ಬಜಾಜ್ ಪ್ಲಾಟಿನ ಇಎಸ್ 
ವಾಹನ

ಮೈಲೇಜ್ ಕಿಂಗ್ ಬಜಾಜ್

ಬಜಾಜ್ ಆಟೋವು ಉತ್ತಮ ಇಂಧನ ಸಾಮರ್ಥ್ಯವುಳ್ಳ ಬೈಕ್ "ಬಜಾಜ್ ಪ್ಲಾಟಿನ ಇಎಸ್' ಬಿಡುಗಡೆ ಮಾಡಿದೆ...

ಬೆಂಗಳೂರು: ಬಜಾಜ್ ಆಟೋವು ಉತ್ತಮ ಇಂಧನ ಸಾಮರ್ಥ್ಯವುಳ್ಳ ಬೈಕ್ "ಬಜಾಜ್ ಪ್ಲಾಟಿನ ಇಎಸ್' ಬಿಡುಗಡೆ ಮಾಡಿದೆ.

ಈ ಹಿಂದೆ ಇದ್ದ ಮಾದರಿಯ ಕೇವಲ ಉನ್ನತೀಕರಿಸಿದ ಮಾದರಿಯಲ್ಲ. ಬದಲಿಗೆ ಇದು ಹೊಸ ತಂತ್ರಜ್ಞಾನದ ಆವಿಷ್ಕಾರವಾಗಿದೆ. ನೂತನ ಡಿಟಿಎಸ್-ಐ ವೈಶಿಷ್ಟ್ಯತೆ ಹೊಂದಿರುವ ಎಂಜಿನೊಂದಿಗೆ ಅಭಿವೃದ್ಧಿ ಪಡಿಸಿರುವ ಬೈಕ್ ಇದಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ 96.9 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಪ್ಲಾಟಿನ ಇಎಸ್ ನ್ನು ಪ್ರತಿ ದಿನ ದೂರವನ್ನು ಕ್ರಮಿಸುವಂತಹ ಗ್ರಾಹಕರಾಗಿ ವಿನ್ಯಾಸಪಡಿಸಲಾಗಿದೆ. ಗ್ರಾಹಕರಿಗಾಗಿ ವಿನ್ಯಾಸಪಡಿಸಲಾಗಿದೆ.

ವೀಲ್ ಬೇಸ್ ಹಾಗೂ ಹಿಂಬದಿಯಲ್ಲಿ ಮೂರು ಇಂಚುಗಳ ಅಗಲವಾದ ಟೈರ್ ಗಳಿದ್ದು, ಉತ್ತಮ ನಿಯಂತ್ರಣ ಒದಗಿಸುತ್ತದೆ, ಎಲೆಕ್ಟ್ರಿಕ್ ಸ್ಪಾರ್ಟ್, ಹೊಸ ಸೈಡ್ ಪ್ಯಾನಲ್, ನೂತನ ವಿನ್ಯಾಸದ ಹೆಡ್ ಲ್ಯಾಂಪ್, ಅಲಾಯ್ ವೀಲ್ಸ್ ಇದ್ದು ಉದ್ದನೆಯ ಸೀಟ್ ನ್ನು ಹೊಂದಿದೆ. ಬಜಾಜ್ ಪ್ಲಾಟಿನ ಬೈಕ್ ನ ದರ ರು.45,290 ಎಬೊನಿ ಬ್ಲಾಕ್, ಎಲೆಕ್ಟ್ರಾನ್ ಬ್ಲ್ಯೂ ಹಾಗೂ ಕ್ಯಾಂಡಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ; ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದ ಟೆಹ್ರಾನ್, ಸಂಘರ್ಷ ಮತ್ತೆ ಉಲ್ಬಣ

ಹೊರ್ಮುಸ್, ಹಣದುಬ್ಬರ, ಮತ್ತು ಚುನಾವಣೆಗಳು: ಸಮಸ್ಯೆಯ ಸುಳಿಯಲ್ಲಿ ಟ್ರಂಪ್ (ಜಾಗತಿಕ ಜಗಲಿ)

ಥೈಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಜನಾಂಗೀಯ ನಿಂದನೆ: ಪೊಲೀಸರಿಗೆ ದೂರು ಕೊಟ್ಟ ಭಾರತೀಯ ಪ್ರವಾಸಿಗ! Video

ತಾಂತ್ರಿಕ ದೋಷ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ, ಪ್ರಯಾಣಿಕರಿಗೆ ಸಾವಿನ ದರ್ಶನ ಮಾಡಿಸಿದ FLY91 ವಿಮಾನ..!

ಅಮೆರಿಕದ ಅತಿಯಾದ ಬೇಡಿಕೆ-ದ್ವಂದ್ವ ನೀತಿ ವಿರುದ್ಧ ಇರಾನ್ ಗರಂ: 2ನೇ ಹಂತದ ಶಾಂತಿ ಮಾತುಕತೆಗೆ ನಕಾರ, ಸಂಘರ್ಷ ಉಲ್ಬಣ ಸಾಧ್ಯತೆ

SCROLL FOR NEXT