ವಾಹನ

ದೊಡ್ಡ ಕನಸು

ಇಂದು ಸಂಸಾರ ಸಣ್ಣದಾದರೂ ದೊಡ್ಡ ಕಾರು ಬೇಕು. ಅದರಲ್ಲಿ ಐಷಾರಾಮಿ ಸೌಲಭ್ಯಗಳು ಬೇಕು. ಎಸಿ, ಮೂಸಿಕ್ ಸಿಸ್ಟಂ, ಪವರ್ ವಿಂಡೋಗಳು ಇರಲೇಬೇಕು...

ಇಂದು ಸಂಸಾರ ಸಣ್ಣದಾದರೂ ದೊಡ್ಡ ಕಾರು ಬೇಕು. ಅದರಲ್ಲಿ ಐಷಾರಾಮಿ ಸೌಲಭ್ಯಗಳು ಬೇಕು. ಎಸಿ, ಮೂಸಿಕ್ ಸಿಸ್ಟಂ, ಪವರ್ ವಿಂಡೋಗಳು ಇರಲೇಬೇಕು...

ಸಣ್ಣ ಕಾರುಗಳ ಜಮಾನಾ ಒಂದಿತ್ತು. ಅದನ್ನು ಬಿಟ್ಟರೆ ಬೇರೆ ಕಾರುಗಳನ್ನು ತಿರುಗಿ ನೋಡುವವರೂ ಇರಲಿಲ್ಲ. ಕಂಪನಿಗಳೂ ಸಣ್ಣ ಕಾರುಗಳಿಗೇ ಮೊದಲ ಆದ್ಯತೆ ನೀಡುತ್ತಿದ್ದವು. ದರವೂ ಕಡಿಮೆ, ಮೈಲೇಜೂ ಚೆನ್ನಾಗಿ ಸಿಗುತ್ತೆ. 5 ಜನಕ್ಕೆ ತೊಂದರೆಯಿಲ್ಲ ಎಂಬ ಭಾವನೆ ಇತ್ತು.
ಆದರೀಗ ಭಾರತೀಯ ಕಾರು ಗ್ರಾಹಕ ಬದಲಾಗಿದ್ದಾನೆ. ದಿಢೀರನೆ ಎಸ್‌ಯುವಿ, ಮಿನಿ ಎಸ್‌ಯುವಿಗಳತ್ತ ಆಕರ್ಷಿತನಾಗಿದ್ದಾನೆ. ಮೈಲೇಜ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ದೊಡ್ಡ ವಾಹನ ಇರಬೇಕು. ಅದರಲ್ಲಿ ಐಷಾರಾಮಿ ಸೌಲಭ್ಯಗಳಿರಬೇಕು. ದೂರದ ಎಲ್ಲೆಂದರಲ್ಲಿ ಹೋಗುವಂತಿರಬೇಕು ಎಂದು ಬಯಸುತ್ತಿದ್ದಾನೆ. ಪರಿಣಾಮವಾಗಿ ಡಸ್ಟರ್, ಇಕೋಸ್ಪೋರ್ಟ್, ಟೆರ್ರಾನೋಗಳಂತೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ಇದರ ಜತೆಗೆ ಎಸ್‌ಯುವಿಗಳಾದ ಸಫಾರಿ, ಎಕ್ಸ್‌ಯುವಿ, ಫಾರ್ಚುನರ್, ಇನ್ನೋವಾಗಳಿಗೂ ಬೇಡಿಕೆ ಹೆಚ್ಚಾಗಿದೆ. ಇವು ಹೆಚ್ಚು ಜನರನ್ನು ತೆಗೆದುಕೊಂಡು ಹೋಗುವ ಸಾಮರ್ಥ್ಯದ ಜತೆಗೆ ಎಂಥ ರಸ್ತೆಯಲ್ಲಾದರೂ ಹೋಗುವ ಕ್ಷಮತೆ ಹೊಂದಿವೆ. ಹೊಂಡ, ಉಬ್ಬು, ತಗ್ಗು ಇರುವ ರಸ್ತೆಗಳಲ್ಲೂ ಸುಲಲಿತವಾಗಿ ಹೋಗುವುದು ಇವುಗಳ ವೈಶಿಷ್ಟ್ಯ. ಜತೆಗೆ ಎಸಿ, ಪವರ್ ವಿಂಡೋ ಮತ್ತು ಉತ್ತಮ ಸಸ್ಪೆನ್ಷನ್ ಈ ವಾಹನಗಳ ಪ್ಲಸ್ ಪಾಯಿಂಟ್.
ಇದರ ಜತೆಗೆ ಭಾರಿ ವಾಹನಗಳ ಪ್ರೇಮಿಗಳಿಗೆಂದೇ ಜೀಪ್ ಗ್ರ್ಯಾಂಡ್ ಚರೋಕಿಯಂಥ ವಾಹನಗಳು, ಲ್ಯಾಂಡ್ ರೋವರ್, ರೇಂಜ್ ರೋವರ್ ವಾಹನಗಳು ನಮ್ಮ ದೇಶಕ್ಕೆ ಲಗ್ಗೆ ಇಡುತ್ತಿವೆ. ಇವು ಅತ್ಯುನ್ನತ ತಂತ್ರಜ್ಞಾನದ ಜತೆಗೆ ಅತ್ಯುತ್ಕೃಷ್ಟ ಐಷಾರಾಮಿ ಸಾಧನಗಳನ್ನೂ ಹೊಂದಿವೆ. ಅಷ್ಟೇ ದುಬಾರಿ ಕೂಡ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ಕಾರು ಗ್ರಾಹಕನ ಮನಸ್ಥಿತಿ ಬದಲಾಗುತ್ತಿದೆ. ಮೊದಲು ಕುಟುಂಬಗಳು ದೊಡ್ಡದಾಗಿದ್ದವು. ಆದರೆ ಸಣ್ಣ ಕಾರಿನತ್ತ ಹೆಚ್ಚು ಆಸಕ್ತಿ ಇತ್ತು. ಕಾರು ಅಂದರೆ ಐಷಾರಾಮಿ ಎಂಬ ಭಾವನೆ ಇತ್ತು. ಕಾರಿಗಾಗಿ ಹೆಚ್ಚು ಹಣ ತೊಡಗಿಸಲು ಇಷ್ಟಪಡುತ್ತಿರಲಿಲ್ಲ. ವಿಶೇಷವಾಗಿ ಕಾರಿನಲ್ಲಿ ದೂರ ಪ್ರಯಾಣ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಇತ್ತು. ಇದರ ಪರಿಣಾಮವಾಗಿಯೇ ಕಾರಿನಲ್ಲಿ ಐಷಾರಾಮಿ ಸೌಕರ್ಯಗಳ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸ್ವಲ್ಪ ದೂರದ ಪ್ರಯಾಣಕ್ಕೆ ಕಾರಿನಲ್ಲಿ ಐಷಾರಾಮಿ ಸೌಲಭ್ಯಗಳು ಇಲ್ಲದಿದ್ದರೂ ಅದರ ಅರಿವು ಪ್ರಯಾಣಿಕರಿಗೆ ಆಗುತ್ತಿರಲಿಲ್ಲ.
ಇಂದು ಸಂಸಾರ ಸಣ್ಣದಾದರೂ ದೊಡ್ಡ ಕಾರು ಬೇಕು. ಅದರಲ್ಲಿ ಐಷಾರಾಮಿ ಸೌಲಭ್ಯಗಳು ಬೇಕು. ಎಸಿ, ಮೂಸಿಕ್ ಸಿಸ್ಟಂ, ಪವರ್ ವಿಂಡೋಗಳು ಇರಲೇಬೇಕು. ಕಾರಣ ಕಾರುಗಳಲ್ಲಿ ದೂರದ ಪ್ರಯಾಣಕ್ಕೆ ಹೆಚ್ಚು ಒಲವು ಕಾಣುತ್ತಿದೆ. ದೂರ ದೂರದ ಪ್ರವಾಸಕ್ಕೆ ಸ್ವಂತ ವಾಹನದಲ್ಲೇ ತೆರಳುವ, ವೀಕೆಂಡ್ ಪ್ರವಾಸಕ್ಕೆ ಸಂಸಾರ, ಗೆಳೆಯರ ಸಮೇತ ತೆರಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬೆಂಗಳೂರಿನಿಂದ ಸಮೀಪದ ಪ್ರವಾಸಿ ತಾಣಗಳಿಗೆ ಪ್ರತಿ ವಾರಾಂತ್ಯಕ್ಕೆ ತೆರಳುವವರ ಸಂಖ್ಯೆಯೇ ಇತ್ತೀಚೆಗೆ ಗಣನೀಯವಾಗಿ ಹೆಚ್ಚಿರುವುದನ್ನು ಕಾಣಬಹುದು. ಇಂಥ ಪ್ರವಾಸಗಳಿಗೆ ಎಸ್‌ಯುವಿಗಳು ಹೇಳಿ ಮಾಡಿಸಿದ ವಾಹನಗಳು.
ಈ ವೇಳೆ ಅಗತ್ಯ ಸಲಕರಣೆಗಳನ್ನೆಲ್ಲ ತುಂಬಿಕೊಂಡು, ಅದರ ಜತೆಗೆ ಒಂದಷ್ಟು ಗೆಳೆಯರನ್ನೂ ಜತೆಗೆ ಕರೆದುಕೊಂಡು ಹೋಗಲು ಎಸ್‌ಯುವಿಗಳು ಅತ್ಯಂತ ಸೂಕ್ತ. 5 ಜನರ ಜತೆಗೆ ಸಾಕಷ್ಟು ಸಾಮಗ್ರಿಗಳು ಅಥವಾ ಕಡಿಮೆ ಸಾಮಗ್ರಿಗಳ ಜತೆಗೆ 6-7 ಜನರನ್ನು ಸಾಗಿಸುವ ಸಾಮರ್ಥ್ಯ ಎಸ್‌ಯುವಿಗಳಿಗಿದೆ. ಕ್ಯಾರಿಯರ್ ಹಾಕಿಬಿಟ್ಟರಂತೂ 7 ಜನರ ಜತೆಗೆ ಬೇಕಾದಷ್ಟು ಸಾಮಗ್ರಿಗಳನ್ನು ಅವು ಹೊತ್ತೊಯ್ಯಬಲ್ಲವು.
ದೂರದೂರಿನ ಪ್ರವಾಸಗಳಿಗೆ, ಗೊತ್ತಿಲ್ಲದ ಪ್ರದೇಶ, ರಸ್ತೆಗಳಿಗೆ ಪ್ರವಾಸ ಕೈಗೊಳ್ಳಲು ಎಸ್‌ಯುವಿಗಳಿಗಿಂತ ಉತ್ತಮ ವಾಹನ ಬೇರೊಂದಿಲ್ಲ. ಅನಿರೀಕ್ಷಿತವಾಗಿ ಎದುರಾಗುವ ಕೆಟ್ಟ ರಸ್ತೆ, ದೊಡ್ಡ ಹಂಪು, ನೀರು ತುಂಬಿದ ಹೊಂಡ ಹೀಗೆ ಏನನ್ನು ಬೇಕಾದರೂ ಹತ್ತಿಳಿದು ಹೋಗುವ ತಾಕತ್ತು ಎಸ್‌ಯುವಿಗಳಿಗಿರುತ್ತದೆ. ಹೆಚ್ಚು ಸಾಮರ್ಥ್ಯದ ಎಂಜಿನ್, ಹೆಚ್ಚು ಸುಖ, ವೇಗದ ಪ್ರಯಾಣ, ಅನೂಹ್ಯ ಸವಾಲುಗಳನ್ನು ಎದುರಿಸುವ ತಾಕತ್ತೇ ಎಸ್‌ಯುವಿಗಳ ಪ್ರಮುಖ ಆಕರ್ಷಣೆ. ಆದರೆ ಸಣ್ಣ ಕಾರುಗಳು ಇಂಥ ಸನ್ನಿವೇಶಗಳಲ್ಲಿ ಅಸಮರ್ಥ ಎನಿಸಿಬಿಡುತ್ತವೆ. ಇಂಥ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಚಾಲಕ ಹರಸಾಹಸ ಪಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಪ್ರಯಾಣ ಅತ್ಯಂತ ನಿಧಾನವಾಗಿ, ಪ್ರಯಾಸ ತಂದೊಡ್ಡಿಬಿಡುತ್ತದೆ.
ಈ ಎಲ್ಲ ಕಾರಣಗಳಿಗಾಗಿ ಭಾರತೀಯ ಕಾರು ಗ್ರಾಹಕ ದೊಡ್ಡ ವಾಹನಗಳತ್ತ ಆಕರ್ಷಿತನಾಗಿದ್ದಾನೆ. ಸಣ್ಣ ಕಾರುಗಳನ್ನು ಬಯಸುವ ಗ್ರಾಹಕರೂ ಮಿನಿ ಎಸ್‌ಯುವಿಗಳಾದ ಡಸ್ಟರ್, ಟೆರ್ರಾನೋ, ಇಕೋಸ್ಪೋರ್ಟ್ ಮುಂತಾದ ವಾಹನಗಳತ್ತ ದೃಷ್ಟಿಹಾಯಿಸುತ್ತಿದ್ದಾನೆ. ಇದಕ್ಕೂ ಕಾರಣ ಅದೇ ಆಗಿದೆ. ಅಪರಿಚಿತ ರಸ್ತೆಗಳು ಒಡ್ಡಬಹುದಾದ ಅನೂಹ್ಯ ಸವಾಲುಗಳನ್ನು ಇವು ಸಮರ್ಥವಾಗಿ ನಿಭಾಯಿಸಬಲ್ಲವು. ಅದರಲ್ಲೂ ದಿನಕ್ಕೊಂದು ರೂಪ ಪಡೆಯುವ ನಮ್ಮ ರಸ್ತೆಗಳಲ್ಲಿ ಇದೇ ಮುಖ್ಯ ಅಂಶವಾಗುತ್ತಿದೆ.

ಹೆಚ್ಚು ಸಿಸಿಯ ಕ್ರೇಜ್
ಬೈಕ್ ಸವಾರರೂ ಹೆಚ್ಚು ಪವರ್ ಪ್ರಿಯರಾಗುತ್ತಿರುವುದು ಹೊಸ ಸಂಗತಿಯೇನಲ್ಲ. ಆರಂಭದಲ್ಲಿ 100ಸಿಸಿ ಬೈಕ್‌ಗಳಿಗೆ ಇರುವ ಬೇಡಿಕೆ ಬೇರೆ ಯಾವುದೇ ಬೈಕ್‌ಗಳಿಗೆ ಇರಲಿಲ್ಲ. ಅತ್ಯಂತ ಹೆಚ್ಚು ಮೈಲೇಜ್ ಸಿಗುತ್ತಿದ್ದುದೇ ಈ ಬೈಕ್‌ಗಳಲ್ಲಿ. ಆದರೆ, ಬೈಕ್ ಗ್ರಾಹಕರ ಮನಸ್ಥಿತಿಯಲ್ಲೂ ಭಾರಿ ಬದಲಾವಣೆಯಾಗಿದೆ. 250 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳ ಕ್ರೇಜಿಲೋಕ ತೆರೆದುಕೊಂಡಿದೆ. ಈಗ 100 ಸಿಸಿ ಬೈಕ್‌ಗಳಿಗಿಂತ 150, 200, 250 ಸಿಸಿ ಬೈಕ್‌ಗಳಿಗೆ ಹೆಚ್ಚು ಬೇಡಿಕೆ ಕಾಣುತ್ತಿದೆ. 100 ಸಿಸಿ ಬೈಕ್‌ಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿವೆ.
ಬೈಕ್ ಗ್ರಾಹಕರು ಮೈಲೇಜ್‌ಗೆ ಒತ್ತು ಕೊಡುತ್ತಾರಾದರೂ, ಅದೇ ಮುಖ್ಯವಾಗಿ ಉಳಿದಿಲ್ಲ. ಅವರು ಮೈಲೇಜ್‌ನೊಂದಿಗೆ ಕೊಂಚ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಪವರ್ ಬಯಸುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಗೂ ಭಾರಿ ಬೈಕ್‌ಗಳು ಹೆಚ್ಚು ಹೆಚ್ಚು ಬರುತ್ತಿರುವುದೇ ಗ್ರಾಹಕರಲ್ಲಾಗುತ್ತಿರುವ ಬದಲಾವಣೆಗೆ ಸಾಕ್ಷಿ.
ತುಂಬಾ ದುಬಾರಿ ಬೈಕ್‌ಗಳಾದ ಹ್ಯಾರ್ಲಿ ಡೆವಿಡ್‌ಸನ್, ಹ್ಯೂಸಂಗ್ ಮುಂತಾದ ಬೈಕ್‌ಗಳು ಕಂಪನಿಗಳ ನಿರೀಕ್ಷೆಗೆ ತಕ್ಕಷ್ಟು ಮಾರಾಟವಾಗದಿದ್ದರೂ, ಪಲ್ಸರ್ 150, 200, ಡ್ಯೂಕ್, ಎನ್‌ಫೀಲ್ಡ್ ಮುಂತಾದ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತಿವೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ