ನವದೆಹಲಿ: ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಸೇವೆಗಳಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಿದ್ದಾರೆ. ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಹೆಚ್ಚಿನ ನಿಲ್ದಾಣಗಳನ್ನು ಟೆಕ್ ಸ್ನೇಹಿ ನಿಲ್ದಾಣಗಳನ್ನಾಗಿ ಮಾಡಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ.
- 2000 ನಿಲ್ದಾಣಗಳಲ್ಲಿ ಲೈವ್ ಅಪ್‌ಡೇಟ್ ಲಭಿಸುವಂತೆ ಮಾಡಲು 20,000 ಡಿಸ್‌ಪ್ಲೇ ಸ್ಕ್ರೀನ್‌ಗಳು
- 100 ರೈಲ್ವೇ ನಿಲ್ದಾಣಗಳಲ್ಲಿ ಈ ವರ್ಷವೇ ವೈಫೈ ಸೌಲಭ್ಯ, 400 ನಿಲ್ದಾಣಗಳಲ್ಲಿ ಮುಂದಿನ ವರ್ಷ ವೈಫೈ ಸೌಲಭ್ಯ
- 1780 ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಷಿನ್
- ಟಿಕೆಟ್‌ಗಳಿಗೆ ಬಾರ್‌ಕೋಡ್
- ಎಲ್ಲ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ
- ಟಿಕೆಟ್‌ಗಾಗಿ ಮೊಬೈಲ್ ಆ್ಯಪ್
- ದೂರು ನೀಡುವುದಕ್ಕೆ ಸಹಾಯವಾಗುವ ಮೊಬೈಲ್ ಆ್ಯಪ್
- ರೈಲು ಸಮಯದ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ಎಸ್ಸೆಮ್ಮೆಸ್ ಅಲರ್ಟ್ ಸೌಕರ್ಯ
- ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ಹೊತ್ತಲೇ ಆಹಾರಕ್ಕೆ ಆರ್ಡರ್ ಮಾಡುವ ವ್ಯವಸ್ಥೆ
- ಮೊಬೈಲ್‌ನಲ್ಲಿ 139 ಸಂಖ್ಯೆ ಡಯಲ್ ಮಾಡಿ ಟಿಕೆಟ್ ರದ್ದು ಮಾಡುವ ವ್ಯವಸ್ಥೆ
- ದಿವ್ಯಾಂಗ (ವಿಕಲಾಂಗ)ರಿಗಾಗಿ ಬ್ಯಾಟರಿಯಿಂದ ಚಲಿಸುವ ಕಾರು ಮತ್ತು ಪೋರ್ಟರ್ ಸೇವೆ ಬುಕ್ ಮಾಡುವ ಸೌಲಭ್ಯ
- ಪತ್ರಕರ್ತರಿಗೆ ಇ ಬುಕಿಂಗ್ ಮೂಲಕ ಟಿಕೆಟ್
- ರೈಲುಗಳಲ್ಲಿ ಎಫ್ ಎಂ ರೇಡಿಯೋ
- ಇಲ್ಲಿಯವರೆಗೆ 40 ನಿಲ್ದಾಣಗಳಲ್ಲಿ ಇ ಕ್ಯಾಟರಿಂಗ್ ಸೇವೆ ಇತ್ತು, ಇನ್ಮುಂದೆ 408 ನಿಲ್ದಾಣಗಳಲ್ಲಿ ಈ ಸೇವೆಯನ್ನು ನೀಡಲು ನಿರ್ಧಾರ.
- ಎಲ್ಲ ಬೋಗಿಗಳಲ್ಲಿ ಜಿಪಿಎಸ್ ಸಿಸ್ಟಂ
- ಎಸ್‌ಎಂಎಸ್ ಮೂಲಕ ಪ್ರಯಾಣಿಕರಿಗೆ ಸಹಾಯ ಮಾಡುವ ಕ್ಲೀನ್ ಮೈ ಕೋಚ್ ಸೇನೊ. ರೈಲಿನಲ್ಲಿ ಸುರಕ್ಷತೆಗಾಗಿ ಅಲರಾಂ ವ್ಯವಸ್ಥೆ ಕಲ್ಪಿಸುವ ವೈರ್‌ಲೆಸ್ ಎನೇಬಲ್ಡ್ ರಕ್ಷಕ್ ಡಿವೈಸ್ ಅಳವಡಿಕೆ
- 182 ಡಯಲ್ ಮಾಡುವ ಮೂಲಕ ದೂರು ದಾಖಲಿಸುವ ವ್ಯವಸ್ಥೆ, ಡಿಜಿಟಲ್ ಇಂಡಿಯಾ ಸಹಯೋಗದೊಂದಿಗೆ ರೈಲ್ವೇ ಸಚಿವಾಲಯದಿಂದ ಸಹಾಯ ವ್ಯವಸ್ಥೆ