ನವದೆಹಲಿ: ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಪ್ರಯಾಣಿಕರ ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಪಾಡಲಾಗಿದೆ.
ಸಂಸತ್ತಿನಲ್ಲಿ ಇಂದು ಮಂಡಿಸಿದ ರೈಲ್ವೆ ಬಜೆಟ್ ನಲ್ಲಿ ಸಚಿವ ಸುರೇಶ್ ಪ್ರಭು ಪ್ರಯಾಣಿಕರ ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಆದರೆ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಸೀಟುಗಳ ಮೀಸಲಾತಿ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
ಪ್ರತಿಯೊಬ್ಬ ಪ್ರಯಾಣಿಕರು ನಮ್ಮ ರಾಯಭಾರಿಗಳು ಎಂದು ವ್ಯಾಖ್ಯಾನಿಸಿದ ಸಚಿವ ಸುರೇಶ್ ಪ್ರಭು, ತಮ್ಮ ಇಲಾಖೆಯು ಮೂರು ಮುಖ್ಯ ಅಂಶಗಳನ್ನು ಪರಿಗಣಿಸುತ್ತದೆ. ಅವುಗಳೆಂದರೆ ಪ್ರಯಾಣಿಕರ ಹೆಮ್ಮೆ, ರೈಲ್ವೆಯ ವೇಗ ಮತ್ತು ದೇಶದ ಪ್ರಗತಿ ಎಂದರು.