ಸುರೇಶ್ ಪ್ರಭು 
ರೈಲ್ವೆ ಬಜೆಟ್

ರೈಲ್ವೆ ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ: ಸಚಿವ ಸುರೇಶ್ ಪ್ರಭು

ಫೆ.25 ರಂದು ರೈಲು ಬಜೆಟ್ ಮಂಡನೆ ಮಾಡಲಿರುವ ಸುರೇಶ್ ಪ್ರಭು, ರೈಲು ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ ಎಂದು ಸಂಸತ್ ನಲ್ಲಿ ಹೇಳಿದ್ದಾರೆ.

ನವದೆಹಲಿ: ಫೆ.25 ರಂದು ರೈಲ್ವೆ ಬಜೆಟ್ ಮಂಡನೆ ಮಾಡಲಿರುವ ಸಚಿವ ಸುರೇಶ್ ಪ್ರಭು, ರೈಲ್ವೆ ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ ಎಂದು ಸಂಸತ್ ನಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿರುವ ಸುರೇಶ್ ಪ್ರಭು, ಸರಕು ಸಾಗಣೆ ಹಾಗೂ ಪ್ರಯಾಣಿಕ ದರಗಳನ್ನು ಸರಿಯಾಗಿ ನಿಗದಿ ಮಾಡದೇ ಇರುವ ಪರಿಣಾಮ ರೈಲು ಸಂಪನ್ಮೂಲಗಳು ಕುಸಿಯುತ್ತಿದೆ. ಉಳಿದ ಪ್ರಕಾರಗಳ ಸಾರಿಗೆಗೆ ಹೋಲಿಸಿದರೆ ಸರಕು ಸಾಗಣೆಯಲ್ಲಿ ರೈಲಿನ ಪಾಲು ಕಡಿಮೆ ಇದೆ ಎಂದು ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ.
ರೈಲ್ವೆ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವುದರ ಬಗ್ಗೆ ಸುಳಿವು ನೀಡಿರುವ ಸುರೇಶ್ ಪ್ರಭು, ಸರಕು ಸಾಗಣೆ ನಿರ್ವಾಹಕರು, ಪ್ರಯಾಣಿಕರು ಹಾಗೂ ರೈಲ್ವೆ ಇಲಾಖೆ ಹಿತಾಸಕ್ತಿಯನ್ನು ಕಾಪಾಡಲು ಸಮತೋಲನ ಕಾಯ್ದುಕೊಳ್ಳಬೇಕಾದ ಅನಿರ್ವಾರ್ಯತೆ ಇದೆ, ರೈಲ್ವೆಯ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವ ಅಗತ್ಯವಿದೆ. ಆದರೆ ಖಾಸಗಿ ಸಹಭಾಗಿತ್ವ ಪ್ರಯಾಣಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯದಂತೆ ಎಚ್ಚರ ವಹಿಸಲಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ