ಕೇಂದ್ರ ಬಜೆಟ್

ಬಜೆಟ್ ಮಂಡನೆ ನಡುವೆ ಏರಿಕೆಯಲ್ಲಿ ಷೇರುಪೇಟೆ

Sumana Upadhyaya

ಮುಂಬೈ: ಸೋಮವಾರ ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಾಮಾನ್ಯ ಬಜೆಟ್ ಮಂಡಿಸುತ್ತಿದ್ದಂತೆ ಷೇರು ಮಾರುಕಟ್ಟೆ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಬೆಳಿಗ್ಗೆ 11.16 ರ ಹೊತ್ತಿಗೆ 46 ಅಂಕಗಳಷ್ಟು ಏರಿಕೆ ಕಂಡುಬಂದು 23 ಸಾವಿರದ 200ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 9 ಅಂಕಗಳಷ್ಟು ಏರಿಕೆ ಕಂಡು 7 ಸಾವಿರದ 38ರಲ್ಲಿ ವಹಿವಾಟು ನಡೆಸಿತು.

ಸಾರ್ವಜನಿಕ ವಲಯ ಬ್ಯಾಂಕುಗಳ ಷೇರುಗಳು ಕೂಡ ಲಾಭದತ್ತ ಸಾಗುತ್ತಿವೆ. ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲಿನ ಷೇರುಗಳು ಶೇಕಡಾ 4ರಷ್ಟು ಏರಿಕೆ ಕಂಡುಬಂದಿವೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಬಜೆಟ್ ಮಂಡಿಸುತ್ತಿರುವುದಾಗಿ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದರು.

ಕೃಷಿ ವಲಯದ ಕಂಪೆನಿಗಳ ಷೇರುಗಳು ಏರಿಕೆ ಕಂಡುಬಂದಿವೆ. ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡಲಾಗಿದೆ.

SCROLL FOR NEXT