ಕರ್ನಾಟಕ ಬಜೆಟ್

ರೈತರ ಸಾಲಮನ್ನಾ; ಮಾರ್ಚ್ 2020ರ ಗಡುವು ವಿಧಿಸಿದ ಸಿಎಂ ಕುಮಾರಸ್ವಾಮಿ

Sumana Upadhyaya

ಬೆಂಗಳೂರು: ರಾಜ್ಯದ ರೈತರ ಬಹುನಿರೀಕ್ಷಿತ ಸಾಲಮನ್ನಾ ಪ್ರಕ್ರಿಯೆ ಮುಂದಿನ ಹಣಕಾಸು ವರ್ಷಕ್ಕೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿಗಳು ನಿನ್ನೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವ ವೇಳೆ, ಜೂನ್ 2019ರ ವೇಳೆಗೆ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಪ್ರಕ್ರಿಯೆ ಕೊನೆಗೊಳ್ಳಲಿದೆ. ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾ 2019-20ರ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಸರ್ಕಾರದಿಂದ ಸಿಗುವ ಸಾಲಮನ್ನಾ ಫಲಾನುಭವಿಗಳ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ ಅವರು, ಸಾಲಮನ್ನಾ ಘೋಷಣೆ ಮಾಡಿದ ನಂತರ 6,500 ಕೋಟಿ ರೂಪಾಯಿ ಸಾಲಮನ್ನಾ ಎಂದು ಲೆಕ್ಕ ಹಾಕಲಾಗಿದ್ದು ಅವುಗಳಲ್ಲಿ 2,850 ಕೋಟಿ ರೂಪಾಯಿಗಳನ್ನು 6 ಲಕ್ಷ ರೈತರ ಸಾಲಮನ್ನಾಗೆ ಬಿಡುಗಡೆ ಮಾಡಲಾಗಿದೆ. ಇಡೀ ಬಜೆಟ್ ನ 2,600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು ಇದರಿಂದ 5.97 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದರು.

ಸುಮಾರು 20 ಲಕ್ಷ ರೈತರ ಸಾಲ ಖಾತೆಗಳು ವಿವಿಧ ವಾಣಿಜ್ಯ ಬ್ಯಾಂಕುಗಳು ಮತ್ತು ಸ್ಥಳೀಯ ಗ್ರಾಮೀಣ ಬ್ಯಾಂಕುಗಳಲ್ಲಿದ್ದು ಸ್ವಘೋಷಿತ ಸರ್ಟಿಫಿಕೇಟ್ ಗಳನ್ನು ಸುಮಾರು 17 ಲಕ್ಷ ರೈತರು ಸಲ್ಲಿಸಿದ್ದಾರೆ. ಅದೇ ರೀತಿ 20 ಲಕ್ಷ ಖಾತೆಗಳಲ್ಲಿ 10 ಲಕ್ಷ ಸಾಲದ ಖಾತೆಗಳನ್ನು ಸಹಕಾರಿ ಬ್ಯಾಂಕುಗಳಿಂದ ಸಂಗ್ರಹಿಸಲಾಗಿದೆ ಎಂದರು.

ಸರ್ಕಾರದ ಸಾಲಮನ್ನಾ ಯೋಜನೆಯಡಿ ಸುಮಾರು 40 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

SCROLL FOR NEXT