ನವದೆಹಲಿ: ಫೆ.1 ರಂದು 2017-18 ನೇ ಸಾಲಿನ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದ್ದು, ರೈತರ ಆದಾಯ ಭದ್ರತೆ ಘೋಷಿಸಿದ್ದಾರೆ. ರೈತರಿಗೆ ಸಾಲ ನೀಡುವುದಕ್ಕಾಗಿ 10 ಲಕ್ಷ ಕೋಟಿ ರೂಪಾಯಿಯನ್ನು ನೀಡಲಾಗಿದ್ದು, ಕೃಷಿಕ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಬಜೆಟ್ ನ ಘೋಷಣೆಯ ಪ್ರಮುಖಾಂಶ
- ಗ್ರಾಮೀಣ, ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಕಳೆದ ಬಜೆಟ್ ಗಿಂತ ಶೇ 24 ರಷ್ಟು ಹೆಚ್ಚು ಅನುದಾನ ಘೋಷಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 187223 ಕೋಟಿ ರೂಪಾಯಿಗಳ ಅನುದಾನ ಘೋಷಣೆ.
- ರೈತರ ಸಾಲದ ಮೇಲೆ 60 ದಿನಗಳ ಬಡ್ಡಿ ವಿನಾಯಿತಿ
- ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಿನಿ ಲ್ಯಾಬ್, ರೈತರ ಅಭಿವೃದ್ಧಿಗಾಗಿ ಮಣ್ಣಿನ ಕಾರ್ಡ್
- ಬೆಳೆ ವಿಮೆಗಾಗಿ 9 ಸಾವಿರ ಕೋಟಿ ರೂಪಾಯಿ ಘೋಷಣೆ. ಹಾಲು ಉತ್ಪಾದನೆಗೆ 8 ಸಾವಿರ ಕೋಟಿ ರೂ ನಿಧಿ ಸ್ಥಾಪನೆ
- ನಿರಾವರಿಗಾಗಿ ದೀರ್ಘಾವಧಿ ಯೋಜನೆ, 20 ಸಾವಿರ ಕೋಟಿ ಮೀಸಲು
- ಫಸಲು ಭೀಮ ಯೋಜನೆಗೆ 9 ಸಾವಿರ ಕೋಟಿ, ಅನುದಾನ ಶೇ.30 ರಿಂದ 40 ಕ್ಕೆ ಏರಿಕೆ
- ಪ್ರಾರಂಭಿಕ ಅನುದಾನ 500 ಕೋಟಿ ಮೂಲಕ ನೀರಾವರಿಗಾಗಿ ನಬಾರ್ಡ್ ನಲ್ಲಿ ನಿಧಿ ಸ್ಥಾಪನೆ,
- ಸಣ್ಣ ನೀರಾವರಿಗೆ ನಬಾರ್ಡ್ ನಿಂದ 5 ಕೋಟಿ
- 28 ಸಾವಿರ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ
- ಸಾಲ ನೀಡಿಕೆಯಲ್ಲಿ ಸರಳೀಕರಣ, ನಬಾರ್ಡ್ ಅಡಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿ ಸಂಸ್ಕರಣಾ ಘಟಕಗಳಿಗೆ ಅನುದಾನ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಘೋಷಿಸಿರುವ ಪ್ರಮುಖ ಅಂಶಗಳಾಗಿವೆ.