ಕೇಂದ್ರ ಬಜೆಟ್

ಡಿಜಿಟಲ್ ಪಾವತಿ ಉತ್ತೇಜನಕ್ಕೆ ಆಧಾರ್ ಆಧಾರಿತ ವ್ಯವಸ್ಥೆ ಜಾರಿ: ಜೇಟ್ಲಿ

Srinivas Rao BV

ನವದೆಹಲಿ: ಡಿಜಿಟಲ್ ಆರ್ಥಿಕತೆ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ, ಕಪ್ಪುಹಣ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿದ್ದು, ಸರ್ಕಾರ ಶೀಘ್ರವೇ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

ಫೆ.1 ರಂದು ಬಜೆಟ್ ಮಂಡಿಸಿರುವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಆಧಾರ್ ಕಾರ್ಡ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಿದ್ದು, ಈ ವ್ಯವಸ್ಥೆ ಮೊಬೈಲ್ ವ್ಯಾಲೆಟ್, ಡೆಬಿಟ್ ಕಾರ್ಡ್ ಇಲ್ಲದೇ ಇರುವವರಿಗೆ ನಗದು ರಹಿತ ವಹಿವಾಟು ನಡೆಸುವುದಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. 
ಬಜೆಟ್ ವ್ಯವಸ್ಥೆಯೊಂದಿಗೆ ಆರ್ಥಿಕ ವ್ಯವಸ್ಥೆಯನ್ನು ಒಟ್ಟುಗೂಡಿಸಲು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಕಾರ್ಯತಂತ್ರದಲ್ಲಿ ಒಂದಾಗಿದೆ. ನಗದು ರಹಿತ ವಹಿವಾಟುಗಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಭೀಮ್ ಆಪ್ ನ್ನು ಈ ವರೆಗೂ 125 ಲಕ್ಷ ಜನರು ಡೌನ್ ಲೋಡ್ ಮಾಡಿದ್ದಾರೆ. ಭೀಮ್ ಆಪ್ ನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಎರಡು ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
2017-18 ಆರ್ಥಿಕ ವರ್ಷದಲ್ಲಿ  2,500 ಕೋಟಿ ಜನರನ್ನು ನಗದು ರಹಿತ ವಹಿವಾಟು ವ್ಯವಸ್ಥೆಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಗುರಿ ಹೊಂದಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. 
SCROLL FOR NEXT