ವಾಹನ

ಕ್ಸೈಲೋ ಸ್ಟೋಲೋ

ಮಹೀಂದ್ರಾ ಕ್ಸೈಲೋ ಕಾರು ನವೀನ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದೆ. ವಿನ್ಯಾಸ ಹಾಗೂ ಕಾರ್ಯಕ್ಷಮತೆಯಲ್ಲಿ ಕೆಲ ಬದಲಾವಣೆಗಳೊಂದಿಗೆ ಕ್ಸೈಲೋ ಎಚ್ ಮಾದರಿಯು ಮಾರುಕಟ್ಟೆಗೆ ದಾಳಿ ಇಟ್ಟಿದೆ. ಎಂ- ಹಾಕ್ ಎಂಜಿನ್, ಪ್ರಾರಂಭಿಕ ಶ್ರೇಣಿಯಲ್ಲಿಯೇ ಏಬಿಎಸ್, ವೈಸ್ ಕಮಾಂಡ್ ತಂತ್ರಜ್ಞಾನ, ಕ್ರ್ಯೂಸ್ ಕಂಟ್ರೋಲ್ ಹಾಗೂ ಇತರೆ ಕೆಲ ವಿಶೇಷ ಅಂಶಗಳನ್ನು ಅಳವಡಿಸಲಾಗಿದೆ.
ಕಂಪನಿಯೇ ಹೇಳಿಕೊಂಡಂತೆ ಎಚ್-4, ಎಚ್-8 ಮತ್ತು ಎಚ್-9 ಮಾದರಿಯಲ್ಲಿ ನೂತನ ಕ್ಸೈಲೋ 50 ವಿಶೇಷ ಬದಲಾವಣೆಗಳೊಂದಿಗೆ ಲಭ್ಯವಿದೆ. ಕಾರಿನ ಹೊರ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಹೆಡ್‌ಲ್ಯಾಂಪ್, ಬಂಪರ್, ಬೊನೆಟ್ ಮೇಲಿನ ಮಹೀಂದ್ರಾ ಲೋಗೊವನ್ನು ನವೀಕರಿಸಲಾಗಿದೆ. ಇದಲ್ಲದೇ ಫೂಟ್ ಸ್ಟೆಪ್ ಹಾಗೂ ರೂಪ್‌ಗಳನ್ನು ಬದಲಿಸಲಾಗಿದ್ದು, ಕಾರು ಇನ್ನಷ್ಟು ಆಕರ್ಷಕವಾಗಿ ಗೋಚರಿಸುತ್ತದೆ. ಅಲ್ಪಮಟ್ಟಿಗೆ ಇನೋವಾ ವಿನ್ಯಾಸಕ್ಕೆ ಹೋಲಿಕೆ ಮಾಡಲು ಪ್ರಯತ್ನಿಸಿದ್ದು, ಹಳೆಯ ಮಾದರಿಗಿಂತ ಉತ್ತಮವಾಗಿ ಕಾಣುತ್ತದೆ. ಒಳ ವಿನ್ಯಾಸದಲ್ಲಿಯೂ ಬದಲಾವಣೆ ತರಲಾಗಿದ್ದು, ಡ್ಯಾಶ್‌ಬೋರ್ಡ್, ಕನ್ಸೋಲ್ ಹಾಗೂ ಪ್ಯಾನಲ್ ನವೀಕರಿಸಲಾಗಿದೆ.
ಎಂ- ಹಾಕ್ ಎಂಜಿನ್ ಹೊಂದಿರುವ ಕ್ಸೈಲೋ ಎಚ್ ಮಾದರಿಯು 120 ಪಿಎಶ್ ಸಾಮರ್ಥ್ಯ ಹಾಗೂ ಪ್ರತಿ ಲೀಟರ್‌ಗೆ 14 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ.
ಎಚ್-8 ಶ್ರೇಣಿಯಲ್ಲಿ 2 ಪ್ರತ್ಯೇಕ ಏರ್‌ಬ್ಯಾಗ್, ಡಿಜಿಟಲ್ ಡ್ರೈವ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಅಸಿಸ್ಟನ್ಸ್ ಸೌಲಭ್ಯವಿದೆ. ಇದರೊಂದಿಗೆ ಈಗಾಗಲೇ ಹೇಳಿದಂತೆ ಕ್ರ್ಯೂಸ್ ಕಂಟ್ರೋಲ್ ಹಾಗೂ ವೈಸ್ ಕಮಾಂಡ್ ತಂತ್ರಜ್ಞಾನವೂ ಲಭ್ಯವಿದೆ. ಮಹೀಂದ್ರಾ ಕ್ಸೈಲೋದ ಹಳೆಯ ಮಾದರಿ ಕಾರಿನಲ್ಲಿ ಈ ಸೌಲಭ್ಯವಿರಲಿಲ್ಲ.
ಭಾರತದ ಎಸ್‌ಯುವಿ ಕಾರುಗಳ ಮಾರುಕಟ್ಟೆಗೆ ಲಗ್ಗೆ ಇಡಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಮಹೀಂದ್ರಾ ಕಂಪನಿಯು ಕ್ಸೈಲೋ ಕಾರಿನ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದೆ. ಆದರೆ ಎಕ್ಸ್‌ಯುವಿ ಹೊರತಾಗಿ ಉಳಿದ ಕಾರುಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದೇ ಕಾರಣದಿಂದ ಪದೇ ಪದೇ ಕ್ಸೈಲೋ ಕಾರಿನಲ್ಲಿ ಬದಲಾವಣೆ ತರಲಾಗುತ್ತಿದೆ. ಮಾರುಕಟ್ಟೆಯಲ್ಲಿ ರು. 8.23 ಲಕ್ಷ ದರದಿಂದ ಕಾರು ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video