'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಹೋಗಿದ್ದ ಕುಟುಂಬ ವಾಪಸ್​ ಮನೆಗೆ ಬಂದಾಗ ಮನೆಯಲ್ಲಿ ಆಘಾತ ಎದುರಾಗಿತ್ತು.
Thief Caught Red-Handed in Devanahalli
ಸಿನಿಮಾ ವೀಕ್ಷಣೆಗೆ ತೆರಳಿದ್ದ ವೇಳೆ ಕಳ್ಳತನ
Updated on: 

ಬೆಂಗಳೂರು: ಇತ್ತೀಚೆಗೆ ತೆರೆಕಂಡು ಬ್ಲಾಕ್ ಬಸ್ಟರ್ ಆಗಿರುವ 'ಪ್ರೇಮದ ಊರಲಿ' ಚಿತ್ರದ ವೀಕ್ಷಣೆಗೆ ತೆರಳಿದ್ದ ಕುಟುಂಬವೊಂದಕ್ಕೆ ಭಾರಿ ಆಘಾತ ಎದುರಾಗಿದ್ದು, ಕಳ್ಳನೋರ್ವ ಮನೆಗೆ ನುಗ್ಗಿದ ಘಟನೆ ವರದಿಯಾಗಿದೆ.

ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆ ಮಂದಿ ಸಿನಿಮಾಗೆ ಹೋಗಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮ ಮನೆಗೆ ನುಗ್ಗಿ ಚಿನ್ನ ಕದಿದ್ದಾನೆ. ಆದರೆ ಚಿನ್ನ ದೋಚಿ ಎಸ್ಕೇಪ್ ಆಗುವಷ್ಟರಲ್ಲಿ ಮಾಲೀಕರು ಮನೆಗೆ ವಾಪಸ್ ಆಗಿದ್ದು, ಈ ವೇಳೆ ಕಳ್ಳ ಲಾಕ್ ಆಗಿದ್ದಾನೆ.

ಮನೆಗೆ ನುಗ್ಗಿದ ಕಳ್ಳ 130 ಗ್ರಾಂ ಚಿನ್ನ ಕಳವು ಮಾಡಿದ್ದು, ಕಳ್ಳನನ್ನು ಹಿಡಿದ ಕುಟುಂಬಸ್ಥರು ಹಾಗೂ ಮನೆ ಮಾಲೀಕ ಕೃಷ್ಣಪ್ಪ ಎಂಬುವವರ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಚಿತ್ತಿಲಪಲ್ಲಿ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಆತ ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದ. ಆರೋಪಿ ಅಜಯ್ ಓಲಾ, ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿ ಕಳ್ಳತನಕ್ಕೂ ಮುನ್ನ 2–3 ದಿನಗಳಿಂದ ಮನೆಯವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎನ್ನಲಾಗಿದೆ.

Thief Caught Red-Handed in Devanahalli
ದುರ್ಗಾಮಾತಾ ದೌಡ್ ದೇವಿ ಮೆರವಣಿಗೆ ಮೇಲೆ ಟ್ರಕ್ ಹರಿದು ಮೂವರು ಸಾವು; 10ಕ್ಕೂ ಹೆಚ್ಚು ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ!

ಸಿಕ್ಕಿಬಿದ್ದಿದ್ದೇ ರೋಚಕ

ಇತ್ತ ಕುಟುಂಬಸ್ಥರು ಮನೆಗೆ ವಾಪಸ್ ಆಗುತ್ತಿದ್ದಂತೆ ಅನುಮಾನ ಮೂಡಿದೆ. ಸಿನಿಮಾಗೆ ಹೋಗುವಾಗ ಹೊರಗಡೆಯಿಂದ ಲಾಕ್ ಆಗಿತ್ತು. ಆದರೆ ವಾಪಸ್ ಬಂದಾಗ ಒಳಗಡೆಗೆ ಹೇಗೆ ಲಾಕ್​ ಆಯಿತು ಎಂದು ಮನೆಯವರಿಗೆ ಅನುಮಾನ ಮೂಡಿದೆ.

ಹೀಗಾಗಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಆರೋಪಿ ಮನೆ ಒಳಗಡೆ ನುಗ್ಗಿದ್ದು, ಕಳ್ಳ ಹೊರಗಡೆ ಬಾರದಿರುವುದು ಗೊತ್ತಾಗಿದೆ. ಹೀಗಾಗೆ ಕೂಡಲೇ ಅಲರ್ಟ್ ಆದ ಕುಟುಂಬಸ್ಥರು, ಮನೆಯನ್ನ ಸುತ್ತುವರೆದು ಮನೆಯಲ್ಲಿದ್ದ ಕಳ್ಳನಿಗಾಗಿ ಶೋಧ ನಡೆಸಿದ್ದಾರೆ. ಕಳ್ಳ ಮನೆಯ ಕೋಣೆಯ ಮಂಚದ ಕೆಳಗಡೆ ಅವಿತಿರುವುದು ಗೊತ್ತಾಗಿದೆ. ಕೂಡಲೇ ಮನೆ ಮಂದಿ ಕಳ್ಳನನ್ನ ಸೆರೆಹಿಡಿದಿದ್ದಾರೆ.

ಪ್ರಸ್ತುತ ವಿಜಯಪುರ ಪೊಲೀಸರು ಆರೋಪಿ ಅಜಯ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com