ವಾಹನ

ಹಾಳು ಹಂಪಿ !

ಹಂಪಿ ಎನ್ನುವ ಎರಡಕ್ಷರ ಕೇಳಿದಾಕ್ಷಣ ಪುಳಕಗೊಳ್ಳದವರು ಯಾರು? ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಶಿಲ್ಪವೈಭವ ಯಾರ ...

ಹಂಪಿ ಎನ್ನುವ ಎರಡಕ್ಷರ ಕೇಳಿದಾಕ್ಷಣ ಪುಳಕಗೊಳ್ಳದವರು ಯಾರು? ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಶಿಲ್ಪವೈಭವ ಯಾರ ಕಣ್ಮುಂದೆ ತಾನೆ ಸುಳಿಯುವುದಿಲ್ಲ? ತುಂಗಭದ್ರೆಯ ಮಡಿಲಿನಲ್ಲಿ, 19 ಕಿ.ಮೀ ವಿಸ್ತಾರದಲ್ಲಿ ವ್ಯಾಪಿಸಿಕೊಂಡಿರುವ ಹಂಪಿಯನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಿದೆ. ಭೌಗೋಳಿಕವಾಗಿಯೂ ಇದು ಅತ್ಯಂತ ಆಯಕಟ್ಟಿನ ತಾಣ. ಒಂದು ಕಡೆ ತುಂಗಭದ್ರಾ, ಮೂರು ಕಡೆ ಬೃಹತ್ ಶಿಲಾ ಬೆಟ್ಟಗಳು. ಸುಭದ್ರ ರಾಜಧಾನಿಯಾಗಲು ಇನ್ನೇನು ಬೇಕು? ವಿಜಯನಗರ ಕಾಲದಲ್ಲಿ ವೈಭೋಗ ಕಂಡಿದ್ದ ಹಂಪಿ ಈಗ ಹೇಗಿದೆ ಗೊತ್ತಾ? ಹಂಪಿಯ ಬಹುತೇಕ ದೇವಸ್ಥಾನಗಳ ಗೋಪುರಗಳು ನಿರ್ಮಾಣವಾದದ್ದು ಮಣ್ಣಿನ ಇಟ್ಟಿಗೆಯಿಂದ. ಹವಾಮಾನ ವೈಪರೀತ್ಯದಿಂದ ಒಂದೊಂದೇ ಗೋಪುರ ಧರಾಶಾಯಿಯಾಗುತ್ತಿದೆ. ವರ್ಷಕ್ಕೊಮ್ಮೆ ಮೂರು ದಿನ ಅದ್ಧೂರಿ ಹಂಪಿ ಉತ್ಸವ ಆಚರಿಸಿ ಬೀಗುವ (ಮೊನ್ನೆಮೊನ್ನೆ, ಜ.10ರಿಂದ 12ರವರೆಗೆ ಈ ವರ್ಷದ ಉತ್ಸವ ಆಚರಿಸಲಾಗಿದೆ) ಸರ್ಕಾರಕ್ಕೂ, ಪ್ರಾಚ್ಯ ವಸ್ತು ಇಲಾಖೆಗೂ, ಯುನೆಸ್ಕೊಗೂ ಈ ಬಗ್ಗೆ ಗಮನವೇ ಇದ್ದಂತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಹಂಪಿ ಕೆಲವೇ ವರ್ಷಗಳಲ್ಲಿ 'ಗೋಪುರಗಳಿಲ್ಲದ ದೇಗುಲ'ಗಳನ್ನು ಹೊಂದುವುದು ಗ್ಯಾರಂಟಿ.

- ಚಿತ್ರ-ಬರಹ: ಸುರೇಶ ಬಡಿಗೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ