'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನೂ ಪ್ರಸ್ತಾಪಿಸಿ ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
Actress Tanushree Dutta now blames Nana Patekar for Sushant Singh Rajput's death
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ
Updated on: 

ಮುಂಬೈ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಸಾವಿನ ಬಳಿಕ ನಿತ್ಯ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ಸುದ್ದಿಗೆ ಗ್ರಾಸವಾಗುತ್ತಿರುವ ನಟಿ ತನುಶ್ರೀ ದತ್ತಾ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ಅವರ ಹೆಸರು ಎಳೆದು ತಂದು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

IBC24ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತನುಶ್ರೀ, ಹಿರಿಯ ನಟ ನಾನಾ ಪಾಟೇಕರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನೂ ಪ್ರಸ್ತಾಪಿಸಿ ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅಂತೆಯೇ ಅನೇಕ ನೆಟ್ಟಿಗರು ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಾನಾ ಪಾಟೇಕರ್ ಅವರ ಸಾವಿನ ಕುರಿತು ತಮಗೆ ಅನುಮಾನವಿದೆ.. ಮೊದಲಿಗೆ ನಾನೇ ಸಂತ್ರಸ್ತೆ.. ನನ್ನನ್ನೇಕೆ ಖಳನಾಯಕಿಯಂತೆ ಬಿಂಬಿಸುತ್ತಿದ್ದೀರಿ? ಅವರ ಸಾವಿನ ಬಗ್ಗೆಯೂ ನನಗೆ ತೀವ್ರ ಅನುಮಾನ ಬರುತ್ತಿದೆ ಎಂದು ತನುಶ್ರೀ ಹೇಳಿದ್ದಾರೆ.

Actress Tanushree Dutta now blames Nana Patekar for Sushant Singh Rajput's death
'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ; Video

ಸುಶಾಂತ್ ಸಿಂಗ್ ಹೆಸರು ಪ್ರಸ್ತಾಪ

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ ತನುಶ್ರೀ, ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ. “ಈಗ ಸುಶಾಂತ್ ಮತ್ತು ದಿಶಾ ಸಾಲಿಯಾನ್ ಪ್ರಕರಣ ಮತ್ತೆ ತೆರೆದುಕೊಂಡಿದೆ.

ಹಲವು ದೊಡ್ಡ ವ್ಯಕ್ತಿಗಳ ಹೆಸರುಗಳು ಮುಚ್ಚಿಹೋಗಿವೆ. ಸಾಕಷ್ಟು ಸಾಕ್ಷ್ಯಗಳು ಬಂದಿರುವುದರಿಂದ ಕೆಲವರು ಜೈಲಿಗೆ ಹೋಗಬೇಕಾಗುತ್ತದೆ” ಎಂಬರ್ಥದಲ್ಲಿ ತನುಶ್ರೀ ಮಾತನಾಡಿದ್ದಾರೆ.

ಇದೇ ವೇಳೆ, ಸುಶಾಂತ್ ಸಾವಿನ ಬಳಿಕ ನಾನಾ ಪಾಟೇಕರ್ ಅವರು ಅವರ ಕುಟುಂಬವನ್ನು ಭೇಟಿಯಾಗಿದ್ದರು ಎಂಬ ವಿಚಾರವನ್ನೂ ತನುಶ್ರೀ ಉಲ್ಲೇಖಿಸಿದ್ದಾರೆ.

ದಿನಾಂಕದ ವಿಚಾರದಲ್ಲಿ ಎದ್ದ ಪ್ರಶ್ನೆ

ಸುಶಾಂತ್ ಸಿಂಗ್ ರಜಪೂತ್ ಅವರು 2020ರ ಜೂನ್ 14ರಂದು ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ನಾನಾ ಪಾಟೇಕರ್ ಅವರು ಅದೇ ತಿಂಗಳ ಜೂನ್ 28ರಂದು ಸುಶಾಂತ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

ಆದರೆ, ತನುಶ್ರೀ ಅವರ ಹೇಳಿಕೆಯಲ್ಲಿ ಈ ಭೇಟಿಯ ಸಂದರ್ಭ ಮತ್ತು ಸಮಯದ ಕುರಿತು ಗೊಂದಲವಿದೆ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯ ನಿಖರತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ.

ತನುಶ್ರೀ ವಿರುದ್ಧ ನೆಟ್ಟಿಗರ ಆಕ್ರೋಶ

ತನುಶ್ರೀ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ನಾನಾ ಪಾಟೇಕರ್ ಕುಟುಂಬವು ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದ್ದರೆ, ಇನ್ನು ಕೆಲವರು ಇಂತಹ ಹೇಳಿಕೆಗಳಿಗೆ ಮಾಧ್ಯಮಗಳು ಪ್ರಚಾರ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

“ಇಂತಹ ಆಧಾರರಹಿತ ಮಾತುಗಳಿಗಾಗಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಮತ್ತೊಬ್ಬರು, “ಇಂತಹ ಹೇಳಿಕೆಗಳಿಗೆ ಸಂದರ್ಶನ ನೀಡಿ ಪ್ರಚಾರ ನೀಡುವುದೇಕೆ? ಮೊದಲು ನಾನಾ ಪಾಟೇಕರ್ ಅವರು ಸುಶಾಂತ್ ಕುಟುಂಬವನ್ನು ಯಾವ ದಿನ ಭೇಟಿ ಮಾಡಿದ್ದರು ಎಂಬುದನ್ನು ಪರಿಶೀಲಿಸಿ” ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com