ರಿಯಾದ್: ಪ್ರತಿ ವರ್ಷ ಒಂದೂವರೆ ಕೋಟಿಯಷ್ಟು ಯಾತ್ರಿಕರನ್ನು ಸೆಳೆಯುವ ಮೆಕ್ಕಾದಲ್ಲಿ ವಿಶ್ವದ ಅತಿದೊಡ್ಡ ಹೋಟೆಲ್ ತಲೆಎತ್ತಲಿದೆ.
ಸೌದಿ ಅರೇಬಿಯಾದ ಮೆಕ್ಕಾದಲ್ಲಿ 10 ಸಾವಿರ ಕೊಠಡಿಗಳ ಬೃಹತ್ ಹೋಟೆಲ್ `ಅಬ್ರಾಜ್ ಕುಡಾಯ್ ಅನ್ನು ನಿರ್ಮಿಸಲು ಸೌದಿ ಸರ್ಕಾರ ಮುಂದಾಗಿದೆ. ರು.22,300 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಹೋಟೆಲ್‍ನ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 2017ರ ವೇಳೆಗೆ ಇದು ಲೋಕಾರ್ಪಣೆಗೊಳ್ಳಲಿದೆ. ಮೆಕ್ಕಾಗಿ ಪ್ರತಿ ವರ್ಷ ಭಾರತೀಯರೂ ಸೇರಿದಂತೆ ಸುಮಾರು 1.50 ಕೋಟಿ ಯಾತ್ರಿಕರು ಆಗಮಿಸುತ್ತಾರೆ.
ಮಸ್ಜಿದ್ ಅಲ್-ಹರಾಮ್(ಮೆಕ್ಕಾದ ಪ್ರಧಾನ ಮಸೀದಿ) ನಿಂದ ಕೇವಲ 2 ಕಿ.ಮೀ. ದೂರದಲ್ಲಿ ಈ ಹೋಟೆಲ್ ನಿರ್ಮಾಣವಾಗುತ್ತಿರುವ ಕಾರಣ ಯಾತ್ರಿಕರಿಗೂ ಇದು ನೆರವಾಗಲಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಸದ್ಯಕ್ಕೆ ಲಾಸ್ ವೇಗಾಸ್‍ನಲ್ಲಿರುವ ದಿ ವೆನೆಷಿಯನ್ ಮತ್ತು ದಿ ಪಲಾಝೋ ವಿಶ್ವದ ಅತಿದೊಡ್ಡ ಹೋಟೆಲ್(ಕೊಠಡಿಗಳ ಸಂಖ್ಯೆಯ ಆಧಾರದಲ್ಲಿ)ಗಳೆಂಬ ಖ್ಯಾತಿ ಪಡೆದಿವೆ. ಈಗ ಈ ಹೆಗ್ಗಳಿಕೆ ಅಬ್ರಾಜ್ ಕುಡಾಯ್ ಗೆ ಸಿಗಲಿದೆ.
ಅಬ್ರಾಜ್ ಕುಡಾಯ್ ಬಗ್ಗೆ
ಒಟ್ಟು ವ್ಯಾಪ್ತಿ- 14 ಲಕ್ಷ ಚದರ ಮೀಟರ್‍ಗಳು
ಕೊಠಡಿಗಳ ಸಂಖ್ಯೆ- 10 ಸಾವಿರ
ರೆಸ್ಟೋರೆಂಟ್‍ಗಳು- 70
ಯೋಜನೆ ವೆಚ್ಚ- ರು.22,300 ಕೋಟಿ
ಯಾವಾಗ ಉದ್ಘಾಟನೆ?- 2017
ಇತರೆ ಸೌಲಭ್ಯಗಳು- ಬಸ್ ನಿಲ್ದಾಣ, ಶಾಪಿಂಗ್ ಮಾಲ್, ಫುಡ್‍ಕೋರ್ಟ್, ಕನ್ವೆನ್ಶನ್ ಸೆಂಟರ್, ಕಾರ್ ಪಾರ್ಕ್‍ಗಳನ್ನೊಳಗೊಂಡ ಪೋಡಿಯಂ, ಹಲವು ಹೆಲಿಪ್ಯಾಡ್‍ಗಳು