ರೇಲ್ವೆ ಬಜೆಟ್

ಸಾಮಾಜಿಕ ಜಾಲ ತಾಣದ ಸಲಹೆಗಳು ರೇಲ್ವೆ ಬಜೆಟ್‌ನಲ್ಲಿ ಬಳಕೆ

Lingaraj Badiger

ನವದೆಹಲಿ: 2015ನೇ ಸಾಲಿನ ರೇಲ್ವೆ ಬಜೆಟ್‌ಗಾಗಿ ಸಾಮಾಜಿಕ ಜಾಲ ತಾಣಗಳಿಂದ ಉತ್ತಮ ಪ್ರತಿಕ್ರಿಯೆ ಮತ್ತು ಸಲಹೆಗಳು ಬಂದಿದ್ದವು ಎಂದು ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಗುರುವಾರ ಹೇಳಿದ್ದಾರೆ.

ಇಂದು ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಸುರೇಶ್ ಪ್ರಭು, ಸಾಮಾಜಿಕ ಜಾಲ ತಾಗಳಗಳ ಮೂಲಕ ನಾವು ಜನರಿಂದ ಸುಮಾರು 20 ಸಾವಿಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಮತ್ತು ಸಲಹೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು. ಅಲ್ಲದೆ ಕೆಲವು ಉತ್ತಮ ಸಲಹೆಗಳನ್ನು ಈ ಬಜೆಟ್‌ನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಉತ್ತಮ ಸೇವೆ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ರೇಲ್ವೆ ಸಚಿವರು ತಿಳಿಸಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ರೇಲ್ವೆ ಸಚಿವಾಲಯ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯನ್ನು ತೆರೆದಿತ್ತು.

SCROLL FOR NEXT