ಬೆಂಗಳೂರು: ಇಂದು ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ ಬೀಳಲಿದೆ. ಎಂಟು ದಿನಗಳ ಈ ಉತ್ಸವದಲ್ಲಿ ಹಲವಾರು ವಿಶ್ವ ಸಿನೆಮಾಗಳು ಪ್ರದರ್ಶನಗೊಂಡಿದ್ದು, ಇಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮೂರು ವಿಭಾಗಗಳಲ್ಲಿ(ವಿಶ್ವ/ಭಾರತ/ಕನ್ನಡ) ಅತ್ಯುತ್ತಮ ಚಲನಚಿತ್ರಗಳು ಪ್ರಶಸ್ತಿ ಪಡೆಯಲಿವೆ. ಇಂದು ಕೊನೆಯ ದಿನ. ೧೦೦ ರುಪಾಯಿಯ ದಿನದ ಪಾಸ್ ಪಡೆದು ಇಂದಿನ ಎಲ್ಲ ಸಿನೆಮಾಗಳನ್ನು ನೋಡಬಹುದು. ಅಮೇರಿಕಾದ 'ಪಿಂಗ್ ಪಾಂಗ್ ಸಮ್ಮರ್' ಈ ವರ್ಷದ ಸಮಾರೋಪ ಚಿತ್ರ ಪ್ರದರ್ಶನ. ಇಂದು ಸಿನೆಮಾ ನೋಡಲು ನಿಮಗೆ ಕೆಲವು ಸಲಹೆಗಳು.
೧. ೨೮/ ನಿ: ಪ್ರಸನ್ನ ಜಯಕೋಡಿ/ ಶ್ರೀಲಂಕ/ ೯೮ ನಿಮಿಷ/ ಲಿಡೋ ಸ್ಕ್ರೀನ್ ೨/ ಬೆಳಗ್ಗೆ ೧೦:೧೦ ಕ್ಕೆ
೨. ಏರಿಯಾನ್ಸ್ ಥ್ರೆಡ್/ ನಿ: ರಾಬರ್ಟ್ ಗ್ಯುಡಿಗ್ಯುಯಾನ್/ ಫ್ರಾನ್ಸ್/ ೯೨ ನಿಮಿಷ/ ಫನ್ ಸಿನೆಮಾಸ್ ಸ್ಕ್ರೀನ್ ೩/ ಮಧ್ಯಾಹ್ನ ೧೨:೪೫ಕ್ಕೆ
೩. ಡೀಲ್/ ನಿ: ಎಡ್ಡಿ ತೇರ್ಸ್ಟಾಲ್/ ನೆದರ್ ಲ್ಯಾಂಡ್ಸ್/ ೮೮ ನಿಮಿಷ/ ಲಿಡೋ ಸ್ಕ್ರೀನ್ ೧/ ಮಧ್ಯಾಹ್ನ ೩:೦೦ ಕ್ಕೆ
೪. ಅತ್ತಿ ಹಣ್ಣು ಮತ್ತು ಕಣಜ/ ನಿ: ಎಂ ಎಸ್ ಪ್ರಕಾಶ್ ಬಾಬು/ ಭಾರತ/ ೯೦ ನಿಮಿಷ/ ಫನ್ ಸಿನೆಮಾಸ್ ಸ್ಕ್ರೀನ್ ೧/ ಸಂಜೆ ೬:೦೦ಕ್ಕೆ
೫. ಪಿಂಗ್ ಪಾಂಗ್ ಸಮ್ಮರ್/ ನಿ: ಮೈಕೆಲ್ ಟಲ್ಲಿ/ ಯು ಎಸ್ ಎ/ ೯೧ ನಿಮಿಷ/ ಲಿಡೋ ಸ್ಕ್ರೀನ್ ೪/ ರಾತ್ರಿ ೯:೧೫ಕ್ಕೆ
ಇಂದು ಸಂಜೆ ೬:೦೦ ಘಂಟೆಗೆ, ಮಿಲ್ಲರ್ಸ್ ರಸ್ತೆಯ ಡಾ|| ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕರ್ನಾಟಕದ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದು, ವಾರ್ತಾ ಸಚಿವ ರೋಶನ್ ಬೇಗ್, ಲೋಕಸಭಾ ಸದಸ್ಯ ಪಿ ಸಿ ಮೋಹನ್, ಕರ್ನಾಟಕ ವಾಣಿಜ್ಯ ಮಂಡಲಿ ಅಧ್ಯಕ್ಷ ಹೆಚ್ ಡಿ ಗಂಗರಾಜು ಮತ್ತು ಚಿತ್ರನಟ ಪುನಿತ್ ರಾಜಕುಮಾರ್ ಉಪಸ್ಥಿತರಿರುತ್ತಾರೆ.