ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ಆದಾಯ ತೆರಿಗೆ ಪಾವತಿದಾರರಿಗೆ ಸ್ವಲ್ಪ ನಿರಾಳ ತಂದಿದೆ.
ವಾರ್ಷಿಕವಾಗಿ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಯಾವುದೇ ಆದಾಯ ತೆರಿಗೆ ಇಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಜವಾಬ್ದಾರಿಯುತ ತೆರಿಗೆ ಪಾವತಿದಾರರಿಗೆ ಧನ್ಯವಾದ ಸಲ್ಲಿಸಿದ ನಿರ್ಮಲಾ ತೆರಿಗೆದಾರರೇ ದೇಶದ ಪ್ರಾಮಾಣಿಕರು ಎಂದು ಹೇಳಿದ್ದಾರೆ.
ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ್ದು, ಮುಖಾಮುಖಿ ಕಡ್ಡಾಯವಲ್ಲ, ಆನ್ ಲೈನ್ ನಲ್ಲಿ ಸಲ್ಲಿಸಿದರೇ ಸಾಕು, ಜಿಎಸ್ ಟಿಯಿಂದ 17ತೆರಿಗೆ ಮತ್ತು 30 ನೀತಿಗಳು ರದ್ದಾಗಿವೆ,
ವಾರ್ಷಿಕ 400 ಕೋಟಿ ಆದಾಯ ಹೊಂದಿರುವ ಉದ್ಯಮಕ್ಕೆ ಶೇ.25 ರಷ್ಟು ತೆರಿಗೆ ಘೋಷಿಸಲಾಗಿದೆ, ಜೊತೆಗೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಉದ್ದಿಮೆಗಳಿಗೆ ಶೇ,5 ರಷ್ಟು ಜಿಎಸ್ ಟಿ ಇಳಿಕೆ ಮಾಡಲಾಗಿದೆ.
ಆದಾಯ ತೆರಿಗೆ ಪಾವತಿಸಲು ಪಾನ್ ಕಾರ್ಡ್ ಕಡ್ಡಾಯ ನಮೂದಿಸಬೇಕಾದ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆದರೆ ಚಿನ್ನ, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು, ಚಿನ್ನದ ಮೇಲಿನ ಆಮದು ಸುಂಕ ಕೂಡ ಹೆಚ್ಚು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics