ಅಕಿರಾ ಕುರೋಸಾವಾ 
2014

ಸಿನಿಮೋತ್ಸವ: ಸಿನೆಮಾ ಎಂದರೇನು?

ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ವಿಶ್ವದ ಸಿನೆಮಾಗಳನ್ನು ನೋಡುತ್ತಿರುವ ಪ್ರೇಕ್ಷಕರಿಂದ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ವಿಶ್ವದ ಸಿನೆಮಾಗಳನ್ನು ನೋಡುತ್ತಿರುವ ಪ್ರೇಕ್ಷಕರಿಂದ ಬಹು ವಿಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಸಿನೆಮಾ ಬಹಳ ನಿಧಾನ, ಅಯ್ಯೋ ಇದರಲ್ಲಿ ಕಥೆಯೇ ಇಲ್ಲ, ಇದು ಕಿರು ಚಿತ್ರ ಸುಮ್ಮನೆ ಎಳೆದು ೯೦ ನಿಮಿಷದ ಸಿನೆಮಾ ಮಾಡಿದ್ದರೆ, ಇದು ಬಾಲಿವುಡ್ ತರಹದ ಸಿನೆಮಾ, ಅಯ್ಯೋ ಈ ಸಿನೆಮಾ ಅರ್ಥಾನೆ ಆಗೋಲ್ಲ ಎಂಬಂತಹ ಪ್ರತಿಕ್ರಿಯೆಗಳು ವೀಕ್ಷಕರಿಂದ ಸಾಮಾನ್ಯವಾಗಿದ್ದವು.

ಇವು ಪ್ರೇಕ್ಷಕರ ಸಾಮಾನ್ಯ ಪ್ರತಿಕ್ರಿಯೆಗಳಾಗಿದ್ದರೆ, ನಿರ್ದೇಶಕರು ತಮ್ಮ ಸಿನೆಮಾಗಳ ಬಗ್ಗೆ ಹೇಳಿಕೊಂಡ ಪ್ರತಿಕ್ರಿಯೆಗಳು, ನಮ್ಮ ಶಾಸ್ತ್ರೀಯ ಸಂಸ್ಕೃತಿಯನ್ನು ಸಿನೆಮಾದಲ್ಲಿ ಪ್ರತಿನಿಧಿಸಿದ್ದೇನೆ, ಸಿನೆಮಾದಲ್ಲಿ ಮೆಸೇಜ್ ಕೊಟ್ಟಿದ್ದೇನೆ, ಸಿನೆಮಾನೇ ಒಂದು ಕಲಾ ಪ್ರಾಕಾರ ಅದಕ್ಕೆ ಬೇರೆ ಕಲೆಗಳ ಅವಶ್ಯಕತೆ ಇಲ್ಲ, ಸಿನೆಮಾದಲ್ಲಿ ಕಥೆ ಹೇಳಬೇಕಿಲ್ಲ ಸಿನೆಮಾ ಎಂದರೆ ಕಾವ್ಯ, ಸಿನೆಮಾ ಪ್ರಶ್ನೆಗಳನ್ನು ಎತ್ತಬೇಕು, ಸಿನೆಮಾ ಇಂದಿನ ಸಮಾಜವನ್ನು ಪ್ರತಿನಿಧಿಸಬೇಕು, ಸಿನೆಮಾ ಜನರನ್ನು ಥ್ರಿಲ್ ಮಾಡಬೇಕು ಹೀಗೆ ವಿಬಿನ್ನವಾದ ಚಿಂತನೆಗಳಿಂದ ಕೂಡಿತ್ತು.

ಈ ಮುಂಚೆಯೇ ಸಿನೆಮಾಗಳ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಸಿನಿಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಹೇಗೆಂದಿದ್ದರು: ಇಲ್ಲಿ ನಾವು ಹೇಗೆಲ್ಲಾ ಸಿನೆಮಾ ಮಾಡುಬಹುದು, ಯಾವುದೆಲ್ಲಾ ಸಿನೆಮಾಗೆ ವಸ್ತುವಾಗುತ್ತದೆ ಎಂಬ ಸಾಧ್ಯತೆಗಳನ್ನು ತೋರಿಸಲು ಪ್ರಯತ್ನಿಸಿದ್ದೇವೆ ಎಂದು. ಇಲ್ಲಿಯವರೆಗೂ ಸಿನೆಮಾ ಎಂದರೇನು? ಸಿನೆಮಾದಲ್ಲಿ ಏನಿರಬೇಕು ಎಂದರೆ ಯಾವ ಸಿನೆಮಾ ನಿರ್ದೇಶಕನೂ ಗಲಿಬಿಲಿಗೊಳ್ಳಬಹುದು! ಇಂತಹ ಸಮಯದಲ್ಲಿ ವಿಶ್ವ ವಿಖ್ಯಾತ ಜಪಾನ್ ದೇಶದ ನಿರ್ದೇಶಕ ಅಕಿರಾ ಕುರೋಸಾವಾ ಅವರು ಸಿನೆಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಮ್ಮ ಆತ್ಮಕಥೆ "ಸಮ್ ಥಿಂಗ್ ಲೈಕ್ ಆನ್ ಆಟೋಬಯಾಗ್ರಫಿ" (ಆತ್ಮಕಥೆಯ ತರಹ) ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದರ ಸಂಕ್ಷಿಪ್ತ ಆಯ್ಕೆ ಇಲ್ಲಿ ನಿಮಗಾಗಿ.

ಅಕಿರಾ ಕುರೋಸಾವಾ ಆತ್ಮಕಥೆಯ ಒಂದು ತುಣುಕು


ಸಿನೆಮಾ ಏನು? ಇದಕ್ಕೆ ಉತ್ತರ ಸುಲಭವಾದದ್ದಲ್ಲ. ಒಂದಾನೊಂದು ಕಾಲದಲ್ಲಿ ಜಪಾನ್ ದೇಶದ ಕಾದಂಬರಿಕಾರ ಶಿಗಾ ನೋಯಾ ತನ್ನ ಮೊಮ್ಮಗ ಬರೆದಿದ್ದ ಒಂದು ಪ್ರಬಂಧವನ್ನು ತನ್ನ ಕಾಲದಲ್ಲಿ ಬರೆದ ಗಣನೀಯ ಪಠ್ಯ ಎಂದು ದಾಖಲಿಸಿದ್ದರು. ಒಂದು ಸಾಹಿತ್ಯ ಪತ್ರಿಕೆಯಲ್ಲಿ ಅದನ್ನು ಪ್ರಕಟಿಸದ್ದರು ಕೂಡ. ಅದರ ಶೀರ್ಷಿಕೆ "ನನ್ನ ನಾಯಿ" ಎಂದಿತ್ತು, ಅದು ಹೀಗೆ ಮುಂದುವರೆದಿತ್ತು..." ನನ್ನ ನಾಯಿ ಕರಡಿಯನ್ನು ಹೋಲುತ್ತದೆ; ಅವನು ನೆಲಗರಿಡಿಯನ್ನೂ ಹೋಲುತ್ತಾನೆ; ಅವನು ನರಿಯ ತರಹ ಕೂಡ ಕಾಣಿಸುತ್ತಾನೆ..." ಅದು ಮುಂದುವರೆದು ನಾಯಿಯ ವಿಷೇಶ ಗುಣಗಳನ್ನು ಬೇರೆ ಬೇರೆ ಪ್ರಾಣಿಗಳಿಗೆ ಹೋಲಿಸಿ ಪ್ರಾಣಿ ಪ್ರಪಂಚದ ಎಲ್ಲ ಪ್ರಾಣಿಗಳನ್ನೂ ಪಟ್ಟಿ ಮಾಡಿತ್ತು. ಆದರೆ, ಆ ಪ್ರಬಂಧ ಹೀಗೆ ಕೊನೆಗೊಂಡಿತ್ತು,"ಅವನು ನಾಯಿಯಾಗಿರುವುದರಿಂದ, ಅವನು ಹೆಚ್ಚು ನಾಯಿಯನ್ನೇ ಹೋಲುತ್ತಾನೆ."

ನಾನು ಈ ಪ್ರಬಂಧ ಓದಿದಾಗ ಗಹಗಹಿಸಿ ನಕ್ಕಿದ್ದು ನೆನಪಿದೆ, ಆದರೆ ಇದು ಒಂದು ಗಹನವಾದ ವಿಷಯವನ್ನು ಮಂಡಿಸುತ್ತದೆ. ಸಿನೆಮಾ ಬೇರೆಲ್ಲಾ ಕಲಾ ಪ್ರಾಕಾರಗಳನ್ನು ಹೋಲುತ್ತದೆ. ಸಿನೆಮಾಗೆ ಸಾಹಿತ್ಯಿಕ ಗುಣಗಳಿದ್ದರೆ, ಅದಕ್ಕೆ ನಾಟಕದ ಗುಣಗಳೂ ಇವೆ, ತಾತ್ವಿಕ ಆಯಾಮ, ಚಿತ್ರಕಲೆಯ ಗುಣಗಳು, ಶಿಲ್ಪದ ಮತ್ತು ಸಂಗೀತದ ಅಂಶಗಳು ಕೂಡ. ಆದರೆ ಸಿನೆಮಾ ಅಂತಿಮವಾಗಿ, ಸಿನೆಮಾ.

ಸಿನೆಮಾ ಸೌಂದರ್ಯ ಎಂದು ಕರೆಯಬಹುದಾದ ಒಂದು ಗುಣ ಇದೆ. ಅದು ಸಿನೆಮಾದಲ್ಲಿ ಮಾತ್ರ ವ್ಯಕ್ತಪಡಿಸಬಹುದು, ಹಾಗು ಸಿನೆಮಾ ಚಲಿಸುವ ವಸ್ತುವಾಗಿರಬೇಕಾದರೆ ಆ ಗುಣ ಸಿನೆಮಾದಲ್ಲಿ ಇರಬೇಕು. ಅದನ್ನು ಸರಿಯಾಗಿ ವ್ಯಕ್ತಪಡಿಸಿದರೆ, ಸಿನೆಮಾ ನೋಡುವವವನು ಆಳವಾದ ಭಾವನೆಗಳನ್ನು ಅನುಭವಿಸುತ್ತಾನೆ. ನನ್ನ ನಂಬಿಕೆಯ ಪ್ರಕಾರ ಅದೇ ಜನರನ್ನು ಸಿನೆಮಾ ನೋಡಲು ಸೆಳೆಯುವುದು ಹಾಗೂ ಈ ಗುಣವನ್ನು ಬೆಳೆಸಿಕೊಳ್ಳುವುದೇ ಸಿನೆಮಾ ನಿರ್ದೇಶಕನಿಗೆ ಸಿನೆಮಾ ಮಾಡಲು ಪ್ರೇರೇಪಿಸುವುದು. ಬೇರೆ ಪದಗಳಲ್ಲಿ ಹೇಳುವುದಾದರೆ, ಸಿನೆಮಾದ ಸತ್ವ ಇರುವುದೇ ಸಿನೆಮಾ ಸೌಂದರ್ಯದಲ್ಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT