ಕೇಂದ್ರ ಬಜೆಟ್

ಬಜೆಟ್: 'ಐತಿಹಾಸಿಕ' ಎಂದ ಬಿಜೆಪಿ, 'ಮಾತಿನ ಮೋಡಿ' ಎಂದ ಕಾಂಗ್ರೆಸ್

Lingaraj Badiger

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಮಂಡಿಸಿದ 2015-16ನೇ ಸಾಲಿನ ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಬಿಜೆಪಿ ಇದನ್ನು ಐತಿಹಾಸಿಕ ಬಜೆಟ್ ಎಂದು ಕರೆದರೆ, ಕಾಂಗ್ರೆಸ್ ಬರೀ ಮಾತಿನ ಮೋಡಿ ಎಂದು ವ್ಯಂಗ್ಯವಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇದೊಂದು ಅಭಿವೃದ್ಧಿಪರವಾದ, ಪ್ರಗತಿಪರವಾದ ಹಾಗೂ ಪ್ರಾಯೋಗಿಕ ಬಜೆಟ್ ಎಂದು ಹೊಗಳಿದ್ದಾರೆ. ಅಲ್ಲದೆ ದೂರದೃಷ್ಟಿಯ ಬಜೆಟ್ ಎಂದಿದ್ದಾರೆ.

ಇನ್ನು, ಬಜೆಟ್‌ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳನ್ನು ಕಡೆಗಣಿಸಲಾಗಿದೆ ಎಂದಿರುವ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, ಅದು ಬರೀ ದೂರದೃಷ್ಟಿಯ ದಾಖಲೆ ಅಷ್ಟೇ ಎಂದಿದ್ದಾರೆ

ಅನಂತಕುಮಾರ್
ಬಜೆಟ್ ಅಭಿವೃದ್ಧಿ ಪರವಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಹೇಳಿದ್ದಾರೆ.

ಜೇಟ್ಲಿ ಬಜೆಟ್ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಸಿಯಿದ ಅನಂತಕುಮಾರ್, ಮಧ್ಯಮ ವರ್ಗದವರ ಉಳಿತಾಯಕ್ಕೆ ಈ ಬಜೆಟ್ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಮನೋಹರ್ ಪರಿಕ್ಕರ್
ಜೇಟ್ಲಿ ಅವರು ಉತ್ತಮ ಬಜೆಟ್ ನೀಡಿದ್ದಾರೆ. ನಾನು ಅವರಿಗೆ 10ಕ್ಕೆ 9.5 ಅಂಕಗಳನ್ನು ನೀಡುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.

ಕಮಲ್‌ನಾಥ್
ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಅವರು, ಆಯೋಗ, ಸಮಿತಿ ಮತ್ತು ಭರವಸೆಗಳ ಬಜೆಟ್ ಎಂದಿದ್ದಾರೆ.

SCROLL FOR NEXT