಲವೊಂದು ಬದಲಾವಣೆಗಳಿವೆ. ಇಂಧನ ಟ್ಯಾಂಕ್ ಮೇಲೆ ಡ್ಯುಯಲ್ ಟೋನ್ ಗ್ರಾಫಿಕ್ ಸ್ಟಿಕ್ಕರ್, ಏರೋಡೈನಾಮಿಕ್ ಫ್ರಂಟ್ ಕೌಲ್ ಜತೆ ಸೈಡ್ ಪ್ಯಾನಲ್, ವಜ್ರಾಕಾರದ ಹೆಡ್‌ಲೈಟ್... ಇದರ ವಿಶೇಷ. ಮತ್ತೊಂದೆಡೆ 6 ಸ್ಪೋಕ್ ಇರುವ ಅಲೈ ವ್ಹೀಲ್‌ಗಳನ್ನು ನೀಡಲಾಗಿದೆ.
ಡ್ರೀಮ್ ನಿಯೋ ಗಾಡಿಯು 3 ವಿಧಗಳಲ್ಲಿ ಮತ್ತು 6 ಬಣ್ಣಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!