ಅಂತೂ ಆ್ಯಪಲ್ ಕಂಪನಿ ತನ್ನ ಫೋನ್‌ಗಳ ಸ್ಕ್ರೀನ್ ಗಾತ್ರ ಬದಲಿಸಲು ನಿರ್ಧರಿಸಿದೆ. ಈಗ ಎಲ್ಲಿ ನೋಡಿದರೂ 5 ಇಂಚು ಮತ್ತು ಅದಕ್ಕಿಂತ ಹೆಚ್ಚು ಗಾತ್ರದ ಸ್ಕ್ರೀನ್ ಹೊಂದಿರುವ ಮೊಬೈಲ್‌ಗಳಿವೆ. ಸಣ್ಣ ಸ್ಕ್ರೀನ್ ಹೊಂದಿರುವ ಮೊಬೈಲ್‌ಗಳು ಬೇಡಿಕೆ ಕಳೆದುಕೊಳ್ಳುತ್ತಿವೆ. ಸ್ಯಾಮ್‌ಸಂಗ್ ಅಂತೂ ಎಲ್ಲ ಗಾತ್ರದ ಸ್ಕ್ರೀನ್‌ನ ಮಾದರಿಯಲ್ಲೂ ಒಂದೆರಡು ಮೊಬೈಲ್‌ಗಳನ್ನು ಹೊಂದಿದೆ.
ಇಷ್ಟಾದರೂ ಆ್ಯಪಲ್ ತನ್ನ ಮೊಬೈಲ್‌ಗಳ ಸ್ಕ್ರೀನ್ ಗಾತ್ರ ಬದಲಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ ಕೊನೆಗೂ ಮಾರುಕಟ್ಟೆಯನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಆ್ಯಪಲ್ ಐಫೋನ್ 6ನಲ್ಲಿ ಸ್ಕ್ರೀನ್ ಗಾತ್ರ ಬದಲಿಸುವ ಸೂಚನೆ ದೊರೆತಿದೆ. ಐಫೋನ್ 6ನಲ್ಲಿ ಸ್ಕ್ರೀನ್ ಗಾತ್ರ 4.7 ಇಂಚು ಇರಲಿದೆ. ಅಂದರೆ ಹಳೇ ಫೋನಿಗಿಂತ 0.5 ಇಂಚು ಗಾತ್ರ ದೊಡ್ಡದಿರಲಿದೆ.
ಇನ್ನೊಂದು ಮೂಲಗಳ ಪ್ರಕಾರ, ಆ್ಯಪಲ್ 5.5 ಮತ್ತು 6 ಇಂಚು ಸ್ಕ್ರೀನ್ ಹೊಂದಿರುವ ಫೋನ್‌ಗಳನ್ನೂ ಮಾರುಕಟ್ಟೆಗೆ ಬಿಡಲು ಯೋಚಿಸುತ್ತಿದೆ. ಆದರೆ ಐಫೋನ್ 6ನಲ್ಲೇ ಬೇರೆ ಬೇರೆ ಗಾತ್ರದ ಸ್ಕ್ರೀನ್‌ನ ಮೊಬೈಲ್‌ಗಳು ಬರಲಿವೆಯೇ ಅಥವಾ ಬೇರೆ ಬೇರೆ ಹೆಸರಿನ ಫೋನ್‌ಗಳೇ ಮಾರುಕಟ್ಟೆಗೆ ಬರಲಿವೆಯೇ ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಮೊಬೈಲ್ ಕಂಪನಿಗಳು ಊಹಿಸಿದ್ದಕ್ಕಿಂತ ಮೊದಲೇ ಅಂದರೆ 2014ರ ಆಗಸ್ಟ್‌ನಲ್ಲಿ ಐಫೋನ್ 6 ಮಾರುಕಟ್ಟೆಗೆ ಬರಲಿದೆಯಂತೆ.
ಐಫೋನ್ ಸ್ಕ್ರೀನ್ ಗಾತ್ರ ದೊಡ್ಡದಾಗಲು ಕಾರಣವೂ ಇದೆ. ಅದೇನೆಂದರೆ ಮಾರುಕಟ್ಟೆ ನಿಧಾನಗತಿಯ ಬೆಳವಣಿಗೆ ಹೊರತಾಗಿಯೂ 4 ಇಂಚಿಗಿಂತ ಹೆಚ್ಚು ಗಾತ್ರದ ಫೋನ್‌ಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡಿದೆ. ಇದರಲ್ಲಿ ಐಫೋನ್ ಪಾಲು ಬಹಳ ಕಡಿಮೆ. ಇದೇ ಆ್ಯಪಲ್ ಕಂಪನಿಯ ತಲೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಮೊಬೈಲ್‌ಗಳ ಸ್ಕ್ರೀನ್ ಗಾತ್ರ ಬದಲಾಯಿಸಲು ತೀರ್ಮಾನಿಸಿದೆ.