ದೇಶದ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವುನಿರಂತರವಾಗಿರಬೇಕು. ಇದಾಗಬೇಕಾದರೆ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಬೇಕು. ಇದು ಹೆಚ್ಚಬೇಕೆಂದರೆ ಕೈಯಲ್ಲಿ ಹಣ ಇರಬೇಕು. ಕೈಯಲ್ಲಿ ಹಣ ಇರಬೇಕೆಂದರೆ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎಂಬ ವಾದದಲ್ಲಿ ಕೇಂದ್ರ ನಂಬಿಕೆ ಇಟ್ಟಿತ್ತು. ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಉದ್ಯೋಗಸ್ಥರು ಇಟ್ಟಿದ್ದ ನಂಬಿಕೆಯನ್ನು ಹುಸಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಹೂಡಿಕೆ ಮಾಡಿ ತೆರಿಗೆ ತಪ್ಪಿಸಿಕೊಳ್ಳಿ ಎಂಬ ಬಾಣವನ್ನು ಬಿಡಲಾಗಿದೆ. ಅಂದರೆ, ಈಗಿರುವ ತೆರಿಗೆ ವಿನಾಯಿತಿ ಮಿತಿ, 2,50,000ಕ್ಕೇ ಸೀಮಿತವಾಗಿದೆ ಹಾಗಂತ ಮಧ್ಯಮವರ್ಗದವರೇನೂ ಭಯ ಪಡಬೇಕಿಲ್ಲ. ನೀವು ಹೂಡಿಕೆಯನ್ನು ತೋರಿಸಿದರೆ ರು. 4,44,200 ರವರೆಗಿನ ತೆರಿಗೆಯಲ್ಲಿ ವಿನಾಯಿತಿ ಪಡೆದುಕೊಳ್ಳಬಹುದು. ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಾದರೂ ಈ ವೇತನದಾರರು ಹೂಡಿಕೆ ಮಾಡುವುದು ಅನಿವಾ ರ್ಯವಾಗಲಿದೆ . ಈ ರೀತಿ ಮಾಡುವುದರಿಂದ ಸರ್ಕಾರಕ್ಕೆ ಪರೋಕ್ಷವಾಗಿ ಆದಾಯ ಲಭಿಸಲಿದೆ.ಹೀಗಾಗಿ ಬುದ್ಧಿವಂತಿಕೆ ರೀತಿಯಲ್ಲಿ ತೆರಿಗೆ ವಿನಾಯಿತಿ ಮೇಲೆ ಆಟ ಆಡಲಾಗಿದೆ.