ಬಜೆಟ್ 
ಕೇಂದ್ರ ಬಜೆಟ್

ಕೊಟ್ಟಿದ್ದು ವಾಪಸ್!

ಹಣಕಾಸು ಖಾತೆಯನ್ನೂ ಹೊಂದಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬಜೆಟ್ ಸಿದ್ದಪದಿಸಿದ್ದರೆ ...

ನವದೆಹಲಿ: ಹಣಕಾಸು ಖಾತೆಯನ್ನೂ ಹೊಂದಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬಜೆಟ್ ಸಿದ್ದಪದಿಸಿದ್ದರೆ , ಕೆಲ ಮಾರ್ಪಾಡುಗಳನ್ನು ಮಾಡಿ ಕೊಳ್ಳುವುದು ಅನಿವಾರ್ಯ! 14ನೇ ಹಣಕಾಸು ಆಯೋ ಗದ ಶಿಫಾರಸಿನಂತೆ ರಾಜ್ಯಗಳಿಗೆ ತೆರಿಗೆ ಪಾಲು ಶೇ. 10ರಷ್ಟು ಹೆಚ್ಚಿಸಿ ಒಟ್ಟು ಶೇ.42ರಷ್ಟು ಪಾಲು ನೀಡುವುದಾಗಿ
ಘೋಷಿಸಿದ್ದ ಸರ್ಕಾರ, ಬೇರೆ ರೂಪದಲ್ಲಿ ಅದನ್ನು ರಾಜ್ಯಗಳಿಂದ ವಾಪಸು ಪಡೆಯುತ್ತಿದೆ. 63 ಕೇಂದ್ರ ಪ್ರಾಯೋಜಿತ ಯೋಜನೆಗಳ ಜನೆಗಳ ಪೈಕಿ 2015-16ನೇ ಸಾಲಿನಲ್ಲಿ ಎಂಟು ಯೋಜನೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿ, 31 ಯೋಜನೆನೆಗಳನ್ನು ಮಾತ್ರ ಪೂರ್ಣ ಪ್ರಾಯೋ ಜಿಸಲು ಕೇಂದ್ರ ಮುಂದಾಗಿದೆ. ಉಳಿದ 24 ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯಗಳು ವೆಚ್ಚ ಭರಿಸಬೇಕಿದೆ. ಆದರೆ, ರಾಜ್ಯಗಳು ಭರಿಸುವ ವೆಚ್ಚದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹಣಕಾಸು ಸಚಿವ ಅರುಣ್  ಜೇಟ್ಲಿ ಅವರು ಶನಿವಾರ ಮಂಡಿಸಿದ ಬಜೆಟ್‍ನಲ್ಲಿ ಕೇಂದ್ರ ಪ್ರಾಯೋ ಜಿತ  ಯೋಜನೆಗಳನ್ನು ಸ್ಥಗಿತಗೊಳಿಸುವ ಮತ್ತು ವೆಚ್ಚ ಹಂಚಿಕೆ ಮಾರ್ಪಾಡು ನಿರ್ಧಾರ ಪ್ರಕಟಿ ಸಿದ್ದಾರೆ. ಕೇಂದ್ರ ಪ್ರಾಯೋ ಜಿತ ಯೋ ಜನೆಗಳಿಗೆ ನಿಗದಿತ ಅನುದಾನ ನಿರೀಕ್ಷೆಯಲ್ಲಿ ರಾಜ್ಯಗಳು ಬಜೆಟ್ ಸಿದ್ಧಪಡಿಸುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಬಜೆಟ್  ಸಿದಟಛಿಪಡಿಸುವ ವೇಳೆ, ಎಂಟು ಯೋಜನೆಗಳ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಮತ್ತು 24 ಯೋ ಜನೆಗಳಿಗೆ ಕೇಂದ್ರಕ್ಕಿಂತ ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ. ಇದು ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆಹೊರೆ.


ಜೇಟ್ಲಿ ಕಂಪಿನಲ್ಲಿ ಹಂಪಿ
ಕರ್ನಾಟಕದ ಹಂಪಿ, ಹಳೆ ಗೋವಾದ ಚರ್ಚ್ ಮತ್ತು ಕಾನ್ವೆಂಟ್, ರಾಜಸ್ತಾನದ ಕುಂಬಾಳಘರ್ ಹಾಗೂ ಅರಮನೆ, ಗುಜರಾತ್‍ನ ಪಾಟಣ್‍ನ ರಾಣಿ ಕಿ ವಾವ್,
ಜಮ್ಮು-ಕಾಶ್ಮೀರದ ಲೇಹ್ ಅರಮನೆ, ಉತ್ತರ ಪ್ರದೇಶದ ವಾರಾಣಸಿ ದೇವಸ್ಥಾನ, ಪಂಜಾಬ್‍ನ ಅಮೃತಸರದ ಜಲಿಯನ್‍ವಾಲಾ ಬಾಗ್ ಹಾಗೂ ತೆಲಂಗಾಣದ
ಹೈದ್ರಾ ಬಾದ್‍ನ ಕುತುಬ್ ಶಾಹಿ ಸ್ಮಾರಕ ವನ್ನು ಈ  ಯೋ ಜನೆಗೆ ಆಯ್ಕೆ ಮಾಡಿ ಕೊಳ್ಳಲಾಗಿದೆ. ಕೇವಲ 8 ಹೆಸರು ಕೇಳುತ್ತಿದ್ದಂತೆ ಸದನ ದಲ್ಲಿ ಹಾಜರಿದ್ದ ಸಾಕಷ್ಟು ಸಂಸದರು ತಮ್ಮ ಕ್ಷೇತ್ರದ ಪಾರಂಪರಿಕ ತಾಣಗಳನ್ನು ಸೇರಿಸಿಕೊಂಡಿಲ್ಲ ಎಂದು ಕೂಗಾಟ ಆರಂಭಿಸಿದರು.ಆದರೆ ಸಚಿವರು ಇದಕ್ಕೆ ಕ್ಯಾರೆ ಎನ್ನಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT