ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2017ರಲ್ಲಿ ಆರೋಗ್ಯ ವಲಯಕ್ಕೆ ಹಂಚಿಕೆ

Sumana Upadhyaya
ನವದೆಹಲಿ: ಬುಧವಾರ ಮಂಡಿಸಲಾದ ಕೇಂದ್ರ ಬಜೆಟ್ ನಲ್ಲಿ ಆರೋಗ್ಯ ವಲಯದಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.
ಬಡ ಗರ್ಭಿಣಿ ಮಹಿಳೆಯರಿಗೆ 6,000 ರೂಪಾಯಿ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯಾಭಿವೃದ್ಧಿಗೆ 1,84,632 ಕೋಟಿ ರೂಪಾಯಿ ಮೀಸಲಿಡಲಾಗಿದೆ.
2025ರ ವೇಳೆಗೆ ಕ್ಷಯರೋಗವನ್ನು ದೇಶದಿಂದ ನಿರ್ಮೂಲನ ಮಾಡುವ ಗುರಿ ಹೊಂದಲಾಗಿದೆ. ದೇಶಾದ್ಯಂತವಿರುವ 1.5 ಲಕ್ಷ ಆರೋಗ್ಯ ಉಪ ವಲಯಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳಾಗಿ ಬದಲಾವಣೆ ಮಾಡಲಾಗುತ್ತದೆ.
ಹಿರಿಯ ನಾಗರಿಕರ ಆರೋಗ್ಯ ನೋಡಿಕೊಳ್ಳಲು ಆಧಾರ್ ಆಧಾರಿತ ಸ್ಮಾರ್ಟ್ ಕಾರ್ಡುಗಳನ್ನು ನೀಡಲಾಗುತ್ತದೆ.
SCROLL FOR NEXT