ಮಿಷನ್ 2020 ಮತ್ತು ಸುರೇಶ್ ಪ್ರಭು (ಸಂಗ್ರಹ ಚಿತ್ರ) 
ರೈಲ್ವೆ ಬಜೆಟ್

ರೈಲ್ವೇ ಬಜೆಟ್ 2016: "ಮಿಷನ್ 2020"ಯ ಮಹತ್ವದ ಗುರಿಗಳು

ಗುರುವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ 2016ನೇ ಸಾಲಿನ ರೈಲ್ವೇ ಬಜೆಟ್ ನಲ್ಲಿ ಹಲವು ಪ್ರಮುಖ ಗುರಿಗಳನ್ನು ಹೊಂದಲಾಗಿದ್ದು, ಈ ಪೈಕಿ "ಮಿಷನ್ 2020" ಮಹತ್ವದ ಗುರಿಯಲ್ಲೊಂದು ಹೇಳಲಾಗುತ್ತಿದೆ..

ನವದೆಹಲಿ: ಗುರುವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ 2016ನೇ ಸಾಲಿನ ರೈಲ್ವೇ ಬಜೆಟ್ ನಲ್ಲಿ ಹಲವು ಪ್ರಮುಖ ಗುರಿಗಳನ್ನು ಹೊಂದಲಾಗಿದ್ದು, ಈ ಪೈಕಿ "ಮಿಷನ್ 2020" ಮಹತ್ವದ ಗುರಿಯಲ್ಲೊಂದು ಹೇಳಲಾಗುತ್ತಿದೆ.

ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಈಗಾಗಲೇ ಘೋಷಣೆಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ಹೆಚ್ಚಿನ ಒತ್ತು ನೀಡಿದ್ದು, ಇದಕ್ಕಾಗಿ "ಮಿಷನ್ 2020" ಪರಿಕಲ್ಪನೆಯನ್ನು ಮಂಡಿಸಿದ್ದಾರೆ. ಇದರ ಅನ್ವಯ ಈ ಹಿಂದೆ ಘೋಷಣೆಯಾದ ಯೋಜನೆಗಳನ್ನು ಮುಂಬರುವ 2020 ವರ್ಷದೊಳಗೆ ಪೂರ್ಣಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಸುರೇಶ್ ಪ್ರಭು ಅವರು ತಿಳಿಸಿದರು.

ಮಿಷನ್ 2020ಯ ಮಹತ್ವದ ಗುರಿಗಳು
ಈ ಹಿಂದೆ ಘೋಷಣೆಯಾಗಿದ್ದ ರಿಸರ್ವ್ ಟಿಕೆಟ್ ಪ್ರಯಾಣಿಕರಿಗೆ ಬರ್ತ್ ಸೌಲಭ್ಯ ವ್ಯವಸ್ಥೆಯನ್ನು 2020ರೊಳಗೆ ಶೇ.100 ರಷ್ಟು ಕಲ್ಪಿಸುವುದು.
ಸರಕು ರೈಲುಗಳ ವೇಗವನ್ನು 50 ಕಿ.ಮೀಗೆ ಮತ್ತು ಮೇಲ್ ಎಕ್ಸ್ ಪ್ರೆಸ್ ರೈಲುಗಳ ವೇಗವನ್ನು 80ಕಿ.ಮೀ ಗೆ ಹೆಚ್ಚಿಸುವುದು.
ವ್ಯವಸಾಯ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಧಿಸುವ ರೇಲ್ವೇ ಮಾರ್ಗಗಳಲ್ಲಿ ಸೆಮಿ ಹೈಸ್ಪೀಡ್ ರೈಲು ವ್ಯವಸ್ಥೆ.
ಇನ್ನು ಪ್ರಯಾಣಿಕರು ತಮಗೆ ಬೇಕೆಂದಾಗ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸುವುದು.
ರೈಲ್ವೇ ಟಾಯ್ಲೆಟ್ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ಪರಿಷ್ಕರಿಸಲು 2020ರೊಳಗೆ ಪ್ರತೀ ರೈಲಿನಲ್ಲೂ ಬಯೋ ಟಾಯ್ಲೆಟ್ ವ್ಯವಸ್ಥೆ ಅಳವಡಿಸುವುದು.
ಇನ್ನು ನಿಗದಿತ ಸಮಯದಲ್ಲಿ ರೈಲು ಬಾರದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುರೇಶ್ ಪ್ರಭುವ ಅವರು ನಿಗದಿತ ಸಮಯದಲ್ಲಿ ರೈಲುಗಳ ವ್ಯವಸ್ಥೆ ಮಾಡಲು ತಮ್ಮ ಮಿಷನ್ 2020ಯಲ್ಲಿ ಕ್ರಮ ಕೈಗೊಂಡಿದ್ದಾರೆ.
ರೈಲ್ವೇ ಅಪಘಾತಗಳು ನಿಯಂತ್ರಣಕ್ಕಾಗಿ ಮಾನವ ರಹಿತ ರೈಲ್ವೇ ಕ್ರಾಸಿಂಗ್ ವ್ಯವಸ್ಥೆ ನಿರ್ಮಾಣ, 2020ರ ವೇಳೆಗೆ ಮಾನವ ಸಹಿತ ರೈಲ್ವೇ ಕ್ರಾಸಿಂಗ್ ವ್ಯವಸ್ಥೆ ರದ್ದು
ಈ ಹಿಂದೆ ಘೋಷಣೆಯಾಗಿದ್ದ ಎಲ್ಲ ರೈಲ್ವೇ ಹಳಿ ವಿಸ್ತರಣೆ ಯೋಜನೆಯನ್ನು 2020ರೊಳಗೆ ಪೂರ್ಣಗೊಳಿಸುವುದು ಮಿಷನ್ 2020ಯ ಪ್ರಮುಖ ಗುರಿಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT