ಮಹೀಂದ್ರ ಹೊಸ ಶಕ್ತಿಶಾಲಿ ಟ್ರ್ಯಾಕ್ಟರ್ ಮಾರುಕಟ್ಟೆಗೆ
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ಟ್ರ್ಯಾಕ್ಟರ್ `ಕೇತ್ ಕಿ ಬಾಸ್' ಅಥವಾ ಮಹೀಂದ್ರ 415ಡಿಐ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ...
ರಾಂಚಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ಟ್ರ್ಯಾಕ್ಟರ್ `ಕೇತ್ ಕಿ ಬಾಸ್' ಅಥವಾ ಮಹೀಂದ್ರ 415ಡಿಐ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
40 ಅಶ್ವಶಕ್ತಿಯ ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ ಮರುವಿನ್ಯಾಸಗೊಳಿಸಿದ್ದು ಶಕ್ತಿಶಾಲಿ ಎಂಜಿನ್ ಮತ್ತು ಇಂಧನ ಮಿತವ್ಯಯ ಹೊಂದಿದೆ. 2.7 ಲೀಟರ್ನ 4 ಸಿಲಿಂಡರ್ ಹೊಂದಿರುವ ಕೇತ್ ಕಿ ಬಾಸ್ ಈ ವರ್ಗದಲ್ಲಿಯೇ ಅತ್ಯುತ್ತಮ ಎಂಜಿನ್ ಆಗಿದೆ. ಶಕ್ತಿಶಾಲಿ ಮತ್ತು ಇಂಧನ ಮಿತವ್ಯಯ ಟ್ರ್ಯಾಕ್ಟರ್ ನತ್ತ ನೋಟ ಹರಿಸಿರುವವರಿಗೆ ಇದು ಸೂಕ್ತ ವಾಹನವಾಗಿದೆ. ಈ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರವೀಂದ್ರ ಶಾಹನೆ `ಮಹೀಂದ್ರ 415ಡಿಐ' 40 ಎಚ್ಪಿ ವರ್ಗದಲ್ಲಿ ಹೊಸ ದರ್ಜೆಯನ್ನು ಹುಟ್ಟುಹಾಕಲಿದೆ ಎಂದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.