ಕೇಂದ್ರ ಬಜೆಟ್

ನಿರ್ಮಲಾ ಬಜೆಟ್: ಸದಸ್ಯರ ಸಂಯಮಕ್ಕೆ ಸ್ಪೀಕರ್ ಓಂ ಬಿರ್ಲಾ ಪ್ರಶಂಸೆ

Lingaraj Badiger
ನವದೆಹಲಿ: ಲೋಕಸಭೆಯ ಬಜೆಟ್ ಮಂಡನೆ ಸಮಯದಲ್ಲಿ ಸದಸ್ಯರು ತೋರಿದ ಸಂಯಮದ ವರ್ತನೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಪೂರ್ಣ ಪ್ರಮಾಣದ ಹಣಕಾಸು ಸಚಿವರು ಎಂದು ಹೇಳಿ ಅವರು ಮೆಚ್ಚುಗೆ ದಾಖಲಿಸಿದರು.
ಎಂ.ಎಸ್. ಸೀತಾರಾಮನ್ ಅವರ 135 ನಿಮಿಷಗಳ ಭಾಷಣವನ್ನು ಸದಸ್ಯರು ಗಂಭಿರವಾಗಿ ಆಲಿಸಿದ್ದಕ್ಕಾಗಿ ಲೋಕಸಭೆಯ ಹೊಸ ಸ್ಪೀಕರ್ ಒಂ ಬಿರ್ಲಾ ಅವರು ಧನ್ಯವಾದ ಅರ್ಪಿಸಿದರು.
ಬಜೆಟ್ ಪ್ರಸ್ತುತಿಯ ಸಮಯದಲ್ಲಿ ಕೆಲವು ಹಿಂದಿನ ಸಂದರ್ಭಗಳಲ್ಲಿ, ಪ್ರಾದೇಶಿಕ ಪಕ್ಷಗಳಿಂದ ವಿಶೇಷವಾಗಿ ಪ್ರತಿಪಕ್ಷದ ಸದಸ್ಯರು ಅಡ್ಡಿಪಡಿಸುತ್ತಿದ್ದರು. ಅದರೆ ಈ ಬಾರಿ ಸದಸ್ಯರು ತೋರಿಸಿದ ವರ್ತನೆ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಸ್ಪೀಕರ್ ಹೇಳಿದರು.
ಬಜೆಟ್ ಮಂಡಿಸಿದ ಮೊದಲ ಪೂರ್ಣ ಪ್ರಮಾಣದ ಮಹಿಳಾ ಹಣಕಾಸು ಸಚಿವರಾಗಿ, ಇದುವರೆಗಿನ ಬಜೆಟ್ ಮಂಡನೆಯ ಸಂಪ್ರದಾಯ ಮುರಿದು ಬ್ರೀಪ್ ಕೇಸ್‌ ಬದಲಿಗೆ ಕೆಂಪುಬಣ್ಣದ ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿ ಹಿಡಿದುಕೊಂಡು ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು.
ಅವರು ಸಮಾರು ಎರಡು ಗಂಟೆಗಳ ಕಾಲ ಭಾಷಣದಲ್ಲಿ ಉರ್ದು ಶಾಯಿರಿ, ಪ್ರಾಚೀನ ಭಾರತದ ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮ ಗಾಂಧಿ, ಚಾಣಕ್ಯ ಅವರ ಮಾತಗಳನ್ನು ಉಲ್ಲೇಖಿಸಿದರು.
SCROLL FOR NEXT