ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17 ಸಾಲಿನ ಆಯವ್ಯಯ ಪತ್ರದಲ್ಲಿ ಬೆಂಗಳೂರು ನಗರಕ್ಕೆ ಏನು, ಎಷ್ಟು ದೊರೆಯಿತು ಎಂಬುದರ ಮಾಹಿತಿ ಇಲ್ಲಿದೆ.
- ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ ರು. ಅನುದಾನ
- ಬೆಂಗಳೂರಿನಲ್ಲಿ 51.56 ಕಿಲೋ ಮೀಟರ್ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ.
- ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ.
- ಬಿಎಂಟಿಸಿಗೆ 660 ಬಸ್ ಖರೀದಿಗೆ ನಿರ್ಧಾರ. 3 ಹೊಸ ಬೆಂಗಳೂರು ಒನ್ ಸ್ಥಾಪನೆ.
- ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 8 ಕೋಟಿ
- ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ರು. 100 ಕೋಟಿ
- ಘನ ತ್ಯಾಜ್ಯ ನಿರ್ವಹಣೆಗೆ ರು. 500 ಕೋಟಿ
- ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ
- ಬೆಂಗಳೂರಿನಲ್ಲಿ ಬಡವರಿಗಾಗಿ 3 ಸಾವಿರ ಬಿಡಿಎ ನಿವೇಶನ ಸ್ಥಾಪನೆ
- 2016-17ನೇ ಸಾಲಿನಲ್ಲಿ ಬಿಡಿಎನಿಂದ 3 ಸಾವಿರ ಹೊಸ ಫ್ಲಾಟ್ ಗಳ ನಿರ್ಮಾಣ.
- 2017ರೊಳಗೆ ಕೆಂಪೇಗೌಡ ಬಡಾವಣೆಯ 10 ಸಾವಿರ ನಿವೇಶನಗಳ ಹಂಚಿಕೆ.
- ದಕ್ಷಿಣ ಪಿನಾಕಿನಿ ನದಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸಲು ಕ್ರಮ
- ನಿವೇಶನ ರಹಿತ ಬಡ ಫಲಾನುಭವಿಗಳಿಗೆ ಸೈಟ್.
- ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ನಿವೇಶನ ಹಂಚಿಕೆ.
- ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಕ್ರಮ
- ವಾಹನ ಸಂಚಾರ ಸುಗಮಗೊಳಿಸಲು 100 ಕಿ.ಮೀ ಉದ್ದದ ಸುಮಾರು ರು.18,000 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳ ಜಂಕ್ಷನ್, ಕೆಆರ್ ಪುರಂ ನಿಂದ ತುಮಕೂರು ರಸ್ತೆ ಮತ್ತು ವರ್ತೂರು ಕೋಡಿಯಿಂದ ಮೈಸೂರು ರಸ್ತೆ
- ರು.797 ಕೋಟಿ ವೆಚ್ಚದಲ್ಲಿ ವಾರ್ಡ್ ಮಟ್ಟದ ರಸ್ತೆಗಳ ಕಾಮಗಾರಿ
- ಬೆಂಗಳೂರಿನಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿಗೆ 1ಕೋಟಿ .