ಬಜೆಟ್ ಮಂಡನೆಗೆ ಸಂಸತ್ತಿಗೆ ಆಗಮಿಸುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಾದ ಜೆಇಇ, ಎನ್ಇಇಟಿ, ಎನ್ಇಟಿ ಮತ್ತು ಇತರ ಪ್ರತಿಷ್ಟಿತ ಪರೀಕ್ಷೆಗಳಿಗೆ ಏಕ ಪ್ರಾಧಿಕಾರ ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಎಲ್ಲಾ ಪ್ರವೇಶ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯನ್ನು ಸ್ಥಾಪಸಲಾಗುವುದು ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ಹಲವು ಕ್ರಮಗಳನ್ನು ಪ್ರಕಟಿಸಿದ ಅರುಣ್ ಜೇಟ್ಲಿ, ಯುಜಿಸಿಯಲ್ಲಿ ಹಲವು ಹಲವು ಸುಧಾರಣೆಗಳನ್ನು ಮಾಡಲಾಗುವುದು, ಕಾಲೇಜು ಮತ್ತು ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗುವುದು ಎಂದರು.
ಶಾಲೆಗಳಲ್ಲಿ ವಾರ್ಷಿಕ ಕಲಿಕೆ ಫಲಿತಾಂಶಕ್ಕೆ ಮತ್ತು ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ನಾವೀನ್ಯ ನಿಧಿಯನ್ನು ಸ್ಛಾಪಿಸಲಿದೆ.
ಬಜೆಟ್ ನಲ್ಲಿ ಶಿಕ್ಷಣ ವಲಯದಲ್ಲಿ ಪ್ರಮುಖ ಅಂಶವೆಂದರೆ 350 ಆನ್ ಲೈನ್ ಕೋರ್ಸ್ ಗಳ ಜಾರಿ ಮತ್ತು ಬಟ್ಟೆ ಮತ್ತು ಪ್ರವಾಸೋದ್ಯಮ ವಲಯಗಳಲ್ಲಿ ಉದ್ಯೋಗಾವಕಾಶಗಳು.
ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಉತ್ತಮ ಗುಣಮಟ್ಟದ ಸಂಸ್ಥೆಗಳು, ಬಟ್ಟೆ ವಲಯದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಯುವಕರ ಸಾಮರ್ಥ್ಯಗಳನ್ನು ಗುರುತಿಸುವುದು, ಸ್ವಯಂ ಶಿಕ್ಷಣ ಆನ್ ಲೈನ್ ಪೋರ್ಟಲ್ ಗಳನ್ನು ಬಳಸುವುದು, ಹೊರ ದೇಶಗಳಲ್ಲಿ ಉದ್ಯೋಗ ಬಯಸುವ ಯುವಕರಿಗೆ ದೇಶಾದ್ಯಂತ 100 ಭಾರತ ಅಂತಾರಾಷ್ಟ್ರೀಯ ಕೇಂದ್ರಗಳ ಸ್ಥಾಪನೆಯನ್ನು ಜೇಟ್ಲಿ ತಮ್ಮ ಬಜೆಟ್ ನಲ್ಲಿ ಘೋಷಿಸಿದ್ದಾರೆ.ಮಾರುಕಟ್ಟೆ ಸಂಬಂಧಿಸಿದ ವ್ಯಾಪಾರ ವೆಬ್ಸೈಟ್ ಸಂಕಲ್ಪ್ ಆರಂಭವಾಗಿದೆ. ವೃತ್ತಿಪರ ತರಬೇತಿಗೆ ಗುಣಮಟ್ಟ ಮತ್ತು ಮಾರುಕಟ್ಟೆ ಪ್ರಸ್ತುತತೆ, ಸಿಬಿಎಸ್ ಇ ಸಿಲೆಬಸ್ ಗಳಲ್ಲಿ ಪರೀಕ್ಷೆಗಳಿಗಿಂತ ಶೈಕ್ಷಣಿಕತೆಗೆ ಹೆಚ್ಚಿನ ಆದ್ಯತೆ, ಕೌಶಲ್ಯಾಭಿವೃದ್ಧಿಗೆ ಬಜೆಟ್ ನಲ್ಲಿ 2,200 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಪ್ರಮುಖ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ, ಯುಜಿಸಿ ಮರುಸ್ಥಾಪನೆ ಮಾಡಲಾಗುವುದು ಎಂದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಾರ್ಖಂಡ್ ಮತ್ತು ಗುಜರಾತ್ ನಲ್ಲಿ ಎರಡು ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos