ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಬೆಂಗಳೂರು: 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಯೋಜನೆಗಳು
- ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವಂತಹ ಪ್ರತಿಯೊಬ್ಬ ರೋಗಿಯ ಆರೋಗ್ಯದ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಲ್ಲಿ ಇ ಆಸ್ಪತ್ರೆ ತಂತ್ರಾಂಶವನ್ನು ಅನುಷ್ಠಾನ.
- ಮೂತ್ರಪಿಂಡ ಸಮಸ್ಯೆ ರೋಗಿಗಳಿಗೆ ಬೆಂಗಳೂರಿನ ಮೂತ್ರಪಿಂಡ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ. ಮೂತ್ರ ಪಿಂಡ ಕಸಿ ಕಾರ್ಯಕ್ರಮ ಜಾರಿಗೆ ಚಿಂತನೆ
- ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಸಹಿತ ತೀರ್ವ ನಿಗಾ ಘಟಕ ಸ್ಥಾಪನೆ.
- ಹೆಚ್ 1 ಎನ್1, ಡೆಂಗ್ಯೂ, ಜ್ವರ, ಮಲೇರಿಯಾ, ಚಿಕುನ್ ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಾಜ್ಯದ ಬಳ್ಳಾರಿ, ಹುಬ್ಬಳ್ಳಿ, ಬಾಗಲಕೋಟೆ, ಮೈಸೂರು, ಮತ್ತು ಮಂಗಳೂರಿನಲ್ಲಿ 5 ಸಾಂಕ್ರಾಮಿಕ ರೋಗ ಪ್ರಯೋಗಾಲಯ.
- ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ದೃಷ್ಠಿಯಿಂದ ಎಲ್ಲಾ ಅಲ್ಟ್ರಾ ಸೌಂಡ್ ಸ್ಕಾನಿಂಗ್ ಕೇಂದ್ರಗಳಿಂದ ನೈಜ ಸಮಯದ ಮಾರಿತಿಯನ್ನು ಅಂತರ್ ಜಾಲದ ಮೂಲಕ ಸಂಗಗ್ರಹಿಸಿ ಹೆರಿಗೆಯಾಗುವವರೆಗೂ ನಿಗಾ ವಹಿಸಲಾಗುವುದು.
- ಗುಲ್ಬರ್ಗಾದಲ್ಲಿ ಹೃದ್ರೋಗ ಚಿಕಿತ್ಸಾ ಘಟಕಕ್ಕೆ ಅಂದಾಜು 15 ಕೋಟಿ ವೆಚ್ಚ.