ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಂಡಿಸಿದ 2016 -17ರ ರೈಲ್ವೆ ಬಜೆಟ್‌ನಲ್ಲಿ ದೀರ್ಘ ದೂರ ಪ್ರಯಾಣಿಕರಿಗಾಗಿ ಹೆಚ್ಚುವರಿ ಎರಡು ಬೋಗಿಗಳನ್ನು ಸೇರಿಸಲು ನಿರ್ಧರಿಸಲಾಗಿದೆ.
ಆ ಬೋಗಿಗಳಿಗೆ ದೀನ್ ದಯಾಳ್ ಕೋಚ್ ಎಂದು ಹೆಸರಿಡಲಾಗಿದೆ. ಈ ಬೋಗಿಗಳನ್ನು ಕಾಯ್ದಿರಿಸಬೇಕಾಗಿಲ್ಲ. ಇದರಲ್ಲಿ ಪ್ರಯಾಣಿಕರಿಗೆ ಮೊಬೈಲ್ ಫೋನ್ ಚಾರ್ಜ್ ಮಾಡಲು ಚಾರ್ಜಿಂಗ್ ಪಾಯಿಂಟ್‌ಗಳ ಸೌಕರ್ಯವನ್ನೂ ಒದಗಿಸಲಾಗುತ್ತದೆ. ರಿಸರ್ವೇಶನ್ ಮಾಡದೆ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಅಂತ್ಯೋದಯ್ ಎಕ್ಸ್‌ಪ್ರೆಸ್ ಎಂಬ ಹೊಸ ಸೂಪರ್ ಫಾಸ್ಟ್ ರೈಲಿಗೆ ಬಜೆಟ್‌ನಲ್ಲಿ ಅನುಮತಿ ನೀಡಲಾಗಿದೆ.
ರಿಸರ್ವ್ ಮಾಡಿ ಯಾತ್ರೆ ಮಾಡುವವರಿಗೆ ಹಂಸಫರ್, ಅತಿ ವೇಗದಲ್ಲಿ ದೀರ್ಘ ದೂರ ಪ್ರಯಾಣಿಸುವವರಿಗೆ 130 ಕಿಮೀ ವೇಗದಲ್ಲಿ ಓಡುವ ತೇಜಸ್, ರಾತ್ರಿ ಪ್ರಯಾಣಿಕರಿಗೆ ಡಬಲ್ ಡೆಕರ್ ಸೇವೆ ಕಲ್ಪಿಸುವ ಉದಯ್ ರೈಲುಗಳ ಸೇವೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.