ರಾಜ್ಯ ಬಜೆಟ್ ಆರಂಭ; 2018-19ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ ಬಜೆಟ್

ರಾಜ್ಯ ಬಜೆಟ್ ಆರಂಭ; 2018-19ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಕುರಿತು ಭಾಷಣೆ ಮಾಡುತ್ತಿದ್ದಾರೆ...

ಬೆಂಗಳೂರು: 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಕುರಿತು ಭಾಷಣೆ ಮಾಡುತ್ತಿದ್ದಾರೆ. 
ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ 6ನೇ ಹಾಗೂ ಹಣಕಾಸು ಸಚಿವರಾಗಿ 13ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 
ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಜೆಡ್ ಮಂಡಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. 

ಫೆಬ್ರವರಿ 16ನೇ ದಿನದಂದು ರಾಜ್ಯದ 98ನೇ ಹಾಗೂ ನನ್ನ 13ನೇ ಬಜೆಟ್ ಮಂಡಿಸುತ್ತಿರುವ ಈ ಸಮಯದಲ್ಲಿ ನನ್ನ ಮೊದಲ ಬಜೆಟ್ ಮಂಡನೆ ನೆನಪಾಗುತ್ತಿದೆ. 

ನಾನು ಮೊದಲನೇ ಬಜೆಟ್ ಮಂಡನೆ ಮಾಡಿದ್ದು, 1994ರಲ್ಲಿ. ಅಂದು ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಹೊಸದಾಗಿ ಹಣಕಾಸು ಸಚಿವನಾಗಿದ್ದೆ. ಸ್ವಲ್ಪ ಅಂಜಿಕೆಯಿತ್ತು. ಏಕೆಂದರೆ ನಾನು ಅರ್ಥಶಾಸ್ತ್ರ ಓದಿದವನಲ್ಲ. ಆದರೆ ಅರ್ಥಶಾಸ್ತ್ರಜ್ಞರ ಜೊತೆಗೆ ಚರ್ಚೆ ನಡೆಸಿ, ತಿಳಿದುಕೊಂಡಿದ್ದೆ. ಬಳಿಕ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು. ನನ್ನ ಅಷ್ಟೆಲ್ಲಾ ತಯಾರಿ ಮೊದಲನೇ ಬಜೆಟ್ ಪ್ರಶಂಸೆಗೂ ಒಳಗಾಗಿತ್ತು. 

ಮೊದಲನೇ ಬಜೆಟ್ ಮಂಡನೆ ಸಂದರ್ಭದಲ್ಲಿ ಕೆಲವರು ನನ್ನನ್ನು ಅಪಹಾಸ್ಯ ಮಾಡಿದ್ದರು. ಸಿದ್ದರಾಮಯ್ಯ ಅವರಿಗೆ 100 ಕುರಿ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ. ಇಂತಹವರು ಹಣಕಾಸು ಮತ್ರಿ ಮಾಡಿ ತಪ್ಪು ಮಾಡಿದ್ದಾರೆಂದು ಹೇಳಿದ್ದರು. 

ಅಂತಹ ಅಪಹಾಸ್ಯಗಳಿಗೆ ನನ್ನ ಈವರೆಗಿನ 12 ಬಜೆಟ್ ಗಳೇ ಉತ್ತರವಾಗಿದೆ. ಮೊದಲಿದ್ದ ಅಂಜಿಕೆ ಈಗಿಲ್ಲ. ಯಾವುದೇ ಆತಂಕವಿಲ್ಲದೆ ಆರಾಮವಾಗಿ ಬಜೆಟ್ ತಯಾರಿ ಮಾಡಿಕೊಂಡು ಮಂಡನೆ ಮಾಡುತ್ತಿದ್ದೇನೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 19 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ; ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ WTC ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!

ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?, ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ

2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ: ಮಳೆಕಾಟದಿಂದ 4ನೇ ದಿನದಾಟ ಬೇಗನೇ ಅಂತ್ಯ